ಟೋಕನ್ ಮೊತ್ತವಾಗಿ ಕೇವಲ 11,000 ರೂಪಾಯಿಗಳನ್ನು ಪಾವತಿಸುವ ಮೂಲಕ Nissan Magnite Facelift ಅನ್ನು ಬುಕ್ ಮಾಡಬಹುದು.
ಜಪಾನ್ ಮೂಲದ ಪ್ರಖ್ಯಾತ ವಾಹನ ತಯಾರಕ ಕಂಪನಿಯಾದ ನಿಸ್ಸಾನ್(Nissan), ಭಾರತೀಯ ಮಾರುಕಟ್ಟೆಯಲ್ಲಿ 2020ರಲ್ಲಿ ಮ್ಯಾಗ್ನೈಟ್(Magnite) ಎಂಬ ಜನಪ್ರಿಯ ಎಸ್ಯುವಿಯನ್ನು ಪರಿಚಯಿಸಿತ್ತು. ಈ ಮಾದರಿಯು ಗ್ರಾಹಕರ ಹೃದಯ ಗೆದ್ದು, ಭಾರೀ ಮಾರಾಟವನ್ನು ದಾಖಲಿಸಿತ್ತು. ಇಂದು, ನಿಸ್ಸಾನ್ ಕಂಪನಿಯು ಮ್ಯಾಗ್ನೈಟ್ ಫೇಸ್ಲಿಫ್ಟ್ (Nissan Magnite Facelift) ಮಾದರಿಯನ್ನು ಅದ್ದೂರಿಯಾಗಿ ಬಿಡುಗಡೆಗೊಳಿಸುವ ಮೂಲಕ ಗ್ರಾಹಕರ ನಿರೀಕ್ಷೆಗಳನ್ನು ಮತ್ತೊಮ್ಮೆ ಮೀರಿದೆ.
ಈಗ ಇದು ಹೆಚ್ಚು ಆಕರ್ಷಕ ವಿನ್ಯಾಸ ಮತ್ತು ಹಲವಾರು ಹೊಸ ವೈಶಿಷ್ಟ್ಯಗಳೊಂದಿಗೆ ಲಭ್ಯವಿದೆ. ವಿವಿಧ ಬಜೆಟ್ಗಳ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ರೂ.5.99 ಲಕ್ಷದಿಂದ ರೂ.11.50 ಲಕ್ಷದವರೆಗಿನ ಆಕರ್ಷಕ ಬೆಲೆಯಲ್ಲಿ ಲಭ್ಯವಿರುವ ಈ ಎಸ್ಯುವಿ, ವಿಸಿಯಾ, ವಿಸಿಯಾ ಪ್ಲಸ್, ಅಸೆಂಟಾ, ಎನ್-ಕನೆಕ್ಟಾ, ಟೆಕ್ನಾ ಮತ್ತು ಟೆಕ್ನಾ ಪ್ಲಸ್ ಎಂಬ ಆರು ವಿಭಿನ್ನ ರೂಪಾಂತರಗಳಲ್ಲಿ ಲಭ್ಯವಿದೆ.
ಇದನ್ನೂ ಓದಿ: ನಿಸ್ಸಾನ್ ಎಕ್ಸ್-ಟ್ರೈಲ್ ರೂ. 49.92 ಲಕ್ಷಕ್ಕೆ ಬಿಡುಗಡೆ

ನಿಸ್ಸಾನ್ ಮ್ಯಾಗ್ನೈಟ್ ಫೇಸ್ಲಿಫ್ಟ್: ಎಕ್ಸ್ಟೀರಿಯರ್
ಮ್ಯಾಗ್ನೈಟ್ ಫೇಸ್ಲಿಫ್ಟ್ನಲ್ಲಿ(Nissan Magnite Facelift) ಹೊರ ಮತ್ತು ಒಳಗಿನ ನೋಟಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಎಂಜಿನ್ನಲ್ಲಿ ಯಾವುದೇ ಬದಲಾವಣೆ ಮಾಡದಿದ್ದರೂ, ಕಾರಿನ ಹೊರಭಾಗಕ್ಕೆ ಆಕರ್ಷಕವಾದ ಹೊಸ ನೋಟ ನೀಡಲಾಗಿದೆ. ವಿಶೇಷವಾಗಿ, ದೊಡ್ಡ ಗಾತ್ರದ ಗ್ರಿಲ್ ಮತ್ತು ಗ್ಲಾಸಿ ಬ್ಲ್ಯಾಕ್ ಕ್ರೋಮ್ ಕಾರಿಗೆ ಅಗ್ರೀಸ್ಸೀವ್ ಲುಕ್ ನೀಡುತ್ತವೆ. ಇದಲ್ಲದೆ, ಎಲ್ಇಡಿ ಹೆಡ್ಲ್ಯಾಂಪ್ಗಳು, ಎಲ್ಇಡಿ ಟೇಲ್ಲ್ಯಾಂಪ್ಗಳು, ಎಲ್ ಆಕಾರದ ಡೇಟೈಮ್ ರನ್ನಿಂಗ್ ಲೈಟ್ಗಳು ಮತ್ತು ಫ್ಲಕ್ಸ್ ಸ್ಕೀಡ್ ಪ್ಲೇಟ್ನೊಂದಿಗೆ ಸಂಯೋಜಿತವಾದ ಫಾಗ್ಲ್ಯಾಂಪ್ಗಳು ಕಾರಿನ ಆಕರ್ಷಣೆಯನ್ನು ಹೆಚ್ಚಿಸುತ್ತವೆ. ಹೊಸ ಕಾರಿನ ಹಿಂಭಾಗವು ಹೊಸ ವಿನ್ಯಾಸದ ಎಲ್ಇಡಿ ಟೈಲ್ ಲ್ಯಾಂಪ್ಗಳಿಂದ ಹೊಳೆಯುತ್ತಿದೆ. ಈ ಆಕರ್ಷಕ ಟೈಲ್ ಲ್ಯಾಂಪ್ಗಳು ಕಾರಿಗೆ ಒಂದು ವಿಶಿಷ್ಟವಾದ ಗುರುತನ್ನು ನೀಡುತ್ತವೆ. ಹಾಗೆಯೇ, 16 ಇಂಚಿನ ಡೈಮಂಡ್-ಕಟ್ ಅಲಾಯ್ ವ್ಹೀಲ್ಗಳು ಕಾರಿನ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸುತ್ತವೆ.
ನಿಸ್ಸಾನ್ ಮ್ಯಾಗ್ನೈಟ್ ಫೇಸ್ಲಿಫ್ಟ್: ಇಂಟೀರಿಯರ್, ಫೀಚರ್ಗಳು
ಆಲ್ ಬ್ಲ್ಯಾಕ್ ಥೀಮ್ನಲ್ಲಿ ಸಿದ್ಧಪಡಿಸಲಾದ ಕಾರಿನ ಒಳಾಂಗಣವು ಬ್ಲ್ಯಾಕ್ ಮತ್ತು ಕಾಪರ್ ಬಣ್ಣಗಳ ಸಂಯೋಜನೆಯೊಂದಿಗೆ ಅತ್ಯಂತ ಆಕರ್ಷಕವಾಗಿದೆ. ಡ್ಯುಯಲ್-ಟೋನ್ ಡ್ಯಾಶ್ಬೋರ್ಡ್ ಮತ್ತು ಸೀಟುಗಳು ಒಳಾಂಗಣಕ್ಕೆ ಒಂದು ವಿಶಿಷ್ಟವಾದ ನೋಟವನ್ನು ನೀಡುತ್ತವೆ. 8 ಇಂಚಿನ ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ ಮತ್ತು 7 ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ, ಹಿಂದಿನ ಎಸಿ ವೆಂಟ್ಗಳು, ವೈರ್ಲೆಸ್ ಚಾರ್ಜಿಂಗ್ ಪ್ಯಾಡ್, USB ಟೈಪ್-ಸಿ ಪೋರ್ಟ್ಗಳು, ಆಟೋ ಕ್ಲೈಮೆಟ್ ಕಂಟ್ರೋಲ್, ಮುಂಭಾಗ ಮತ್ತು ಹಿಂಭಾಗದ ಆರ್ಮ್ರೆಸ್ಟ್ಗಳನ್ನು ಸಹ ಒಳಗೊಂಡಿದೆ. ಆದಾಗ್ಯೂ, ಇದು ಇನ್ನೂ ಎಲೆಕ್ಟ್ರಿಕ್ ಸನ್ರೂಫ್ನೊಂದಿಗೆ ಬರುವುದಿಲ್ಲ. ನಾಲ್ಕು ವಿವಿಧ ಬಣ್ಣಗಳ ಆಂಬಿಯೆಂಟ್ ಲೈಟಿಂಗ್ನೊಂದಿಗೆ ನಿಮ್ಮ ಒಳಾಂಗಣವನ್ನು ನಿಮ್ಮ ಇಷ್ಟದಂತೆ ಕಸ್ಟಮೈಸ್ ಮಾಡಬಹುದು.
ಇದನ್ನೂ ಓದಿ: ಸಿಟ್ರೊಯೆನ್ ಏರ್ಕ್ರಾಸ್ 7-ಸೀಟರ್ ಫ್ಯಾಮಿಲಿ ಎಸ್ಯುವಿ ಕೇವಲ ರೂ. 8.49 ಲಕ್ಷಕ್ಕೆ ಲಾಂಚ್!

ಕಾರಿನಲ್ಲಿನ ಹೊಸ ವೈಶಿಷ್ಟ್ಯಗಳು ಅನುಕೂಲಕರವಾದ ಪುಶ್ ಸ್ಟಾರ್ಟ್/ಸ್ಟಾಪ್ ಬಟನ್ ಮತ್ತು ಸ್ಟೀರಿಂಗ್ ವೀಲ್ನಲ್ಲಿ ನಿಯಂತ್ರಣಗಳನ್ನು ಒಳಗೊಂಡಿವೆ. ನೀವು ದೂರದಿಂದ ರಿಮೋಟ್ ಸ್ಟಾರ್ಟ್ ಅನ್ನು ಮಾಡಲು ಅನುಮತಿಸುವ ಹೊಸ ಕೀ ಫೋಬ್ ಅನ್ನು ಸಹ ಕಾಣಬಹುದು. ಸುರಕ್ಷತೆಯ ದೃಷ್ಟಿಯಿಂದ, ಕಾರು ಈಗ ಆಟೋ ಹೆಡ್ಲ್ಯಾಂಪ್ಗಳು, ಆಟೋ-ಡಿಮ್ಮಿಂಗ್ ರಿಯರ್ ವ್ಯೂ ಮಿರರ್ ಮತ್ತು 360 ಡಿಗ್ರಿ ಅರೌಂಡ್-ವ್ಯೂ ಮಾನಿಟರ್ ಅನ್ನು ಹೊಂದಿದೆ (AVM). ಆರು ಏರ್ಬ್ಯಾಗ್ಗಳು, ಹಿಲ್ ಸ್ಟಾರ್ಟ್ ಅಸಿಸ್ಟ್, ಕ್ರೂಸ್ ಕಂಟ್ರೋಲ್, ಟ್ರಾಕ್ಷನ್ ಕಂಟ್ರೋಲ್, ಕ್ಲಸ್ಟರ್ ಅಯೋನೈಜರ್, ಎಬಿಎಸ್ ಜೊತೆ ಇಬಿಡಿ, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ಇಎಸ್ಪಿ) ಆಟೋ ಹೆಡ್ಲ್ಯಾಂಪ್ಗಳು, ವೆಹಿಕಲ್ ಸ್ಟೆಬಿಲಿಟಿ ಮ್ಯಾನೇಜ್ಮೆಂಟ್, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ ಹಾಗೂ ಮುಂಭಾಗ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್ಗಳು, ಮೂರು ಪಾಯಿಂಟ್ ಸೀಟ್ ಬೆಲ್ಟ್ಗಳು ಮತ್ತು ಸೀಟ್ ಬೆಲ್ಟ್ ರಿಮೈಂಡರ್ಗಳು ಎಲ್ಲಾ ಸೀಟುಗಳಿಗೆ ಸ್ಟ್ಯಾಂಡರ್ಡ್ ಆಗಿವೆ.

ಇದನ್ನೂ ಓದಿ: ಎಂಜಿ ಆಸ್ಟರ್ ಬ್ಲ್ಯಾಕ್ ಸ್ಟಾರ್ಮ್ ಎಡಿಷನ್ ರೂ. 13.45 ಲಕ್ಷಕ್ಕೆ ಬಿಡುಗಡೆ
ನಿಸ್ಸಾನ್ ಮ್ಯಾಗ್ನೈಟ್ ಫೇಸ್ಲಿಫ್ಟ್: ಪವರ್ ಟ್ರೈನ್
ಪವರ್ ಟ್ರೈನ್ ವಿಷಯದಲ್ಲಿ, Nissan Magnite Facelift ಹಿಂದಿನ ಮಾದರಿಯಂತೆಯೇ ಅದೇ ಸೆಟ್ಅಪ್ ಅನ್ನು ಹೊಂದಿದೆ. ಇದು ಎರಡು ಆವೃತ್ತಿಗಳಲ್ಲಿ ಲಭ್ಯವಿರುವ 1.0-ಲೀಟರ್, ಮೂರು-ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ನಿಮಗೆ 71 bhp ಮತ್ತು 96 Nm ಟಾರ್ಕ್ ನೀಡುತ್ತದೆ, ಆದರೆ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ 99 bhp ಮತ್ತು 160 Nm ಟಾರ್ಕ್ ನೀಡುತ್ತದೆ.
ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ಗೆ ಮ್ಯಾನುವಲ್ ಹಾಗೂ ಆಟೋಮೆಟಿಕ್ ಗೆಯರ್ಬಾಕ್ಸ್ಗಳು ಆಯ್ಕೆ ಸಿಗುತ್ತವೆ. ಟರ್ಬೋಚಾರ್ಜ್ಡ್ ಮಾಡೆಲ್ಗೆ ಸಿವಿಟಿ ಆಟೋಮ್ಯಾಟಿಕ್ ಗೆಯರ್ಬಾಕ್ಸ್ ಆಯ್ಕೆ ಮಾತ್ರ ಸಿಗುತ್ತದೆ. ನಿಸ್ಸಾನ್ ಪ್ರಕಾರ, ಮ್ಯಾನುವಲ್ ಗೇರ್ಬಾಕ್ಸ್ ಮಾಡೆಲ್ನಲ್ಲಿ ಲೀಟರಿಗೆ 20 ಕಿಲೋಮೀಟರ್ ಮೈಲೇಜ್ ಸಿಗುತ್ತದೆ. ಸಿವಿಟಿ ಆಟೋಮ್ಯಾಟಿಕ್ ಮಾಡೆಲ್ನಲ್ಲಿ ಲೀಟರಿಗೆ 17.4 ಕಿಲೋಮೀಟರ್ ಮೈಲೇಜ್ ಸಿಗುತ್ತದೆ.