ಕ್ರಿಕೆಟಿಗ ಸರ್ಫರಾಜ್ ಖಾನ್ ತಂದೆಗೆ Mahindra Thar ಗಿಫ್ಟ್ ನೀಡಿದ ಆನಂದ್ ಮಹೀಂದ್ರಾ

ಆನಂದ್ ಮಹಿಂದ್ರಾ (Anand Mahindra), ವಿವಿಧ ಕ್ಷೇತ್ರಗಳಲ್ಲಿ ಪ್ರತಿಭಾವಂತರಾದ ಜನರಿಗೆ ತನ್ನ ಕಂಪನಿಯ ವಾಹನಗಳನ್ನು ಕೊಡುತ್ತಾ ಗೌರವ ಗಳಿಸಿದ್ದಾರೆ. ಅವರು ಸಾಮಾಜಿಕ ಮಾಧ್ಯಮಗಳಲ್ಲಿ ಸದಾ ಸಕ್ರಿಯರಾಗಿದ್ದು ಮತ್ತು ಅವರನ್ನು ಆಕರ್ಷಿಸುವ ಕಲ್ಪನೆಗಳನ್ನು ಹಂಚಿಕೊಳ್ಳುತ್ತಾರೆ.

ಟೀಮ್ ಇಂಡಿಯಾದ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಸರ್ಫರಾಜ್ ಖಾನ್(Sarfaraz Khan) ಅವರ ತಂದೆ ನೌಶಾದ್‌ ಖಾನ್ (Naushad Khan) ಅವರಿಗೆ ಮಹಿಂದ್ರಾ ಗ್ರೂಪ್‌ನ ಚೇಯರ್‌ಮ್ಯಾನ್, ಆನಂದ್ ಮಹಿಂದ್ರಾರವರು ಎಸ್‌ಯುವಿ ಮಹೀಂದ್ರಾ ಥಾರ್ (Mahindra Thar) ಅನ್ನುಗಿಫ್ಟ್ ನೀಡಲು ಮುಂದಾಗಿದ್ದಾರೆ. ಈ ಸಂಬಂಧ ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ರಾಜ್ಕೋಟ್ನ ನಿರಂಜನ್ ಶಾ ಮೈದಾನದಲ್ಲಿ ನಡೆಯುತ್ತಿರುವ ಭಾರತ ಹಾಗೂ ಇಂಗ್ಲೆಂಡ್ (India vs England) ನಡುವಣ ಟೆಸ್ಟ್ನಲ್ಲಿ ಕಣಕ್ಕಿಳಿದ ಸರ್ಫರಾಜ್ ಖಾನ್ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಬ್ಯಾಟ್ ಬೀಸಿ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಆಡಿದ 75 ನಿಮಿಷಗಳ ಮೊದಲ ಆಟದಲ್ಲಿ 66 ಬಾಲ್ಸ್‌ಗಳನ್ನು ಎದುರಿಸಿ 62 ರನ್‌ಗಳನ್ನು ಪಡೆದುಕೊಂಡರು, 9 ಬೌಂಡರಿ ಮತ್ತು 1 ಸಿಕ್ಸ್ ಅನ್ನು ಬಾರಿಸಿ 81.5ನೇ ಓವರ್ನಲ್ಲಿ ರನ್ ಔಟಾಗಿದ್ದು ದುರಾದೃಷ್ಟಕರ ರೀತಿಯಲ್ಲಿತ್ತು. ಅನಿಲ್ ಕುಂಬ್ಳೆ ಅವರಿಂದ ಸರ್ಫರಾಜ್ ಟೆಸ್ಟ್ ಕ್ಯಾಪ್ ಪಡೆದರು ನಂತರ ತಂದೆ ನೌಶಾದ್ ಭಾವುಕರಾದರು. ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

ಆನಂದ್ ಮಹೀಂದ್ರಾ ಅವರು ತಮ್ಮ ಎಕ್ಸ್ ಖಾತೆಯ ಮೂಲಕ ಥಾರ್‌ಗೆ ಉಡುಗೊರೆಯ ಬಗ್ಗೆ ಘೋಷಿಸಿದರು, “ ಪರಿಶ್ರಮ, ಧೈರ್ಯ, ತಾಳ್ಮೆ ಮಗನಿಗೆ ಸ್ಫೂರ್ತಿ ತುಂಬಲು ತಂದೆಗೆ ಇದಕ್ಕಿಂತ ಉತ್ತಮವಾದ ಗುಣ ಯಾವುದು?. ಸ್ಪೂರ್ತಿದಾಯಕ ಪೋಷಕರಾದ, ನೌಶಾದ್ ಖಾನ್ ಅವರು ಥಾರ್ ಉಡುಗೊರೆಯನ್ನು ಸ್ವೀಕರಿಸಿದರೆ ಅದು ನನ್ನ ಸಂತೋಷ ಮತ್ತು ಗೌರವ,” ಎಂದು ಬರೆದುಕೊಂಡಿದ್ದಾರೆ.

“Himmat nahin chodna, bas!”

Hard work. Courage. Patience.

What better qualities than those for a father to inspire in a child?

For being an inspirational parent, it would be my privilege & honour if Naushad Khan would accept the gift of a Thar. pic.twitter.com/fnWkoJD6Dp

— anand mahindra (@anandmahindra) February 16, 2024

Leave a Comment