ಸಿಟ್ರೊಯೆನ್(Citroen ) ತನ್ನ ಮಧ್ಯಮ ಗಾತ್ರದ ಎಸ್ಯುವಿಯ ವಿಶೇಷ ಆವೃತ್ತಿಯನ್ನು ಪರಿಚಯಿಸಿದೆ, ಇದನ್ನು ಸಿ3 ಏರ್ ಕ್ರಾಸ್ ಧೋನಿ ಎಡಿಷನ್(C3 Aircross Dhoni Edition) ಎಂದು ಕರೆಯಲಾಗುತ್ತದೆ. ಈ ಆವೃತ್ತಿಯು ರೂ 11.82 ಲಕ್ಷದಿಂದ ಆರಂಭಗೊಂಡು, ವಿವಿಧ ಟ್ರಿಮ್ಗಳಲ್ಲಿ ಬರುತ್ತದೆ, ಈ ಕಾರು ಐದು ಮತ್ತು ಏಳು ಸೀಟ್ ಸೆಟಪ್ಗಳನ್ನು ಹೊಂದಿದೆ ಮತ್ತು ಇದು ಮಾನ್ಯುಯಲ್ ಹಾಗೂ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಗಳೊಂದಿಗೆ ಬರಲಿದೆ . ಈ ವಿಶೇಷ ಮಾದರಿಯು ಕೇವಲ 100 ಯುನಿಟ್ಗಳಿಗೆ ಸೀಮಿತವಾಗಿದೆ ಮತ್ತು ಸಾಮಾನ್ಯ ಸಿ3 ಏರ್ಕ್ರಾಸ್ಗೆ ಹೋಲಿಸಿದರೆ ಇಂಟೀರಿಯರ್ ಮತ್ತು ಎಕ್ಸ್ಪೀರಿಯರ್ ನಲ್ಲಿ ಸ್ವಲ್ಪ ನವೀಕರಣಗಳನ್ನು ಹೊಂದಿದೆ.
ಸಿ3 ಏರ್ ಕ್ರಾಸ್ ಧೋನಿ ಎಡಿಷನ್ ವೈಶಿಷ್ಟ್ಯಗಳು
ಸಿ3 ಏರ್ ಕ್ರಾಸ್ ಧೋನಿ ಎಡಿಷನ್(C3 Aircross Dhoni Edition) ಹೊರಭಾಗದಲ್ಲಿ ಧೋನಿ ಡೆಕಾಲ್ನೊಂದಿಗೆ ಬರುತ್ತದೆ. ಈ ವಿಶಿಷ್ಟ ಮಾದರಿಯು ಹೊಸ ರೀತಿಯ ಸೀಟ್ ಕವರ್ ಗಳು, ಲಿಟ್-ಅಪ್ ಡೋರ್ ಸೇಲ್ಸ್ ಮತ್ತು ಒಳಗೆ ಮುಂಭಾಗದ ಡ್ಯಾಶ್ಕ್ಯಾಮ್ ಅನ್ನು ಒಳಗೊಂಡಿದೆ. ಧೋನಿ ಆವೃತ್ತಿಯ ಹೊರಭಾಗದಲ್ಲಿ ಕ್ರಿಕೆಟಿಗನ ಹೆಸರು ಮತ್ತು ಅವನ ನೆಚ್ಚಿನ ಸಂಖ್ಯೆ 7 ರೊಂದಿಗೆ ಸೊಗಸಾದ ಡೆಕಾಲ್ ಅನ್ನು ಪ್ರದರ್ಶಿಸಲಾಗಿದೆ. , ಈ ಸೀಮಿತ ಆವೃತ್ತಿಯ ಮಾದರಿಯು ಬಣ್ಣಗಳಿಗೆ ಹೊಂದಿಕೆಯಾಗುವ ಹೊಸ ಸೀಟ್ ಕವರ್ ಗಳು, ಆರಾಮದಾಯಕವಾದ ಕುಶನ್ ದಿಂಬುಗಳು, ಸೀಟ್ ಬೆಲ್ಟ್ ಕುಶನ್ಗಳು, ಪ್ರಕಾಶಮಾನವಾದ ಡೋರ್ ಸಿಲ್ ಪ್ಲೇಟ್ಗಳು ಅನ್ನು ಹೊಂದಿದೆ.

ಈ C3 Aircross Dhoni Edition ಡ್ಯಾಶ್ಕ್ಯಾಮ್ ಹೊರತುಪಡಿಸಿ ಹೆಚ್ಚಿನ ವೈಶಿಷ್ಟ್ಯಗಳನ್ನು ಹೊಂದಿಲ್ಲ. 10.2-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ, ಮ್ಯಾನುಯಲ್ ಕ್ಲೈಮೇಟ್ ಕಂಟ್ರೋಲ್, 7-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ರಿಯರ್ ವ್ಯೂ ಕ್ಯಾಮೆರಾ, ಇಬಿಡಿಯೊಂದಿಗೆ ಎಬಿಎಸ್, ಹಿಲ್ ಸ್ಟಾರ್ಟ್ ಅಸಿಸ್ಟೆಂಟ್, ರಿಯರ್ ಪಾರ್ಕಿಂಗ್ ಸೆನ್ಸರ್‌ಗಳು, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ಅನ್ನು ಹೊಂದಿದೆ. ಇದಲ್ಲದೆ, ಪ್ರತಿ ಧೋನಿ ಆವೃತ್ತಿಯು ಎಡಿಷನ್ ವಿಭಾಗದೊಳಗೆ ವಿಶಿಷ್ಟವಾದ ‘ಧೋನಿ ಗುಡಿ(Dhoni goodie)’ ಯನ್ನು ಹೊಂದಿದೆ ಎಂದು ಸಿಟ್ರೊಯೆನ್ ಹೇಳಿದೆ. ಹೆಚ್ಚುವರಿಯಾಗಿ, ಧೋನಿ ಸಹಿ ಮಾಡಿದ ಹ್ಯಾಂಡ್ ಗ್ಲೌಸ್ ಸ್ವೀಕರಿಸಲು ಒಬ್ಬ ಅದೃಷ್ಟಶಾಲಿ ವ್ಯಕ್ತಿಯನ್ನು ಆಯ್ಕೆ ಮಾಡಲಾಗುತ್ತದೆ. ಈ ವಿಶೇಷ ವೈಶಿಷ್ಟ್ಯದ ಹೊರತಾಗಿ, ಧೋನಿ ಆವೃತ್ತಿಯು ಸಾಮಾನ್ಯ ಸಿ3 ಏರ್ಕ್ರಾಸ್ ನಂತೆ ಬರಲಿದೆ.
ಸಿಟ್ರೊಯೆನ್ ಇಂಡಿಯಾದ ಬ್ರಾಂಡ್ ನಿರ್ದೇಶಕ ಶಿಶಿರ್ ಮಿಶ್ರಾ ಅವರು ಹೊಸ ಬಿಡುಗಡೆಯ ಬಗ್ಗೆ ತಮ್ಮ ಉತ್ಸಾಹವನ್ನು ಹಂಚಿಕೊಂಡಿದ್ದು, ಸಿ3 ಏರ್ಕ್ರಾಸ್ನ ವಿಶೇಷ ‘ಧೋನಿ ಆವೃತ್ತಿ ಯನ್ನು ಪರಿಚಯಿಸಲು ನಾವು ಉತ್ಸುಕರಾಗಿದ್ದೇವೆ. ಇವುಗಳಲ್ಲಿ ಕೇವಲ 100 ಯೂನಿಟ್ ಮಾತ್ರ ತಯಾರಿಸಲ್ಪಡುತ್ತವೆ, ಆದ್ದರಿಂದ ಇದು ತುಂಬಾ ವಿಶೇಷವಾಗಿರುತ್ತದೆ. ಧೋನಿ, ನಮ್ಮ ರಾಯಭಾರಿ. ಬ್ರ್ಯಾಂಡ್ ಅಂಬಾಸಿಡರ್, ನಾಯಕತ್ವ ಮತ್ತು ಉತ್ಕೃಷ್ಟತೆಯನ್ನು ಒಳಗೊಂಡಿರುತ್ತದೆ, ಇದು ವಿಶ್ವ ದರ್ಜೆಯ ಅನುಭವವನ್ನು ಒದಗಿಸುವ ಸಿಟ್ರೊಯೆನ್‌ನ ಬದ್ಧತೆಗೆ ಅನುಗುಣವಾಗಿದೆ. ಈ ಸೀಮಿತ ಆವೃತ್ತಿಯು ಧೋನಿಯ ಅದ್ಭುತ ಕಥೆಗೆ ವಿಶೇಷ ಗೌರವವಾಗಿದೆ ಮತ್ತು ಅನನ್ಯ ಅವಕಾಶವನ್ನು ನೀಡುತ್ತದೆ ಎಂದು ಹೇಳಿದರು.
Citroen C3 Aircross Dhoni Edition ಎಂಜಿನ್
ಈ ಎಸ್ಯುವಿಯು 1.2-ಲೀಟರ್, ಮೂರು ಸಿಲಿಂಡರ್, ಟರ್ಬೋಚಾರ್ಜ್ಡ್ ಎಂಜಿನ್ ಹೊಂದಿದ್ದು, 110 Bh ಮತ್ತು 190 Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು ಮೊದಲು ಬಿಡುಗಡೆಯಾದ, ಈ ಎಸ್ಯುವಿ ಕೇವಲ 6-ಸ್ಪೀಡ್ ಮ್ಯಾನ್ಯುವಲ್ ಗೇರ್ಬಾಕ್ಸ್ ಅನ್ನು ಹೊಂದಿತ್ತು. ಆದಾಗ್ಯೂ, ಈ ವರ್ಷದ ಆರಂಭದಲ್ಲಿ, ಸಿಟ್ರೊಯೆನ್ 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಆಯ್ಕೆಯನ್ನು ಪರಿಚಯಗೊಳಿಸಿದೆ . ಮ್ಯಾನುವಲ್ ಮಾದರಿಗೆ ಹೋಲಿಸಿದರೆ ಆಟೋಮ್ಯಾಟಿಕ್ ಮಾದರಿಯು 15 Nm ಹೆಚ್ಚುವರಿ ಟಾರ್ಕ್ ಅನ್ನು ಒದಗಿಸುತ್ತದೆ.