Triumph Daytona: ಭಾರತದಲ್ಲಿ ಹೊಸ ಟ್ರಯಂಫ್ ಡೇಟೋನಾ 660 ಬೈಕ್ ವಿತರಣೆ ಪ್ರಾರಂಭ

ದ್ವಿಚಕ್ರ ವಾಹನಗಳ ಕ್ಷೇತ್ರದಲ್ಲಿ ಪ್ರಖ್ಯಾತವಾದ ಟ್ರಯಂಫ್ ಮೋಟಾರ್‌ಸೈಕಲ್ಸ್ (Triumph Motorcycles) ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಹೊಸ ಡೇಟೋನಾ 660 (Triumph Daytona 660) ಬೈಕನ್ನು ಇತ್ತೀಚೆಗೆ ಬಿಡುಗಡೆ ಮಾಡಿದೆ. ಈ ಆಧುನಿಕ ಮತ್ತು ಶಕ್ತಿಶಾಲಿ ಬೈಕಿನ ದೆಹಲಿ ಎಕ್ಸ್ ಶೋರೂಂ ಬೆಲೆ ರೂ. 9.72 ಲಕ್ಷ ನಿಗದಿಯಾಗಿದೆ. ಕಂಪನಿಯು ಈಗ ತನ್ನ ಗ್ರಾಹಕರಿಗೆ ಡೇಟೋನಾ 660 ಬೈಕುಗಳ ವಿತರಣೆಯನ್ನು ಪ್ರಾರಂಭಿಸಿದೆ. ಪ್ರವಾಸಕ್ಕೆ ಸೂಕ್ತವಾದ ಸ್ಪೋರ್ಟಿ ಬೈಕ್ ಈಗ ಗ್ರಾಹಕರ ಗ್ಯಾರೇಜ್‌ಗಳನ್ನು ಸೇರುತ್ತಿದೆ.

ಈ ಬೈಕ್‌ನನ್ನು ನೀವು ರೂ. 25,000/-ನ ಕಡಿಮೆ ಬುಕ್ಕಿಂಗ್ ಮೊತ್ತದೊಂದಿಗೆ ಬುಕ್ಕಿಂಗ್ ಮಾಡಬಹುದು. ಈ ಹೊಸ ಮೋಟಾರ್‌ ಸೈಕಲ್ ತನ್ನ ಎಂಜಿನ್ ಪ್ಲಾಟ್ ಫಾರ್ಮ್ ಅನ್ನು ಟ್ರೈಡೆಂಟ್ 660 (Trident 660) ಮಾದರಿಯೊಂದಿಗೆ ಹಂಚಿಕೊಳ್ಳುತ್ತದೆ. ಟೈಗರ್ ಸ್ಪೋರ್ಟ್ 660 (Tiger Sport 660) ರ ನಂತರ, ಈ ಪ್ಲಾಟ್ ಫಾರ್ಮ್ ಅನ್ನು ಬಳಸಿಕೊಂಡು ತಯಾರಿಸಲಾದ ಎರಡನೇ ಮಾದರಿ ಇದಾಗಿದೆ. ಈಗಲೇ ಹತ್ತಿರದ ಟ್ರಯಂಫ್ ಡೀಲರ್‌ಶಿಪ್‌ಗೆ ಭೇಟಿ ನೀಡಿ ಈ ಬೈಕ್‌ನ ಅದ್ಭುತ ಅನುಭವವನ್ನು ಪಡೆಯಿರಿ.

ಇದನ್ನೂ ಓದಿ: ಕವಾಸಕಿ ನಿಂಜಾ ZX-4RR ಬೈಕ್ ರೂ 9.10 ಲಕ್ಷಕ್ಕೆ ಬಿಡುಗಡೆ

Triumph Daytona 660
Triumph Daytona 660

ಟ್ರಯಂಫ್ ಡೇಟೋನಾ 660: ಎಂಜಿನ್

ಟ್ರಯಂಫ್ ಡೇಟೋನಾ 660 (Triumph Daytona 660)  ಅನ್ನು ಇನ್ನಷ್ಟು ಶಕ್ತಿಶಾಲಿಯಾಗಿಸಲು, ಟ್ರೈಡೆಂಟ್ 660ನ 660 ಸಿಸಿ ಲಿಕ್ವಿಡ್-ಕೂಲ್ಡ್ ಇನ್ಲೈನ್ ಟ್ರಿಪಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 11,250 ಆರ್‌ಪಿಎಂನಲ್ಲಿ 95 ಬಿಹೆಚ್‌ಪಿ ಶಕ್ತಿಯನ್ನು ಮತ್ತು 8,250 ಆರ್‌ಪಿಎಂನಲ್ಲಿ 69 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಅಂದರೆ, ಬಹುತೇಕ ಕಡಿಮೆ ಆರ್‌ಪಿಎಂನಲ್ಲಿಯೇ ಭರ್ಜರಿ ಟಾರ್ಕ್ ಸಿಗುತ್ತದೆ. 6-ಸ್ಪೀಡ್ ಗೇರ್‌ಬಾಕ್ಸ್ ಮತ್ತು ಸ್ಲಿಪ್-ಅಂಡ್-ಅಸಿಸ್ಟ್ ಕ್ಲಚ್‌ನ ಸಹಾಯದಿಂದ, ಡೇಟೋನಾ 660 ನಿಮಗೆ ಅದ್ಭುತವಾದ ಸವಾರಿ ಅನುಭವವನ್ನು ನೀಡುತ್ತದೆ.

Triumph Daytona 660: ವೈಶಿಷ್ಟ್ಯಗಳು

ಈ ಬೈಕ್‌ನಲ್ಲಿ ಸ್ಪೋರ್ಟ್, ರೋಡ್ ಮತ್ತು ರೈನ್ ಎಂಬ ಮೂರು ವಿಭಿನ್ನ ರೈಡಿಂಗ್ ಮೋಡ್‌ಗಳು ಲಭ್ಯವಿದ್ದು, ಪ್ರತಿಯೊಂದು ಮೋಡ್‌ನಲ್ಲಿಯೂ ನಿಮಗೆ ವಿಭಿನ್ನ ರೀತಿಯ ಸವಾರಿ ಅನುಭವ ಸಿಗುತ್ತದೆ. ಈ ಮೋಡ್‌ಗಳು ಬೈಕ್‌ನ ಎಂಜಿನ್ ಹೇಗೆ ಪ್ರತಿಕ್ರಿಯಿಸುತ್ತದೆ ಮತ್ತು ಬೈಕ್‌ನ ಗ್ರಿಪ್ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ನಿಯಂತ್ರಿಸುತ್ತವೆ. ಮತ್ತು ಇದರಲ್ಲಿ 14-ಲೀಟರ್ ಇಂಧನ ಟ್ಯಾಂಕ್ ಇದೆ.

ಡೇಟೋನಾ 660 ಬೈಕ್‌ನಲ್ಲಿ TFT LCD ಡಿಸ್ಪ್ಲೇ ಹೊಂದಿರುವ ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್ ಇದೆ. ಈ ಡಿಸ್ಪ್ಲೇ ಯಲ್ಲಿ ಬೈಕ್‌ಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಳು ಸ್ಪಷ್ಟವಾಗಿ ಕಾಣುತ್ತವೆ. ಅಷ್ಟೇ ಅಲ್ಲ, ಮೈ ಟ್ರಯಂಫ್ ಕನೆಕ್ಟಿವಿಟಿ ಸಿಸ್ಟಮ್‌ನ ಸಹಾಯದಿಂದ ನೀವು ನಿಮ್ಮ ಬೈಕ್‌ನಲ್ಲಿ ಟರ್ನ್-ಬೈ-ಟರ್ನ್ ನ್ಯಾವಿಗೇಷನ್ ಅನ್ನು ಬಳಸಬಹುದು. ಈ ಬೈಕ್ ಮೂರು ಆಕರ್ಷಕ ಬಣ್ಣಗಳಲ್ಲಿ ಲಭ್ಯವಿದೆ: ಸ್ನೋಡೋನಿಯಾ ವೈಟ್, ಸ್ಯಾಟಿನ್ ಗ್ರಾನೈಟ್ ಮತ್ತು ಕಾರ್ನೀವಲ್ ರೆಡ್.

ಇದನ್ನೂ ಓದಿ: ಸುಜುಕಿ GSX-8R ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆ, ಬೆಲೆ 9.25 ಲಕ್ಷ

Triumph Daytona 660
Triumph Daytona 660

ಟ್ರಯಂಫ್ ಡೇಟೋನ್ 660 (Triumph Daytona 660) ಮೋಟಾರ್‌ಸೈಕಲ್‌ನ ಸಸ್ಪೆನ್ಶನ್ ಬಗ್ಗೆ ಹೇಳುವುದಾದರೆ ಮುಂಭಾಗದಲ್ಲಿ, 41 ಎಂಎಂ ಅಪ್ಸೈಡ್ ಡೌನ್ ದೊಡ್ಡ ಪಿಸ್ಟನ್ ಫೋರ್ಕ್‌ಗಳು. ಹಿಂಭಾಗದಲ್ಲಿ, ಪ್ರಿಲೋಡ್ ಹೊಂದಾಣಿಕೆ ಮೊನೊಶಾಕ್ ಸಸ್ಪೆನ್ಶನ್ ಅನ್ನು ಅಳವಡಿಸಲಾಗಿದೆ. ಇನ್ನು ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಈ ಬೈಕಿನಲ್ಲಿ ಮುಂಭಾಗದಲ್ಲಿ ಟ್ವಿನ್ 310 ಎಂಎಂ ಡಿಸ್ಕ್ ಬ್ರೇಕ್‌ಗಳು ಮತ್ತು ಹಿಂಭಾಗದಲ್ಲಿ 220 ಎಂಎಂ ಡಿಸ್ಕ್ ಬ್ರೇಕ್ ಅನ್ನು ಹೊಂದಿದೆ. ಇದರ ಜೊತೆಗೆ ಹೆಚ್ಚಿನ ಸುರಕ್ಷತೆಯನ್ನು ಒದಗಿಸಲು, ಈ ವಾಹನದಲ್ಲಿ ಡ್ಯುಯಲ್-ಚಾನೆಲ್ ಎಬಿಎಸ್ ವ್ಯವಸ್ಥೆಯನ್ನು ನೀಡಲಾಗಿದೆ.

ಹೊಸ ಟ್ರಯಂಫ್ ಡೇಟೋನಾ 660 ಬೈಕ್ 17 ಇಂಚಿನ Y-ಆಕಾರದ, ಐದು-ಸ್ಪೋಕ್ ಬ್ಲಾಕ್ ಅಲಾಯ್ ವ್ಹೀಲ್‌ಗಳನ್ನು ಹೊಂದಿದ್ದು, ಮುಂಭಾಗದ ಚಕ್ರದಲ್ಲಿ 120/70 ಮತ್ತು ಹಿಂಭಾಗದ ಚಕ್ರದಲ್ಲಿ 180/55 ಗಾತ್ರದ ಟೈರ್‌ಗಳನ್ನು ಹೊಂದಿದೆ. ಈ ಬೈಕ್‌ನ ಸೀಟ್ ಎತ್ತರ 810 ಎಂಎಂ ಆಗಿದ್ದು, ಎಲ್ಲಾ ರೀತಿಯ ಸವಾರರಿಗೂ ಆರಾಮದಾಯಕವಾದ ಸವಾರಿ ಅನುಭವವನ್ನು ನೀಡುತ್ತದೆ. ಈ ಬೈಕ್ ತನ್ನ 660 cc ಎಂಜಿನ್‌ನೊಂದಿಗೆ ಅತ್ಯುತ್ತಮ ಕಾರ್ಯಕ್ಷಮತೆಯನ್ನು ನೀಡುತ್ತದೆ.



Leave a Comment