Kia EV9 ಹೊಸ ಎಲೆಕ್ಟ್ರಿಕ್ SUV ಅನ್ನು ಕೇವಲ GT ಲೈನ್ ಎಂಬ ಹೈ-ಎಂಡ್ ಮಾದರಿಯಲ್ಲಿ ಮಾತ್ರ ಬಿಡುಗಡೆ ಮಾಡಲಾಗಿದೆ.
ಕಿಯಾ ಇಂಡಿಯಾ (Kia India) ತನ್ನ ಗ್ರಾಹಕರಿಗೆ ಮತ್ತೊಂದು ಅದ್ಭುತ ಆಯ್ಕೆಯನ್ನು ನೀಡಿದೆ. ಭಾರತೀಯ ಮಾರುಕಟ್ಟೆಯಲ್ಲಿ ಕಿಯಾ EV9 (Kia EV9) ಎಂಬ ಹೊಸದಾಗಿ ಬಿಡುಗಡೆಯಾದ ಎಲೆಕ್ಟ್ರಿಕ್ ಎಸ್ಯುವಿ (Electric SUV) ಈಗ ಬ್ರ್ಯಾಂಡ್ನ ಪ್ರಮುಖ ಆಕರ್ಷಣೆಯಾಗಿದೆ. ಈ ಆಧುನಿಕ ವಾಹನವು ಕಿಯಾ ಕಂಪನಿಯ E-GMP ಪ್ಲಾಟ್ಫಾರ್ಮ್ನಲ್ಲಿ ನಿರ್ಮಾಣವಾಗಿದ್ದು, ಮೂರು ಸಾಲುಗಳ ಆಸನ ವ್ಯವಸ್ಥೆಯೊಂದಿಗೆ ಸಂಪೂರ್ಣ ಎಲೆಕ್ಟ್ರಿಕ್ ಅನುಭವವನ್ನು ನೀಡುತ್ತದೆ. ಕೇವಲ ಜಿಟಿ ಲೈನ್ ಎಂಬ ಒಂದು ರೂಪಾಂತರದಲ್ಲಿ ಲಭ್ಯವಿರುವ ಈ ಕಾರಿನ ಬೆಲೆ ರೂ. 1.29 ಕೋಟಿಯಿಂದ ಆರಂಭವಾಗುತ್ತದೆ.
ಇದನ್ನೂ ಓದಿ: ಕಿಯಾ ಕಾರ್ನಿವಲ್ 7-ಸೀಟರ್ ಫ್ಯಾಮಿಲಿ ಕಾರು ಬಿಡುಗಡೆ: ವೈಶಿಷ್ಟ್ಯಗಳು ಮತ್ತು ಬೆಲೆ ವಿವರಗಳು
ಕಿಯಾ ಇವಿ9 ಎಲೆಕ್ಟ್ರಿಕ್ ಎಸ್ಯುವಿ: ಎಕ್ಸ್ಟೀರಿಯರ್, ಡಿಸೈನ್
ಕಿಯಾ EV9 ಒಂದು ಅತ್ಯಾಧುನಿಕ ಎಲೆಕ್ಟ್ರಿಕ್ SUV ಆಗಿದ್ದು, ಅದರ ಬಾಕ್ಸಿ ಆಕಾರದ ವಿನ್ಯಾಸ ಮತ್ತು ಭವಿಷ್ಯದ ತಂತ್ರಜ್ಞಾನದಿಂದ ಎಲ್ಲರ ಗಮನ ಸೆಳೆಯುತ್ತದೆ. ಈ ವಾಹನದ ಮುಂಭಾಗದಲ್ಲಿ ಲಂಬವಾಗಿ ಜೋಡಿಸಲಾದ ಆಟೋಮ್ಯಾಟಿಕ್ ಎಲ್ಇಡಿ ಹೆಡ್ಲ್ಯಾಂಪ್ಗಳು, ಎಲ್ಇಡಿ ಪ್ರಾಜೆಕ್ಟರ್ ಹೆಡ್ಲ್ಯಾಂಪ್ಗಳು ಮತ್ತು ಕಿಯಾದ ವಿಶಿಷ್ಟವಾದ ಟೈಗರ್ ನೋಸ್ ಗ್ರಿಲ್ ನಮ್ಮನ್ನು ಆಕರ್ಷಿಸುತ್ತದೆ. ಕಿಯಾ ಲೆಟರಿಂಗ್ ಜೊತೆಗೆ ಅಚ್ಚುಕಟ್ಟಾದ ಟೈಲ್ಗೇಟ್, ಸ್ಕಿಡ್ ಪ್ಲೇಟ್ ಹಾಗೂ ಗಟ್ಟಿಮುಟ್ಟಾದ ಡ್ಯುಯಲ್-ಟೋನ್ ಬಂಪರ್ ಕಂಡುಬರುತ್ತವೆ , ಫ್ಲಶ್-ಫಿಟ್ಟಿಂಗ್ ಡೋರ್ ಹ್ಯಾಂಡಲ್ಗಳು ಮತ್ತು ಕಪ್ಪು ಕ್ಲಾಡಿಂಗ್ಗಳು ಈ ಕಾರಿನ ಆಕರ್ಷಣೆಯನ್ನು ಇನ್ನಷ್ಟು ಹೆಚ್ಚಿಸುತ್ತವೆ.

Kia EV9 Electric SUV 20 ರಿಂದ 22 ಇಂಚುಗಳವರೆಗಿನ ವ್ಹೀಲ್ ಗಳು ಮತ್ತು 200 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ. ಗಾತ್ರದ ವಿಷಯಕ್ಕೆ ಬಂದರೆ, EV9 5,015 ಮಿಮೀ ಉದ್ದ, 1,980 ಮಿಮೀ ಅಗಲ, ಮತ್ತು 1,780 ಮಿಮೀ ಎತ್ತರವನ್ನು ಹೊಂದಿದ್ದು, 3,100 ಮಿಮೀ ವೀಲ್ಬೇಸ್ ಮತ್ತು 198 ಮಿಮೀ ಗ್ರೌಂಡ್ ಕ್ಲಿಯರೆನ್ಸ್ ಅನ್ನು ಒಳಗೊಂಡಿದೆ. ಕಿಯಾ EV9 ಕಾರು ಐದು ಆಕರ್ಷಕ ಬಣ್ಣಗಳಲ್ಲಿ ಲಭ್ಯವಿದೆ: ಸ್ನೋ ವೈಟ್ ಪರ್ಲ್, ಓಷನ್ ಬ್ಲೂ, ಪೆಬಲ್ ಗ್ರೇ, ಪ್ಯಾಂಥೆರಾ ಮೆಟಲ್, ಮತ್ತು ಅರೋರಾ ಬ್ಲ್ಯಾಕ್ ಪರ್ಲ್.
ಇದನ್ನೂ ಓದಿ: ಕಿಯಾ ಸೆಲ್ಟೋಸ್ X-ಲೈನ್ ಈಗ ಹೊಸ ಬಣ್ಣದಲ್ಲಿ ಮಿಂಚುತ್ತಿದೆ
ಕಿಯಾ ಇವಿ9 ಎಲೆಕ್ಟ್ರಿಕ್ ಎಸ್ಯುವಿ: ಇಂಟೀರಿಯರ್, ಫೀಚರ್ಗಳು
ಈ ವಾಹನದ ಒಳಭಾಗದಲ್ಲಿ ಇದರ ಟ್ರಿಪಲ್ ಸ್ಕ್ರೀನ್ ಸೆಟಪ್ ಪ್ರಮುಖ ಹೈಲೈಟ್ಸ್ ಆಗಿದೆ, 12.3-ಇಂಚಿನ ಡ್ಯುಯಲ್ ಡಿಸ್ಪ್ಲೇಗಳು, , 5.0-ಇಂಚಿನ ಕ್ಲೈಮೇಟ್ ಕಂಟ್ರೋಲ್ ಪ್ಯಾನಲ್, ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ, ಲೆದರೆಟ್ ಸೀಟುಗಳು, ಮುಂಭಾಗದ ಸೀಟುಗಳಿಗೆ ಎಲೆಕ್ಟ್ರಾನಿಕ್ ಅಜೆಸ್ಟ್ಮೆಂಟ್ ಫೀಚರ್ಸ್, ಡ್ಯುಯಲ್ ಎಲೆಕ್ಟ್ರಿಕ್ ಸನ್ರೂಫ್ಗಳು, 3 ಝೋನ್ನ ಕ್ಲೈಮೇಟ್ ಕಂಟ್ರೋಲ್, ಹೆಡ್-ಅಪ್ ಡಿಸ್ಪ್ಲೇ, ವೈರ್ಲೆಸ್ ಚಾರ್ಜರ್, ಯುಎಸ್ಬಿ ಟೈಪ್ ಸಿ ಪೋರ್ಟ್ಗಳು, ಕಿಯಾ ಕನೆಕ್ಟ್, 14-ಸ್ಪೀಕರ್ ಮೆರಿಡಿಯನ್ ಸೌಂಡ್ ಸಿಸ್ಟಮ್, ಡಿಜಿಟಲ್ ಕೀ, ಡಿಜಿಟಲ್ ಇನ್ಸೈಡ್ ರಿಯರ್ ವ್ಯೂ ಮಿರರ್, ಮತ್ತು 64-ಬಣ್ಣದ ಆಂಬಿಯೆಂಟ್ ಲೈಟಿಂಗ್ನಂತಹ ಹಲವಾರು ಆಧುನಿಕ ವೈಶಿಷ್ಟ್ಯಗಳನ್ನು ಹೊಂದಿದೆ.

ಸುರಕ್ಷತೆಯ ವಿಷಯಕ್ಕೆ ಬಂದಾಗ, ಈ ಕಾರು 10 ಏರ್ಬ್ಯಾಗ್ಗಳು, ESC, ABS, ಹಿಲ್ ಡಿಸೆಂಟ್ ಕಂಟ್ರೋಲ್, ವೆಹಿಕಲ್ ಸ್ಟೆಬಿಲಿಟಿ ಮ್ಯಾನೇಜ್ಮೆಂಟ್, ಮುಂಭಾಗ, ಸೈಡ್ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್ಗಳು, ಎಲ್ಲಾ ಚಕ್ರಗಳ ಡಿಸ್ಕ್ ಬ್ರೇಕ್ಗಳು ಮತ್ತು 360-ಡಿಗ್ರಿ ಕ್ಯಾಮೆರಾಗಳಿಂದ ತುಂಬಿದೆ. ಇದರ ಜೊತೆಗೆ, ಇದು ಲೆವೆಲ್ 2 ADAS ಜೊತೆಗೆ ಬರುತ್ತದೆ, ಇದರಲ್ಲಿ ಫಾರ್ವರ್ಡ್ ಕೋಲಿಷನ್ ವಾರ್ನಿಂಗ್, ಅವಾಯ್ಡೆನ್ಸ್ ಅಸಿಸ್ಟ್, ಲೇನ್ ಡಿಪಾರ್ಚರ್ ವಾರ್ನಿಂಗ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಹೈ ಬೀಮ್ ಅಸಿಸ್ಟ್, ಲೇನ್ ಕೀಪ್ ಅಸಿಸ್ಟ್ ಮತ್ತು ಇನ್ನೂ ಹಲವು ತಂತ್ರಜ್ಞಾನಗಳನ್ನು ಒಳಗೊಂಡಿದೆ.
ಇದನ್ನೂ ಓದಿ: ಭಾರತದಲ್ಲಿ 4.5 ಲಕ್ಷ ಕಿಯಾ ಸೋನೆಟ್ ಮಾರಾಟದೊಂದಿಗೆ ಹೊಸ ದಾಖಲೆ
ಕಿಯಾ ಇವಿ9 ಎಲೆಕ್ಟ್ರಿಕ್ ಎಸ್ಯುವಿ: ಪವರ್ ಟ್ರೈನ್, ಬ್ಯಾಟರಿ, ರೇಂಜ್
ಭಾರತದಲ್ಲಿ ಲಭ್ಯವಿರುವ Kia EV9 Electric SUV ದೊಡ್ಡ 99.8 kWh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದ್ದು, ಪ್ರತಿ ಆಕ್ಸಲ್ನಲ್ಲಿ ಎರಡು ಎಲೆಕ್ಟ್ರಿಕ್ ಮೋಟರ್ಗಳನ್ನು ಬಳಸಿಕೊಂಡು ಎಲ್ಲಾ ಚಕ್ರಗಳಿಗೆ ಶಕ್ತಿಯನ್ನು ನೀಡುವ AWD ವ್ಯವಸ್ಥೆಯನ್ನು ಹೊಂದಿದೆ. ಈ ಎಂಜಿನ್ಗಳು ಒಟ್ಟು 383 ಬಿಹೆಚ್ಪಿ ಪವರ್ ಮತ್ತು 700 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಪೂರ್ಣ ಗಾತ್ರದ ಎಸ್ಯುವಿ ಕೇವಲ 5.3 ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ.. ಶ್ರೇಣಿಯ ದೃಷ್ಟಿಯಿಂದ, ಇದು ಎಆರ್ಎಐ-ಪ್ರಮಾಣೀಕೃತ (ARAI-certified) 561 ಕಿಮೀ ರೇಂಜ್ ಅನ್ನು ನೀಡುತ್ತದೆ. 350kW ಡಿಸಿ ಫಾಸ್ಟ್ ಚಾರ್ಜರ್ನೊಂದಿಗೆ, ನೀವು ಕೇವಲ 24 ನಿಮಿಷಗಳಲ್ಲಿ ಬ್ಯಾಟರಿಯನ್ನು 10% ರಿಂದ 80% ತನಕ ಚಾರ್ಜ್ ಮಾಡಬಹುದು.