ರೆನಾಲ್ಟ್ ಕ್ವಿಡ್, ಕಿಗರ್ ಮತ್ತು ಟ್ರೈಬರ್ ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್ ಆಫರ್ಗಳು
ಕೈಗೆಟುಕುವ ಬೆಲೆಯ ಕಾರುಗಳಿಗಾಗಿ ಹುಡುಕಾಟದಲ್ಲಿರುವ ಗ್ರಾಹಕರಿಗೆ ರೆನಾಲ್ಟ್ ಇಂಡಿಯಾ (Renault India) ಒಂದು ಸಂತಸದ ಸುದ್ದಿಯನ್ನು ನೀಡಿದೆ. ಈ ಅಕ್ಟೋಬರ್ ತಿಂಗಳಲ್ಲಿ, ಕ್ವಿಡ್, ಕಿಗರ್ ಮತ್ತು ಟ್ರೈಬರ್ ಮಾದರಿಗಳ ಮೇಲೆ ಆಕರ್ಷಕ ರಿಯಾಯಿತಿಗಳನ್ನು ಘೋಷಿಸಲಾಗಿದೆ. ಈ ರಿಯಾಯಿತಿ ಯೋಜನೆ ಅಕ್ಟೋಬರ್ 31 ರವರೆಗೆ ಮಾತ್ರ ಜಾರಿಯಲ್ಲಿರುತ್ತದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ, ರೆನಾಲ್ಟ್ನ ಅಧಿಕೃತ ವೆಬ್ಸೈಟ್ ಅಥವಾ ನಿಮ್ಮ ಹತ್ತಿರದ ಶೋರೂಂಗೆ ಭೇಟಿ ನೀಡಿ.
ಇದನ್ನೂ ಓದಿ: ಭರ್ಜರಿ ಫೀಚರ್ಸ್ ಗಳೊಂದಿಗೆ ನಿಸ್ಸಾನ್ ಮ್ಯಾಗ್ನೈಟ್ ಫೇಸ್ಲಿಫ್ಟ್ ಅಗ್ಗದ ಬೆಲೆಗೆ ಬಿಡುಗಡೆ
ರೆನಾಲ್ಟ್ ಕ್ವಿಡ್ (Renault KWID)
ರೆನಾಲ್ಟ್ ಕ್ವಿಡ್ ಹ್ಯಾಚ್ಬ್ಯಾಕ್ ಕಾರು ಖರೀದಿಸುವ ಗ್ರಾಹಕರಿಗೆ ಹಲವಾರು ಆಕರ್ಷಕ ಹಣಕಾಸಿನ ಪ್ರಯೋಜನಗಳು ಲಭ್ಯವಿವೆ. ಈ ಕಾರಿನ ಮೇಲೆ ಒಟ್ಟು ₹40,000 ವರೆಗಿನ ರಿಯಾಯಿತಿಯನ್ನು ನೀಡಲಾಗುತ್ತಿದೆ. ಇದರಲ್ಲಿ ₹15,000 ವರೆಗಿನ ನಗದು ರಿಯಾಯಿತಿ, ಹಳೆಯ ಕಾರನ್ನು ಬದಲಾಯಿಸಿದರೆ ₹15,000 ವರೆಗಿನ ವಿನಿಮಯ ರಿಯಾಯಿತಿ ಮತ್ತು ರೆನಾಲ್ಟ್ ಕಂಪನಿಯ ಹಿಂದಿನ ಗ್ರಾಹಕರಿಗೆ ₹10,000 ವರೆಗಿನ ಲಾಯಲ್ಟಿ ಬೋನಸ್ ಸೇರಿವೆ. ಜೊತೆಗೆ, ಕೇವಲ ₹6,999 ಕಂತು (EMI) ಮೊತ್ತದಿಂದ ಈ ಕಾರನ್ನು ಖರೀದಿಸುವ ಸೌಲಭ್ಯವನ್ನು ಕಂಪನಿಯು ಒದಗಿಸಿದೆ.
ನವೀನ ರೆನಾಲ್ಟ್ ಕ್ವಿಡ್ ಹ್ಯಾಚ್ಬ್ಯಾಕ್ ಈಗ ಮಾರುಕಟ್ಟೆಯಲ್ಲಿ ಲಭ್ಯವಿದ್ದು, ರೂ. 4.69 ಲಕ್ಷದಿಂದ ರೂ. 6.45 ಲಕ್ಷ (ಎಕ್ಸ್ ಶೋರೂಂ) ಬೆಲೆಯಲ್ಲಿ ಖರೀದಿಸಬಹುದು. 1-ಲೀಟರ್ ಪೆಟ್ರೋಲ್ ಎಂಜಿನ್ನೊಂದಿಗೆ ಸುಸಜ್ಜಿತವಾಗಿರುವ ಈ ಕಾರು, ಲೀಟರಿಗೆ 21.46 ರಿಂದ 22.3 ಕಿಲೋಮೀಟರ್ವರೆಗೆ ಮೈಲೇಜ್ ನೀಡುತ್ತದೆ. ಕುಟುಂಬದೊಂದಿಗೆ ಆರಾಮದಾಯಕ ಪ್ರಯಾಣಕ್ಕೆ ಇದು ಸೂಕ್ತ ಆಯ್ಕೆಯಾಗಿದ್ದು, ಐದು ಮಂದಿ ಸುಲಭವಾಗಿ ಕುಳಿತು ಪ್ರಯಾಣಿಸಬಹುದು.
ಇದನ್ನೂ ಓದಿ: ರೆನಾಲ್ಟ್ನಿಂದ ಕೈಗರ್, ಕ್ವಿಡ್ ಮತ್ತು ಟ್ರೈಬರ್ ನೈಟ್ & ಡೇ ಎಡಿಷನ್ ಬಿಡುಗಡೆ

ರೆನಾಲ್ಟ್ ಕಿಗರ್ (Renault Kiger)
ರೆನಾಲ್ಟ್ ಕಿಗರ್, ಜನಪ್ರಿಯ ಎಸ್ಯುವಿ ಮಾದರಿಯಾಗಿದ್ದು, ಈಗ ಗ್ರಾಹಕರಿಗೆ ಆಕರ್ಷಕ ಹಣಕಾಸಿನ ಪ್ರಯೋಜನಗಳನ್ನು ನೀಡುತ್ತಿದೆ. ಈ ಕಾರಿನ ಮೇಲೆ ರೂ.60,000ವರೆಗಿನ ಒಟ್ಟು ರಿಯಾಯಿತಿಯನ್ನು ಪಡೆಯಬಹುದಾಗಿದೆ. ಈ ರಿಯಾಯಿತಿಯಲ್ಲಿ ರೂ.25,000ವರೆಗಿನ ನೇರ ನಗದು ರಿಯಾಯಿತಿ, ಹಳೆಯ ಕಾರನ್ನು ವಿನಿಮಯ ಮಾಡಿಕೊಂಡರೆ ರೂ.15,000ವರೆಗಿನ ವಿನಿಮಯ ಪ್ರಯೋಜನ ಮತ್ತು ರೆನಾಲ್ಟ್ ಕಂಪನಿಯ ನಿಷ್ಠಾ ಗ್ರಾಹಕರಿಗೆ ರೂ.20,000ವರೆಗಿನ ಲಾಯಲ್ಟಿ ಬೋನಸ್ ಸಹ ಲಭ್ಯವಿದೆ. ಇಷ್ಟಲ್ಲದೆ, ಕಿಗರ್ ಕಾರಿನನ್ನು ತುಂಬಾ ಕಡಿಮೆ ಇಎಂಐ, ಕೇವಲ ರೂ.8,999ರಿಂದ ಆರಂಭಿಸಿ ಖರೀದಿಸಬಹುದು.
ನೀವು ಸ್ಟೈಲಿಶ್ ಮತ್ತು ವಿಶಾಲವಾದ ಎಸ್ಯುವಿಯನ್ನು ಹುಡುಕುತ್ತಿದ್ದರೆ, ರೆನಾಲ್ಟ್ ಕಿಗರ್ ನಿಮಗೆ ಸೂಕ್ತ ಆಯ್ಕೆಯಾಗಿದೆ. ರೂ.5.99 ಲಕ್ಷದಿಂದ ರೂ.11.23 ಲಕ್ಷ (ಎಕ್ಷ ಶೋರೂಂ)ದ ಬೆಲೆಯಲ್ಲಿ ಲಭ್ಯವಿರುವ ಈ ಕಾರು, 1-ಲೀಟರ್ ನೈಸರ್ಗಿಕ ಆಸ್ಪಿರೇಟೆಡ್ ಮತ್ತು ಟರ್ಬೋ ಪೆಟ್ರೋಲ್ ಎಂಜಿನ್ಗಳೊಂದಿಗೆ ಬರುತ್ತದೆ. ಐದು ಸದಸ್ಯರ ಕುಟುಂಬಕ್ಕೆ ಸೂಕ್ತವಾದ ಕಿಗರ್, 8-ಇಂಚಿನ ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಸೇರಿದಂತೆ ಹಲವಾರು ಆಧುನಿಕ ವೈಶಿಷ್ಟ್ಯಗಳ ಮೂಲಕ ನಿಮ್ಮ ಪ್ರಯಾಣವನ್ನು ಇನ್ನಷ್ಟು ಆನಂದಮಯವಾಗಿಸುತ್ತದೆ.
ಇದನ್ನೂ ಓದಿ: ಆಕರ್ಷಕ ವೈಶಿಷ್ಟ್ಯಗಳೊಂದಿಗೆ ಹ್ಯುಂಡೈ ವೆನ್ಯೂ ಅಡ್ವೆಂಚರ್ ಎಡಿಷನ್ ಬಿಡುಗಡೆ
ರೆನಾಲ್ಟ್ ಟ್ರೈಬರ್ (Renault Triber)
ಪರಿವಾರದ ಪ್ರಯಾಣಕ್ಕೆ ಸೂಕ್ತವಾದ ರೆನಾಲ್ಟ್ ಟ್ರೈಬರ್ ಎಂಪಿವಿ ಈಗ ಅತ್ಯಂತ ಆಕರ್ಷಕ ಬೆಲೆಯಲ್ಲಿ ಲಭ್ಯವಿದೆ. ಈ ಕಾರಿನ ಖರೀದಿಯ ಮೇಲೆ ₹50,000 ವರೆಗೆ ರಿಯಾಯಿತಿ ಪಡೆಯುವ ಅವಕಾಶವನ್ನು ಗ್ರಾಹಕರು ಪಡೆಯಬಹುದು. ಈ ರಿಯಾಯಿತಿಯಲ್ಲಿ ₹15,000 ನಗದು ರಿಯಾಯಿತಿ, ₹15,000 ವಿನಿಮಯ ರಿಯಾಯಿತಿ ಹಾಗೂ ₹20,000 ಲಾಯಲ್ಟಿ ಬೋನಸ್ ಸೇರಿವೆ. ಅಷ್ಟೇ ಅಲ್ಲ, ಈ ಕಾರಿನ ಇಎಂಐ ಕೇವಲ ₹8,999ರಿಂದ ಪ್ರಾರಂಭವಾಗುತ್ತದೆ. ಈ ಅದ್ಭುತ ಕೊಡುಗೆಯನ್ನು ನೀವು ತಪ್ಪಿಸಿಕೊಳ್ಳಬೇಡಿ.
ರೆನಾಲ್ಟ್ ಟ್ರೈಬರ್ ಎಂಪಿವಿ, ರೂ.5.99 ಲಕ್ಷದಿಂದ ರೂ.8.97 ಲಕ್ಷದ ಎಕ್ಸ್ ಶೋರೂಂ ಬೆಲೆಯೊಂದಿಗೆ, ಕೈಗೆಟುಕುವ ಬೆಲೆಯಲ್ಲಿ ಲಭ್ಯವಿದೆ. 1-ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ನೊಂದಿಗೆ, ಈ ಕಾರು ಲೀಟರಿಗೆ 18.2 ರಿಂದ 20 ಕಿಲೋಮೀಟರ್ವರೆಗೆ ಸುಲಭವಾಗಿ ಮೈಲೇಜ್ ನೀಡುತ್ತದೆ. 8-ಇಂಚಿನ ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ ಸೇರಿದಂತೆ ಅನೇಕ ಆಧುನಿಕ ವೈಶಿಷ್ಟ್ಯಗಳೊಂದಿಗೆ, ಟ್ರೈಬರ್ ನಿಮ್ಮ ಪ್ರಯಾಣವನ್ನು ಇನ್ನಷ್ಟು ಆನಂದದಾಯಕವಾಗಿಸುತ್ತದೆ.