TATA Cars: ಹಬ್ಬದ ಉತ್ಸವದಲ್ಲಿ ಟಾಟಾ ಟಿಯಾಗೊ, ಆಲ್ಟ್ರೋಜ್, ಪಂಚ್, ನೆಕ್ಸಾನ್, ಸಫಾರಿ ಮತ್ತು ಹ್ಯಾರಿಯರ್ ಕಾರುಗಳ ಮೇಲೆ ವಿಶೇಷ ರಿಯಾಯಿತಿಗಳು
ಹಬ್ಬದ ಸೀಸನ್ನಲ್ಲಿ ನಿಮ್ಮ ಕನಸಿನ ಕಾರನ್ನು ಖರೀದಿಸುವ ನಿಮ್ಮ ನಿರ್ಧಾರವನ್ನು ಇನ್ನಷ್ಟು ಸುಲಭಗೊಳಿಸಲು ಟಾಟಾ ಮೋಟಾರ್ಸ್ ಮುಂದಾಗಿದೆ. ಈ ಹಬ್ಬದ ಸೀಸನ್ನಲ್ಲಿ ಟಾಟಾ ಕಾರುಗಳ ಮೇಲೆ ನೀಡಲಾಗುತ್ತಿರುವ ಬಂಪರ್ ಡಿಸ್ಕೌಂಟ್ಗಳು ನಿಮಗೆ ಲಕ್ಷಾಂತರ ರೂಪಾಯಿಗಳನ್ನು ಉಳಿಸಲು ಸಹಾಯ ಮಾಡುತ್ತದೆ. ಟಾಟಾ ಮೋಟಾರ್ಸ್ ತನ್ನ ಜನಪ್ರಿಯ ಕಾರುಗಳಾದ ಟಿಯಾಗೋ, ಆಲ್ಟ್ರೋಜ್, ಪಂಚ್, ನೆಕ್ಸಾನ್, ಸಫಾರಿ ಮತ್ತು ಹ್ಯಾರಿಯರ್ ಮಾದರಿಗಳ ಮೇಲೆ ಆಕರ್ಷಕ ರಿಯಾಯಿತಿಗಳನ್ನು ಘೋಷಿಸಿದೆ.
ಗ್ರಾಹಕರು ಈ ಕಾರುಗಳ ಖರೀದಿಯಲ್ಲಿ ರೂ. 1,33,000/- ವರೆಗೆ ಉಳಿಸಬಹುದು. ವಿಶೇಷವಾಗಿ, ಟಾಟಾ ಆಲ್ಟ್ರೋಜ್ ರೇಸರ್ ಮಾದರಿಯ ಮೇಲೆ (XE ಹೊರತುಪಡಿಸಿ) ರೂ. 50,000/- ವರೆಗಿನ ರಿಯಾಯಿತಿಯನ್ನು ನೀಡಲಾಗುತ್ತಿದೆ. ಈ ರಿಯಾಯಿತಿಯಲ್ಲಿ ಎಕ್ಸ್ಚೇಂಜ್ ಬೋನಸ್, ಕಾರ್ಪೊರೇಟ್ ರಿಯಾಯಿತಿ ಮತ್ತು ಇತರ ಆಕರ್ಷಕ ಆಫರ್ಗಳು ಸೇರಿವೆ.
ಇದನ್ನೂ ಓದಿ: ಹೊಸ ಫೀಚರ್ಸ್ ಗಳೊಂದಿಗೆ ಟಾಟಾ ಪಂಚ್ ಫೇಸ್ಲಿಫ್ಟ್ ಎಸ್ ಯುವಿ ಬಿಡುಗಡೆ
ಟಾಟಾ ಪಂಚ್ ಮತ್ತು ಟಾಟಾ ನೆಕ್ಸನ್
ಟಾಟಾ ಮೋಟಾರ್ಸ್ ತನ್ನ ಜನಪ್ರಿಯ SUVಗಳ ಮೇಲೆ ಆಕರ್ಷಕ ರಿಯಾಯಿತಿಗಳನ್ನು ಘೋಷಿಸಿದೆ. ಪೆಟ್ರೋಲ್ ರೂಪಾಂತರದ ಮೇಲೆ ರೂ 20,000 ಮತ್ತು CNG ರೂಪಾಂತರದ ಮೇಲೆ ರೂ 15,000 ವರೆಗೆ ನಗದು ರಿಯಾಯಿತಿಯನ್ನು ನೀಡಲಾಗುತ್ತಿದೆ. ಟಾಟಾ ಪಂಚ್ನ (Tata PUNCH) 2023 ಪೆಟ್ರೋಲ್ ಮತ್ತು CNG ಮಾದರಿಗಳು ಕ್ರಮವಾಗಿ ರೂ 18,000 ಮತ್ತು ರೂ 15,000 ವರೆಗೆ ರಿಯಾಯಿತಿಯನ್ನು ಪಡೆಯಬಹುದು.
ನೆಕ್ಸಾನ್ ಎಸ್ಯುವಿಯ ಸ್ಟ್ಯಾಂಡರ್ಡ್ 2024 ಮಾದರಿಯಲ್ಲಿ ರೂ. 20,000 ವರೆಗೆ ಮತ್ತು ಫಿಯರ್ಲೆಸ್ ಶ್ರೇಣಿಯ ಮೇಲೆ ರೂ. 35,000 ವರೆಗೆ ರಿಯಾಯಿತಿ ಲಭ್ಯವಿದೆ. 2023ರ ಮಾಡೆಲ್ನ ಪೆಟ್ರೋಲ್ ವೇರಿಯಂಟ್ ಮೇಲೆ ರೂ 95,000 ಮತ್ತು ಡೀಸೆಲ್ ವೇರಿಯಂಟ್ ಮೇಲೆ ರೂ 85,000 ವರೆಗೆ ಉಳಿಸುವ ಅವಕಾಶವಿದೆ.
ಇದನ್ನೂ ಓದಿ: ಟಾಟಾ ಪಂಚ್ ಕ್ಯಾಮೊ ಎಡಿಷನ್ ಕೇವಲ 8.45 ಲಕ್ಷ ರೂ. ಗೆ ಬಿಡುಗಡೆ
ಟಾಟಾ ಸಫಾರಿ ಮತ್ತು ಟಾಟಾ ಹ್ಯಾರಿಯರ್
ಟಾಟಾ ಸಫಾರಿಯ (Tata Safari) 2024 ಮಾದರಿಯಲ್ಲಿ ಭರ್ಜರಿ ರಿಯಾಯಿತಿಯನ್ನು ಪಡೆಯುವ ಅವಕಾಶವಿದೆ.. ಈ ಆಕರ್ಷಕ ಕಾರಿನಲ್ಲಿ 50,000 ರೂಪಾಯಿಗಳವರೆಗೆ ರಿಯಾಯಿತಿ ಪಡೆಯಬಹುದು. ಇದಲ್ಲದೆ, ಕಳೆದ ವರ್ಷದ ಸಫಾರಿ ಮಾದರಿಗಳ ಮೇಲೆ 1,33,000 ರೂಪಾಯಿಗಳವರೆಗೆ ರಿಯಾಯಿತಿ ಲಭ್ಯವಿದೆ. ಅಷ್ಟೇ ಅಲ್ಲ, ಟಾಟಾ ಹ್ಯಾರಿಯರ್ನ 2023 ಮಾದರಿಯನ್ನು ಖರೀದಿಸುವ ಗ್ರಾಹಕರಿಗೆ ಕಂಪನಿ 1,33,000 ರೂಪಾಯಿಗಳ ರಿಯಾಯಿತಿಯನ್ನು ನೀಡುತ್ತಿದೆ.