Volkswagen Virtus: ಹೊಸ ವೋಕ್ಸ್‌ವ್ಯಾಗನ್ ವರ್ಟಸ್ ಜಿಟಿ ಲೈನ್ ಮತ್ತು ಜಿಟಿ ಪ್ಲಸ್ ಸ್ಪೋರ್ಟ್ ಬಿಡುಗಡೆ

Volkswagen Virtus GT Line ಕಾರಿನ ಬೆಲೆ 14.07 ಲಕ್ಷ ರೂಪಾಯಿ ಹಾಗೂ GT Plus Sport ಕಾರಿನ ಬೆಲೆ 17.84 ಲಕ್ಷ ರೂಪಾಯಿ ಇದೆ.

ಪ್ರತಿಷ್ಠಿತ ವೋಕ್ಸ್‌ವ್ಯಾಗನ್ (Volkswagen) ಕಂಪನಿಯು ತನ್ನ ಜನಪ್ರಿಯ ವರ್ಟಸ್ ಸೆಡಾನ್‌ಗೆ ಎರಡು ಹೊಸ ಆಕರ್ಷಕ ಆವೃತ್ತಿಗಳನ್ನು ಬಿಡುಗಡೆ ಮಾಡಿದೆ. ಜಿಟಿ ಲೈನ್ ಮತ್ತು ಜಿಟಿ ಪ್ಲಸ್ ಸ್ಪೋರ್ಟ್ (Volkswagen Virtus GT Line And GT Plus Sport) ಎಂಬ ಹೆಸರಿನ ಈ ಹೊಸ ಮಾದರಿಗಳು ಗ್ರಾಹಕರನ್ನು ಮೆಚ್ಚಿಸುವಂತಹ ಹಲವಾರು ಹೊಸ ವೈಶಿಷ್ಟ್ಯಗಳನ್ನು ಹೊಂದಿವೆ. ಜಿಟಿ ಲೈನ್ ಮಾದರಿಯನ್ನು ರೂ. 14.07 ಲಕ್ಷಗಳಿಂದ ಖರೀದಿಸಬಹುದಾಗಿದ್ದು, ಜಿಟಿ ಪ್ಲಸ್ ಸ್ಪೋರ್ಟ್ ಮಾದರಿಯ ಬೆಲೆ ರೂ. 17.84 ಲಕ್ಷಗಳಿಂದ ಆರಂಭವಾಗುತ್ತದೆ (ಎಕ್ಸ್-ಶೋರೂಮ್). ಈ ಹೊಸ ಮಾದರಿಗಳ ಬಿಡುಗಡೆಯೊಂದಿಗೆ, ವೋಕ್ಸ್‌ವ್ಯಾಗನ್ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಪ್ರಾಬಲ್ಯವನ್ನು ಮತ್ತಷ್ಟು ಬಲಪಡಿಸುವ ನಿರೀಕ್ಷೆಯಿದೆ.

ಜಿಟಿ ಲೈನ್ ಮತ್ತು ಜಿಟಿ ಪ್ಲಸ್ ಸ್ಪೋರ್ಟ್: ಎಕ್ಸ್‌ಟೀರಿಯರ್‌, ಡಿಸೈನ್‌

ಹೊಸ Volkswagen Virtus GT Line ಮತ್ತು GT Plus Sport ಮಾದರಿಗಳು ತಮ್ಮ ಸ್ಪೋರ್ಟಿ ನೋಟಕ್ಕೆ ಹೆಚ್ಚು ಒತ್ತು ನೀಡುತ್ತವೆ. ಕಪ್ಪು ಬಣ್ಣದ ಗ್ರಿಲ್, ಬಂಪರ್‌ಗಳು , “ವರ್ಟಸ್‌” ಬ್ಯಾಡ್ಜ್‌ಗಳು ಮತ್ತು 16-ಇಂಚಿನ ಅಲಾಯ್‌ ವೀಲ್‌ಗಳು ಕಾರಿಗೆ ಆಕರ್ಷಕವಾದ ನೋಟವನ್ನು ನೀಡುತ್ತವೆ. ಸ್ಮೋಕ್ಡ್ ಎಫೆಕ್ಟ್‌ನೊಂದಿಗೆ ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು ಮತ್ತು ಟೈಲ್ ಲ್ಯಾಂಪ್‌ಗಳು ಕಾರಿನ ಒಟ್ಟಾರೆ ಡಾರ್ಕ್ ಥೀಮ್‌ಗೆ ಪೂರಕವಾಗಿವೆ. ಕಪ್ಪು ಬಣ್ಣದ ವಿಂಡೋ ಬೆಲ್ಟ್‌ಲೈನ್ ಕಾರಿನ ಪ್ರೊಫೈಲ್ ಅನ್ನು ಹೆಚ್ಚು ಆಕರ್ಷಕವಾಗಿಸುತ್ತದೆ.

ಜಿಟಿ ಪ್ಲಸ್ ಸ್ಪೋರ್ಟ್ ಮಾದರಿಯು ಹೆಚ್ಚುವರಿಯಾಗಿ ಕೆಂಪು ಬಣ್ಣದ “GT” ಬ್ಯಾಡ್ಜ್‌ಗಳನ್ನು ಹೊಂದಿದ್ದು, ಕಾರಿಗೆ ಸ್ಪೋರ್ಟಿ ನೋಟವನ್ನು ನೀಡುತ್ತದೆ. ಕಪ್ಪು ಹಿಂಭಾಗದ ಸ್ಪಾಯ್ಲರ್, ಕೆಂಪು ಬ್ರೇಕ್ ಕ್ಯಾಲಿಪರ್‌ಗಳು, ಡ್ಯುಯಲ್-ಟೋನ್ ರೂಫ್, ಮುಂಭಾಗದ ಲಿಪ್ ಬಂಪರ್, ಹಿಂಭಾಗದ ಬಂಪರ್, ಸೈಡ್ ರನ್ನಿಂಗ್ ಬೋರ್ಡ್ ಮತ್ತು ಹಿಂಭಾಗದ ಡಿಫ್ಯೂಸರ್‌ನಂತಹ ವಿಶೇಷವಾದ ಏರೋ ಕಿಟ್‌ಗಳು ಕಾರಿಗೆ ಸ್ಪೋರ್ಟಿ ವೈಬ್ ನೀಡುತ್ತವೆ.

ಇದನ್ನೂ ಓದಿ: ಅಕ್ಟೋಬರ್ ಹಬ್ಬದ ಸೀಸನ್‌ನಲ್ಲಿ ಬಿಡುಗಡೆಯಾಗಲಿರುವ 5 ಹೊಸ ಕಾರುಗಳು ಮತ್ತು SUVಗಳು

Volkswagen Virtus GT Line and GT Plus Sport
Volkswagen Virtus GT Line and GT Plus Sport

ಜಿಟಿ ಲೈನ್ ಮತ್ತು ಜಿಟಿ ಪ್ಲಸ್ ಸ್ಪೋರ್ಟ್: ಇಂಟೀರಿಯರ್, ಫೀಚರ್‌ಗಳು

ಈ ಹೊಸ ಆವೃತ್ತಿಗಳ ಒಳಾಂಗಣವು ಸಂಪೂರ್ಣವಾಗಿ ಕಪ್ಪು ಬಣ್ಣದಲ್ಲಿರುವ ಥೀಮ್ ಅನ್ನು ಹೊಂದಿದೆ. ಮೊದಲಿನಂತೆ ಡ್ಯಾಶ್‌ಬೋರ್ಡ್‌ನಲ್ಲಿ ಕೆಂಪು ಬಣ್ಣದ ಬದಲಾಗಿ ಹೊಳಪು ಕಪ್ಪು ಬಣ್ಣವನ್ನು ಬಳಸಲಾಗಿದೆ. ಇದರೊಂದಿಗೆ, ಎರಡೂ ಆವೃತ್ತಿಗಳಲ್ಲೂ ಅಲ್ಯೂಮಿನಿಯಂ ಪೆಡಲ್‌ಗಳನ್ನು ಅಳವಡಿಸಲಾಗಿದೆ. ಹಾಗೆಯೇ, ಹೆಡ್‌ಲೈನರ್, ಡೋರ್ ಹ್ಯಾಂಡಲ್‌ಗಳು, ಸನ್‌ವೈಸರ್‌ಗಳು, ಗ್ರಾಬ್ ಹ್ಯಾಂಡಲ್‌, ಡೋರ್ ಟ್ರಿಮ್ ಮತ್ತು ಡ್ಯಾಶ್‌ಬೋರ್ಡ್‌ನಂತಹ ಭಾಗಗಳು ಕಪ್ಪು ಬಣ್ಣದಲ್ಲಿರುವಂತೆ ವಿನ್ಯಾಸ ಮಾಡಲಾಗಿದೆ.

ಜಿಟಿ ಲೈನ್ ವೇರಿಯೆಂಟ್‌ಗಳು ಕಪ್ಪು ಬಣ್ಣದ ಸೆಮಿ-ಲೆಥೆರೆಟ್ ಸೀಟ್‌ಗಳೊಂದಿಗೆ ಬಂದರೆ, ಜಿಟಿ ಪ್ಲಸ್ ಸ್ಪೋರ್ಟ್ (Volkswagen GT Plus Sport) ವೇರಿಯೆಂಟ್‌ಗಳು ಸ್ಪೋರ್ಟಿ ನೋಟಕ್ಕಾಗಿ ಕೆಂಪು ಬಣ್ಣದ ಹೊಲಿಗೆಯೊಂದಿಗೆ ಕಪ್ಪು ಬಣ್ಣದ ಸಂಪೂರ್ಣ ಲೆಥೆರೆಟ್ ಕವರ್‌ ಹೊಂದಿವೆ. ಇದಲ್ಲದೆ, ಸ್ಟೀರಿಂಗ್ ಚಕ್ರದಲ್ಲಿನ ಕೆಂಪು ಬಣ್ಣದ ಇನ್ಸರ್ಟ್‌ ಈ ವಾಹನದ ಸ್ಪೋರ್ಟಿ ಸ್ವರೂಪವನ್ನು ಇನ್ನಷ್ಟು ಎತ್ತಿ ತೋರಿಸುತ್ತದೆ.

ಇದನ್ನೂ ಓದಿ: 2024 ಸ್ಕೋಡಾ ಕುಶಾಕ್ ಒನಿಕ್ಸ್ ಆಟೋಮ್ಯಾಟಿಕ್ ಭಾರತದಲ್ಲಿ ಬಿಡುಗಡೆ ಬೆಲೆ ರೂ 13.49 ಲಕ್ಷ

ಜಿಟಿ ಲೈನ್ (Volkswagen Virtus GT Line) ವೇರಿಯೆಂಟ್‌ಗಳು 10.1 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 8 ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ, ಆಟೋಮ್ಯಾಟಿಕ್‌ ಕ್ಲೈಮೇಟ್‌ ಕಂಟ್ರೋಲ್‌, ಕ್ರೂಸ್ ಕಂಟ್ರೋಲ್, ಎಲೆಕ್ಟ್ರಿಕ್ ಸನ್‌ರೂಫ್ ಮತ್ತು ಕೆಂಪು ಆಂಬಿಯೆಂಟ್ ಲೈಟಿಂಗ್‌ನಂತಹ  ಆಧುನಿಕ ವೈಶಿಷ್ಟ್ಯಗಳನ್ನು ಹೊಂದಿವೆ.

ಸುರಕ್ಷತೆಯ ದೃಷ್ಟಿಯಿಂದ, ಈ ಮಾದರಿಯು 6 ಏರ್‌ಬ್ಯಾಗ್‌ಗಳು, ಹಿಲ್ ಹೋಲ್ಡ್ ಕಂಟ್ರೋಲ್,  ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ABS, EBD ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ ನಂತಹ  ಅತ್ಯಾಧುನಿಕ ಸುರಕ್ಷತಾ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಜಿಟಿ ಲೈನ್‌ಗಿಂತ, ಜಿಟಿ ಪ್ಲಸ್ ಸ್ಪೋರ್ಟ್ ವೇರಿಯೆಂಟ್‌ನಲ್ಲಿ ಹೆಚ್ಚುವರಿಯಾಗಿ , ಆಂಪ್ಲಿಫೈಯರ್ ಮತ್ತು ಸಬ್ ವೂಫರ್ , ಗಾಳಿಯಾಡುವ ಮುಂಭಾಗದ ಸೀಟುಗಳು ಮತ್ತು ಡ್ರೈವರ್ ಮತ್ತು ಪ್ಯಾಸೆಂಜರ್ ಇಬ್ಬರಿಗೂ ಎಲೆಕ್ಟ್ರಿಕ್ ಆಗಿ ಹೊಂದಾಣಿಕೆ ಮಾಡಬಹುದಾದ ಮುಂಭಾಗದ ಸೀಟ್‌ಗಳನ್ನು ನೀಡುತ್ತದೆ.

ಇದನ್ನೂ ಓದಿ: 60 ನಿಮಿಷಗಳಲ್ಲಿ 1.76 ಲಕ್ಷ ಮಹೀಂದ್ರಾ ಥಾರ್‌ ರಾಕ್ಸ್ ಬುಕಿಂಗ್, ಮಾರುಕಟ್ಟೆಯಲ್ಲಿ ಹೊಸ ದಾಖಲೆ

ವೋಕ್ಸ್‌ವ್ಯಾಗನ್ ವರ್ಟಸ್ ಜಿಟಿ ಲೈನ್ ಮತ್ತು ಜಿಟಿ ಪ್ಲಸ್ ಸ್ಪೋರ್ಟ್: ಪವರ್ ಟ್ರೈನ್

ವರ್ಟಸ್ ಜಿಟಿ ಲೈನ್‌ನಲ್ಲಿ, 1.0-ಲೀಟರ್, ಮೂರು-ಸಿಲಿಂಡರ್ ಟಿಎಸ್ಐ ಟರ್ಬೋ-ಪೆಟ್ರೋಲ್ ಎಂಜಿನ್ ಲಭ್ಯವಿದೆ, ಇದು 113 ಬಿಹೆಚ್ಪಿ ಪವರ್ ಮತ್ತು 178 Nm ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‌ಗೆ 6-ಸ್ಪೀಡ್ ಮ್ಯಾನ್ಯುವಲ್ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಅನ್ನು ಆಯ್ಕೆ ಮಾಡಬಹುದು.

ವಿರ್ಟಸ್ ಜಿಟಿ ಪ್ಲಸ್ ಸ್ಪೋರ್ಟ್ ಶಕ್ತಿಯುತವಾದ 148 ಬಿಹೆಚ್ಪಿ ಪವರ್ ಮತ್ತು 250 Nm ಟಾರ್ಕ್, 1.5-ಲೀಟರ್ TSI ಟರ್ಬೋ-ಪೆಟ್ರೋಲ್ ಎಂಜಿನ್‌ನೊಂದಿಗೆ ಬರುತ್ತದೆ. ಇದನ್ನು 6-ಸ್ಪೀಡ್ ಮ್ಯಾನುವಲ್ ಅಥವಾ 7-ಸ್ಪೀಡ್ DSG ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್‌ನೊಂದಿಗೆ ಆಯ್ಕೆ ಮಾಡಬಹುದು.

Leave a Comment