Toyota: ಭಾರತದಲ್ಲಿ ಟೊಯೋಟಾ ಲ್ಯಾಂಡ್ ಕ್ರೂಸರ್ LC300 ಕಾರನ್ನು ಹಿಂಪಡೆಯಲು ಟೊಯೋಟಾ ನಿರ್ಧಾರ, ಕಾರಣವೇನು?

ಸಾಫ್ಟ್ವೇರ್ ಅನ್ನು ನವೀಕರಿಸುವವರೆಗೆ ಗ್ರಾಹಕರು ತಮ್ಮ SUV ಅನ್ನು ಬಳಸುವುದನ್ನು ಮುಂದುವರಿಸಬಹುದು ಎಂದು ಟೊಯೋಟಾ ಸ್ಪಷ್ಟಪಡಿಸಿದೆ.

ತನ್ನ ಗ್ರಾಹಕರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು, Toyota ಇಂಡಿಯಾ ಫೆಬ್ರವರಿ 12, 2021 ರಿಂದ ಫೆಬ್ರವರಿ 1, 2023ರ ಮಧ್ಯೆ ತಯಾರಾದ 269 ಯುನಿಟ್ ಲ್ಯಾಂಡ್ ಕ್ರೂಸರ್ 300 (Land Cruiser 300) ಯುನಿಟ್‌ಗಳನ್ನು ಹಿಂಪಡೆಯಲಾಗುತ್ತಿದೆ. ಅಧಿಕೃತ ಟೊಯೋಟಾ ಸೇವಾ ಕೇಂದ್ರಗಳಲ್ಲಿ ಈ ತಾಂತ್ರಿಕ ಸಮಸ್ಯೆಯನ್ನು ಉಚಿತವಾಗಿ ಸರಿಪಡಿಸಿ ಮಾಲೀಕರಿಗೆ ಕಾರುಗಳನ್ನು ಹಸ್ತಾಂತರಿಸಲಿದೆ ಎಂದು ವರದಿಯಾಗಿದೆ.

Land Cruiser 300 SUV ಕಾರಿನ ಆಟಿಮ್ಯಾಟಿಕ್ ಟ್ರಾನ್ಸ್ಮಿಷನ್ (automatic transmission) ಇಸಿಯು(ECU) ಸಾಫ್ಟ್ವೇರ್ ಅನ್ನು ಮರುಪ್ರೋಗ್ರಾಮ್ ಮಾಡಲು Toyota India ಸ್ವಯಂಪ್ರೇರಿತವಾಗಿ ಈ ನಿರ್ಧಾರವನ್ನು ಮಾಡಿದೆ ಎಂದು ತಿಳಿದುಬಂದಿದೆ. ಲ್ಯಾಂಡ್ ಕ್ರೂಸರ್ 300 ಮಾದರಿಯು ವಿ6,3.3-ಲೀಟರ್ ಟರ್ಬೊ ಡೀಸೆಲ್ ಎಂಜಿನ್ ಹೊಂದಿದ್ದು, 304 ಬಿಹೆಚ್ಪಿ ಪವರ್ ಮತ್ತು 700 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದನ್ನು 10-ಸ್ಪೀಡ್ ಆಟೋಮ್ಯಾಟಿಕ್ ಗೇರ್ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಆಟಿಮ್ಯಾಟಿಕ್ ಟ್ರಾನ್ಸ್ಮಿಷನ್ ಇಸಿಯು ಸಾಫ್ಟ್ವೇರ್ ಅಪ್ಡೇಟ್ ಅನ್ನು ಉಚಿತವಾಗಿ ಒದಗಿಸಲಾಗುತ್ತದೆ.

ಈ ಹೊಸ ಸಾಫ್ಟ್ವೇರ್ ಅಪ್ಡೇಟ್ ಮಾಡಲು ಸಮಯವನ್ನು ನಿಗದಿಪಡಿಸಲು  ಕಂಪನಿಯೇ ನೇರವಾಗಿ ಕಾರಿನ ಮಾಲೀಕರನ್ನು ಪ್ರತ್ಯೇಕವಾಗಿ ಸಂಪರ್ಕಿಸಲಿದ್ದು, ತಮ್ಮ ಎಸ್ಯುವಿ ಮೇಲೆ ಏನು ಆದರೂ ಪರಿಣಾಮ ಬೀರಿದೆಯೇ ಎಂದು ತಿಳಿಯಲು, ಮಾಲೀಕರ Toyota ಸೇಫ್ಟಿ ರೀಕಾಲ್ ಪುಟದಲ್ಲಿ ವಿಐಎನ್ ಸಂಖ್ಯೆಯನ್ನು ನಮೂದಿಸಬಹುದು. ಮತ್ತು  ಇದರ  ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಅವರು ತಮ್ಮ ಟೊಯೋಟಾ ಡೀಲರ್ ಅನ್ನು ಸಹ ಸಂಪರ್ಕಿಸಬಹುದು. ಹಾಗು ಈ ಸಾಫ್ಟ್ವೇರ್ನೊಂದಿಗಿನ ಸಮಸ್ಯೆಯು ಯಾವುದೇ ದೊಡ್ಡ ಸಮಸ್ಯೆಗಳನ್ನು ಸೃಷ್ಟಿಸುವ ಸಾಧ್ಯತೆಯಿಲ್ಲ ಎಂದು ಟೊಯೋಟಾ ಹೇಳಿದೆ. ಆದ್ದರಿಂದ ಮಾಲೀಕರು ತಮ್ಮ ಲ್ಯಾಂಡ್ ಕ್ರೂಸರ್ 300 ಅನ್ನು ಬಳಸುವುದನ್ನು ಮುಂದುವರಿಸಬಹುದು.

Land Cruiser 300 Interior

ಟೊಯೊಟಾ ಲ್ಯಾಂಡ್ ಕ್ರೂಸರ್ 300ನ ವಿಶೇಷತೆಗಳು

ಟೊಯೊಟಾ ಲ್ಯಾಂಡ್ ಕ್ರೂಸರ್ 300 SUV 4,985 ಮಿಮೀ ಉದ್ದ, 1,980 ಮಿಮೀ ಅಗಲ ಮತ್ತು 1,945 ಮಿಮೀ ಎತ್ತರವನ್ನು ಹೊಂದಿದೆ. ತನ್ನ ಅಸಾಧಾರಣ ಆಫ್-ರೋಡ್ ಸಾಮರ್ಥ್ಯಗಳಿಗೆ ಹೆಸರುವಾಸಿಯಾದ ಈ ಎಸ್ಯುವಿ ಹಲವಾರು ಗಮನಾರ್ಹ ಬಾಹ್ಯ ವೈಶಿಷ್ಟ್ಯಗಳನ್ನು ಹೊಂದಿದೆ. ಮುಂಭಾಗದ ಬೃಹತ್ ಬಂಪರ್, ನಯವಾದ LED  ಹೆಡ್ ಲ್ಯಾಂಪ್ಗಳು ಮತ್ತು DRLಗಳು, ಆಕರ್ಷಕ ಬಾನೆಟ್, ಸ್ಕ್ವೇರ್ಡ್ ವೀಲ್ ಆರ್ಚ್ಗಳು, ಸ್ಪೋರ್ಟಿ 20-ಇಂಚಿನ ಅಲಾಯ್ ವೀಲ್ಗಳು, ಬ್ಲ್ಯಾಕ್ ಔಟ್ ಬಿ ಮತ್ತು ಸಿ ಪಿಲ್ಲರ್ಗಳು ಮತ್ತು ಸೀಕ್ವೆನ್ಷಿಯಲ್ ಟರ್ನ್ ಇಂಡಿಕೇಟರ್ಗಳೊಂದಿಗೆ ರಿಯರ್ ಕಾಂಬಿನೇಶನ್ ಲ್ಯಾಂಪ್ಗಳು ಇದರ ಪ್ರಮುಖ ಬಾಹ್ಯ ಆಕರ್ಷಣೆಗಳಾಗಿವೆ.

ಲ್ಯಾಂಡ್ ಕ್ರೂಸರ್ 300 ಟಿಎನ್ಜಿಎ-ಎಫ್ (TNGA-F) ಪ್ಲಾಟ್ಫಾರ್ಮ್ನಲ್ಲಿ ನಿರ್ಮಿಸಲಾಗಿದೆ, ಇದು ಆರಾಮದಾಯಕ ಸವಾರಿ  ಮತ್ತು ನಿರ್ವಹಣಾ ಸ್ಥಿರತೆಯನ್ನು ನೀಡುತ್ತದೆ. ಜೊತೆಗೆ ಉತ್ತಮ ಆಫ್-ರೋಡ್ ಕಾರ್ಯಕ್ಷಮತೆಯನ್ನು ಹೊಂದಿದೆ . ಇಂಟೀರಿಯರ್  ಕಲರ್   ಆಯ್ಕೆಗಳಲ್ಲಿ , ಬ್ಲ್ಯಾಕ್ ಮತ್ತು ಡ್ಯುಯಲ್-ಟೋನ್ ಬ್ಲ್ಯಾಕ್ ಮತ್ತು ಡಾರ್ಕ್ ರೆಡ್ ಸೇರಿವೆ. ಮತ್ತು  ಕಸ್ಟಮೈಸ್ ಮಾಡಬಹುದಾದ ಆಯ್ಕೆ ಅನ್ನು ಹೊಂದಿದೆ.

ಒಳಭಾಗದಲ್ಲಿ ಉತ್ತಮ  ಲೆದರ್ ಸೀಟುಗಳು, 12.25-ಇಂಚಿನ ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಮತ್ತು ಪ್ರೀಮಿಯಂ ಜೆಬಿಎಲ್  ಸೌಂಡ್ ಸಿಸ್ಟಮ್ ಅನ್ನು ಒಳಗೊಂಡಿವೆ. ಹೆಡ್-ಅಪ್ ಡಿಸ್ಪ್ಲೇ, 360-ಡಿಗ್ರಿ ಸರೌಂಡ್ ಕ್ಯಾಮೆರಾ, ವೈರ್‌ಲೆಸ್ ಚಾರ್ಜರ್, 7 ಡ್ರೈವ್ ಮೋಡ್ಗಳನ್ನು ಸೇರಿದಂತೆ ಹಲವಾರು ಐಷಾರಾಮಿ ವೈಶಿಷ್ಟ್ಯಗಳನ್ನು ಹೊಂದಿದೆ. ಡೈನಾಮಿಕ್ ಮ್ಯಾನೇಜ್ಮೆಂಟ್, ಟರ್ನ್ ಅಸಿಸ್ಟ್ನೊಂದಿಗೆ ಕ್ರಾಲ್ ಕಂಟ್ರೋಲ್, ಡೌನ್ಹಿಲ್ ಅಸಿಸ್ಟ್ ಕಂಟ್ರೋಲ್, ಪನೋರಮಿಕ್ ವ್ಯೂ ಮಾನಿಟರ್, ಫ್ರಂಟ್ ಮತ್ತು ರಿಯರ್ ಪಾರ್ಕಿಂಗ್ ಸೆನ್ಸರ್ಗಳು, ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್ (ಮಲ್ಟಿ ಟೆರೇನ್ ಸಿಸ್ಟಮ್) ಟೈರ್ ಪ್ರೆಶರ್ ವಾರ್ನಿಂಗ್ ಸಿಸ್ಟಮ್ ಮತ್ತು ಆಂಟಿ-ಥೆಫ್ಟ್ ಸಿಸ್ಟಮ್ ಅನ್ನು ಒಳಗೊಂಡಿದೆ.

Leave a Comment