ಹೊಸ ಮಾರುತಿ ಸುಜುಕಿ Swift Blitz ಎಡಿಷನ್ ರೂ. 49,848 ಮೌಲ್ಯದ ಉಚಿತ ಆಕ್ಸೆಸರಿ ಕಿಟ್ಗಳನ್ನು ಹೊಂದಿದೆ.
ಮಾರುತಿ ಸುಜುಕಿ (Maruti Suzuki) ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಹಬ್ಬದ ಸಂಭ್ರಮವನ್ನು ಹೆಚ್ಚಿಸಲು ಹೊಸ ಆವೃತ್ತಿಯ ಸ್ವಿಫ್ಟ್ ಕಾರ್ ಅನ್ನು ಬಿಡುಗಡೆ ಮಾಡಿದೆ. ‘ಸ್ವಿಫ್ಟ್ ಬ್ಲಿಟ್ಜ್ ಎಡಿಷನ್’ (Maruti Suzuki Swift Blitz Edition)ಎಂದು ಹೆಸರಿಸಲಾದ ಈ ಕಾರು, ಗ್ರಾಹಕರಿಗೆ ಆಕರ್ಷಕವಾಗುವಂತೆ ಹಲವಾರು ಹೊಸ ವೈಶಿಷ್ಟ್ಯಗಳು ಮತ್ತು ಉಚಿತ ಅಕ್ಸೆಸರಿಗಳೊಂದಿಗೆ ಬಂದಿದೆ.
ಕಳೆದ ಕೆಲವು ತಿಂಗಳಲ್ಲಿ ಬಲೆನೊ, ವ್ಯಾಗನ್ ಆರ್, ಗ್ರ್ಯಾಂಡ್ ವಿಟಾರಾ ಮತ್ತು ಇಗ್ನಿಸ್ ಕಾರುಗಳ ವಿಶೇಷ ಆವೃತ್ತಿಗಳನ್ನು ಬಿಡುಗಡೆ ಮಾಡಿದ ಮಾರುತಿ ಸುಜುಕಿ, ಈಗ ಸ್ವಿಫ್ಟ್ ಮಾದರಿಯ ಮಾರಾಟವನ್ನು ಇನ್ನಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ಈ ಹೊಸ ಆವೃತ್ತಿಯನ್ನು ಪರಿಚಯಿಸಿದೆ.
ಇದನ್ನೂ ಓದಿ: ಮಾರುತಿ ಸುಜುಕಿ ಬಲೆನೋ ರೀಗಲ್ ಎಡಿಷನ್ ಬಿಡುಗಡೆ

ಈ ಸ್ವಿಫ್ಟ್ ಬ್ಲಿಟ್ಜ್ ಎಡಿಷನ್ ಕಾರಿನಲ್ಲಿ ಎಲ್ಎಕ್ಸ್ಐ, ವಿಎಕ್ಸ್ಐ, ವಿಎಕ್ಸಐ ಎಎಂಟಿ, ವಿಎಕ್ಸಐ (ಒ) ಮತ್ತು ವಿಎಕ್ಸಐ (ಒ) ಎಎಂಟಿ ಒಟ್ಟು ಐದು ವಿಭಿನ್ನ ಮಾದರಿಗಳು ಲಭ್ಯವಿದ್ದು, ನಿಮ್ಮ ಬಜೆಟ್‌ಗೆ ಮತ್ತು ಆದ್ಯತೆಗೆ ತಕ್ಕಂತೆ ನೀವು ಆಯ್ಕೆ ಮಾಡಿಕೊಳ್ಳಬಹುದು. ಹೆಚ್ಚುವರಿಯಾಗಿ, ಪರಿಸರ ಸ್ನೇಹಿಯಾದ ಸಿಎನ್ಜಿ ಆಯ್ಕೆಯೂ ಲಭ್ಯವಿದೆ. ಈ ಎಲ್ಲಾ ಆಯ್ಕೆಗಳೊಂದಿಗೆ, ಸ್ವಿಫ್ಟ್ ಬ್ಲಿಟ್ಜ್ ಕಾರಿನ ಬೆಲೆ ರೂ. 6.49 ಲಕ್ಷದಿಂದ ರೂ. 8.02 ಲಕ್ಷ (ಎಕ್ಸ್ ಶೋರೂಂ) ವರೆಗೆ ಇರುತ್ತದೆ.
ಮಾರುತಿ ಸುಜುಕಿ ತನ್ನ ಗ್ರಾಹಕರಿಗೆ ಹೊಸ ಅನುಭವ ನೀಡುವ ಉದ್ದೇಶದಿಂದ ಬಲೆನೊ, ವ್ಯಾಗನ್ ಆರ್, ಗ್ರ್ಯಾಂಡ್ ವಿಟಾರಾ, ಇಗ್ನಿಸ್ ಮತ್ತು ಸ್ವಿಫ್ಟ್ ಬ್ಲಿಟ್ಜ್ ಸೇರಿದಂತೆ ಐದು ವಿಶೇಷ ಆವೃತ್ತಿಗಳನ್ನು ಪರಿಚಯಿಸಿದೆ. ವಿಶೇಷವಾಗಿ, ಸ್ವಿಫ್ಟ್ ಬ್ಲಿಟ್ಜ್ ಅನ್ನು ಕಡಿಮೆ-ಸ್ಪೆಕ್ ಮಾದರಿಗಳ ಮಾರಾಟವನ್ನು ಹೆಚ್ಚಿಸುವ ಉದ್ದೇಶದಿಂದ ಸೀಮಿತ ಅವಧಿಗೆ ಮಾರುತಿ ಅರೆನಾ ಡೀಲರ್‌ಗಳಲ್ಲಿ ಲಭ್ಯವಿರುತ್ತದೆ.
ಇದನ್ನೂ ಓದಿ: ಗ್ರ್ಯಾಂಡ್ ವಿಟಾರಾ ಡೊಮಿನಿಯನ್ ಲಿಮಿಟೆಡ್ ಎಡಿಷನ್ ಬಿಡುಗಡೆ
ಮಾರುತಿ ಸುಜುಕಿ ಸ್ವಿಫ್ಟ್ ಬ್ಲಿಟ್ಜ್ ಎಡಿಷನ್
ಈ ಹೊಸ ಸ್ವಿಫ್ಟ್ ಬ್ಲಿಟ್ಜ್ (Swift Blitz) ಆವೃತ್ತಿಯು ಮೂಲ ಮಾದರಿಗಳಲ್ಲಿ ಲಭ್ಯವಿರುವ ಎಲ್ಲಾ ವೈಶಿಷ್ಟ್ಯಗಳ ಜೊತೆಗೆ, ಗ್ರಾಹಕರಿಗೆ ಹಲವಾರು ಹೆಚ್ಚುವರಿ ಸೌಲಭ್ಯಗಳನ್ನು ಒದಗಿಸುತ್ತದೆ. ರೂ. 49,848 ಮೌಲ್ಯದ ಹೆಚ್ಚುವರಿ ಆಕ್ಸಸರೀಸ್ ಪ್ಯಾಕೇಜ್‌ನೊಂದಿಗೆ ಬರುತ್ತದೆ. ಈ ಆವೃತ್ತಿಯಲ್ಲಿ ಹಿಂಭಾಗದ ಅಂಡರ್‌ಬಾಡಿ ಸ್ಪಾಯ್ಲರ್, ಬೂಟ್ ಸ್ಪಾಯ್ಲರ್, ಶೈನಿಂಗ್ ಡೋರ್ ಸಿಲ್‌ಗಳು, ಡೋರ್ ವೈಸರ್‌ಗಳು, ಫಾಗ್ ಲ್ಯಾಂಪ್‌ಗಳು ಮತ್ತು ಸೈಡ್ ಮೋಲ್ಡಿಂಗ್‌ಗಳು ಸೇರಿವೆ.

ಮಾರುತಿ ಸುಜುಕಿ ಸ್ವಿಫ್ಟ್ (Swift Blitz) ಕಾರಿಗೆ 1.2 ಲೀಟರ್ ಸಾಮರ್ಥ್ಯದ, ಮೂರು ಸಿಲಿಂಡರ್‌ಗಳೊಂದಿಗೆ ವಿನ್ಯಾಸಗೊಳಿಸಲಾದ ಝಡ್-ಸೀರೀಸ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ ಪೆಟ್ರೋಲ್ ಇಂಧನದಲ್ಲಿ 82 ಬಿಎಚ್‌ಪಿ ಗರಿಷ್ಠ ಶಕ್ತಿ ಮತ್ತು 112 ಎನ್‌ಎಂ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಸಿಎನ್‌ಜಿ ಇಂಧನದಲ್ಲಿ ಈ ಎಂಜಿನ್ 70 ಬಿಎಚ್‌ಪಿ ಶಕ್ತಿ ಮತ್ತು 112 ಎನ್‌ಎಂ ಟಾರ್ಕ್ ಅನ್ನು ನೀಡುತ್ತದೆ. ಕಾರಿನ ಎಲ್ಲಾ ಮಾದರಿಗಳಲ್ಲಿ 5-ಸ್ಪೀಡ್ ಮ್ಯಾನ್ಯುವಲ್ ಗೇರ್‌ಬಾಕ್ಸ್ ಅನ್ನು ಪ್ರಮಾಣಿತವಾಗಿ ನೀಡಲಾಗಿದೆ. ಗ್ರಾಹಕರು ಬಯಸಿದರೆ, ಬೇಸ್ ಮಾದರಿ ಹೊರತುಪಡಿಸಿ ಉಳಿದ ಎಲ್ಲಾ ಮಾದರಿಗಳಲ್ಲಿ 5-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಅನ್ನು ಆಯ್ಕೆ ಮಾಡಿಕೊಳ್ಳಬಹುದು.
ಇದನ್ನೂ ಓದಿ: ಮಾರುತಿ ಸುಜುಕಿ ಹೊಸ ವ್ಯಾಗನ್ಆರ್ Waltz ಎಡಿಷನ್ ಅಗ್ಗದ ಬೆಲೆಯಲ್ಲಿ ಬಿಡುಗಡೆ
ಕಂಪನಿಯ ಪ್ರಕಾರ, ಈ ವಾಹನವು ಪೆಟ್ರೋಲ್ ಎಂಜಿನ್‌ನೊಂದಿಗೆ ಮ್ಯಾನುವಲ್ ಗೇರ್‌ಬಾಕ್ಸ್‌ನಲ್ಲಿ ಲೀಟರ್‌ಗೆ 24.80 ಕಿಲೋಮೀಟರ್ ಮತ್ತು ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನಲ್ಲಿ ಲೀಟರ್‌ಗೆ 25.75 ಕಿಲೋಮೀಟರ್ ಮೈಲೇಜ್ ನೀಡುತ್ತದೆ. ಅಲ್ಲದೆ, ಸಿಎನ್‌ಜಿ ಇಂಧನದೊಂದಿಗೆ ಲೀಟರ್‌ಗೆ 32.85 ಕಿಲೋಮೀಟರ್ ಮೈಲೇಜ್ ನೀಡುವ ಸಾಮರ್ಥ್ಯವನ್ನು ಹೊಂದಿದೆ.
ವಾಹನದಲ್ಲಿ ಪ್ರಯಾಣಿಕರ ಸುರಕ್ಷತೆಯನ್ನು ಮುಖ್ಯವಾಗಿಟ್ಟುಕೊಂಡು 6 ಏರ್‌ಬ್ಯಾಗ್‌ಗಳು, EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), 3-ಪಾಯಿಂಟ್ ಸೀಟ್‌ಬೆಲ್ಟ್‌ಗಳು, TCS (ಟ್ರಾಕ್ಷನ್ ಕಂಟ್ರೋಲ್ ಸಿಸ್ಟಮ್), ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಮತ್ತು ಸೀಟ್ ಬೆಲ್ಟ್ ರಿಮೈಂಡರ್‌ನಂತಹ ಹಲವಾರು ಸುರಕ್ಷತಾ ವೈಶಿಷ್ಟ್ಯಗಳನ್ನು ಸೇರಿಸಲಾಗಿದೆ.