ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಟಾಪ್ 5 ಬೆಸ್ಟ್ ಸಿಎನ್ಜಿ ಕಾರುಗಳು (Top 5 Best CNG Cars)
ಇಂಧನ ದರಗಳ ಏರಿಕೆಯ ಈ ದಿನಗಳಲ್ಲಿ, ಪರಿಸರ ಸ್ನೇಹಿ ಮತ್ತು ಆರ್ಥಿಕವಾಗಿ ಲಾಭದಾಯಕ ವಾಹನಗಳನ್ನು ಹುಡುಕುತ್ತಿರುವ ಗ್ರಾಹಕರಿಗೆ ಸಿಎನ್ಜಿ ಕಾರುಗಳು ಅತ್ಯುತ್ತಮ ಆಯ್ಕೆಯಾಗಿ ಹೊರಹೊಮ್ಮಿವೆ. ಪ್ರಮುಖ ವಾಹನ ತಯಾರಕರು ತಮ್ಮ ಕಾರುಗಳ ಸರಣಿಯಲ್ಲಿ ಸಿಎನ್ಜಿ ಆಯ್ಕೆಯನ್ನು ಸೇರಿಸುವ ಮೂಲಕ ಗ್ರಾಹಕರ ಈ ಬೇಡಿಕೆಯನ್ನು ಪೂರೈಸುತ್ತಿದ್ದಾರೆ. ಬಜೆಟ್ಗೆ ಸರಿಹೊಂದುವ ಮತ್ತು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಹೊಂದಿರುವ ಸಿಎನ್ಜಿ ಕಾರುಗಳನ್ನು ಖರೀದಿಸಲು ಯೋಚಿಸುತ್ತಿದ್ದೀರಾ? ಈ ಮಾಹಿತಿ ನಿಮಗೆ ಸಹಕಾರಿಯಾಗಲಿದೆ.
ಮಾರುತಿ ಸುಜುಕಿ ಸೆಲೆರಿಯೊ (Maruti Suzuki Celerio CNG)
ಇಂಧನವನ್ನು ಉಳಿಸಲು ಬಯಸುವವರಿಗೆ ಮಾರುತಿ ಸುಜುಕಿ ಕಾರುಗಳು ಉತ್ತಮ ಆಯ್ಕೆಯಾಗಿದೆ. ಅವರ ಹಲವು ಕಾರುಗಳಲ್ಲಿ ಈಗ ಪೆಟ್ರೋಲ್ ಜೊತೆಗೆ ಸಿಎನ್ಜಿ ಆಯ್ಕೆಯೂ ಸಿಗುತ್ತದೆ. ಆರ್ಥಿಕ ಬಜೆಟ್ನಲ್ಲಿ ಹ್ಯಾಚ್ಬ್ಯಾಕ್ ಕಾರನ್ನು ಖರೀದಿಸಲು ಬಯಸುವವರಿಗೆ ಸೆಲೆರಿಯೊ ತುಂಬಾ ಒಳ್ಳೆಯದು. ಇದು ಪ್ರತಿ ಕೆಜಿ ಸಿಎನ್ಜಿಗೆ 34.43 ಕಿಲೋಮೀಟರ್ಗಳಷ್ಟು ಮೈಲೇಜ್ ನೀಡುತ್ತದೆ ಮತ್ತು ಇತರ ಮಾರುತಿ ಸುಜುಕಿ ಕಾರುಗಳಿಗಿಂತ ಹೆಚ್ಚಿನ ವೈಶಿಷ್ಟ್ಯಗಳನ್ನು ಹೊಂದಿದೆ. ಮಾರುತಿ ಸೆಲೆರಿಯೊ ವಿಎಕ್ಸ್ಐ ಸಿಎನ್ಜಿ ಕಾರಿನ ಎಕ್ಸ್ಶೋರೂಂ ಬೆಲೆ 6.74 ಲಕ್ಷ ರೂಪಾಯಿಯಿಂದ ಆರಂಭವಾಗಲಿದೆ.
ಮಾರುತಿ ಸುಜುಕಿ ಸ್ವಿಫ್ಟ್ (Maruti Suzuki Swift CNG)
ಹೊಸ ತಲೆಮಾರಿನ ಸ್ವಿಫ್ಟ್ ಕಾರು, ತನ್ನ ಪ್ರಮುಖ ಲಕ್ಷಣಗಳಾದ ಸ್ಪೋರ್ಟಿ ವಿನ್ಯಾಸ ಮತ್ತು ಅತ್ಯುತ್ತಮ ಮೈಲೇಜ್ಗೆ ಹೆಸರುವಾಸಿಯಾಗಿದೆ. ಈಗ 1.2 ಲೀಟರ್ ಜೆಡ್12ಇ ಪೆಟ್ರೋಲ್ ಎಂಜಿನ್ನೊಂದಿಗೆ ಫ್ಯಾಕ್ಟರಿ ಫಿಟೆಡ್ ಸಿಎನ್ಜಿ ಕಿಟ್ನೊಂದಿಗೆ ಬರುವ ಈ ಕಾರು, ಪ್ರತಿ ಕೆಜಿ ಸಿಎನ್ಜಿಗೆ 32.85 ಕಿ.ಮೀ ಎಂಬ ಅದ್ಭುತ ಮೈಲೇಜ್ ನೀಡುತ್ತದೆ. 5-ಸ್ಪೀಡ್ ಮ್ಯಾನುವಲ್ ಗೇರ್ಬಾಕ್ಸ್ನೊಂದಿಗೆ ಕೂಡಿದ ಈ ಕಾರು, ಕಡಿಮೆ ನಿರ್ವಹಣಾ ವೆಚ್ಚದೊಂದಿಗೆ ಆಕರ್ಷಕ ಬೆಲೆಯಲ್ಲಿ ಲಭ್ಯವಿದೆ. ಹೊಸ ಸ್ವಿಫ್ಟ್ ಸಿಎನ್ಜಿ ಮಾದರಿಯು ವಿವಿಧ ಗ್ರಾಹಕರ ಬೇಡಿಕೆಗಳನ್ನು ಪೂರೈಸಲು ವಿಎಕ್ಸ್ಐ, ವಿಎಕ್ಸ್ಐ (ಆಪ್ಷನ್) ಮತ್ತು ಜೆಡ್ಎಕ್ಸ್ಐ ಎಂಬ ಮೂರು ವಿಭಿನ್ನ ಆವೃತ್ತಿಗಳಲ್ಲಿ ಲಭ್ಯವಿದೆ. ಈ ಆವೃತ್ತಿಗಳ ಎಕ್ಸ್ಶೋರೂಂ ಬೆಲೆ ಕ್ರಮವಾಗಿ ರೂ. 8.20 ಲಕ್ಷ, ರೂ. 8.47 ಲಕ್ಷ ಮತ್ತು ರೂ. 9.20 ಲಕ್ಷ ಬೆಲೆ ಹೊಂದಿವೆ.
ಇದನ್ನೂ ಓದಿ: ಮಾರುತಿ ಸುಜುಕಿ ಸ್ವಿಫ್ಟ್ ಸಿಎನ್ಜಿ ಕಾರು ಬಿಡುಗಡೆ, 33 ಕಿ.ಮೀ ಮೈಲೇಜ್

ಹ್ಯುಂಡೈ ಎಕ್ಸ್ಟೆರ್ (Hyundai Exter CNG)
ಹ್ಯುಂಡೈ ಎಕ್ಸ್ಟರ್ ಕಾರು, ಇಂಧನ ದಕ್ಷತೆ ಮತ್ತು ಬಜೆಟ್ಗೆ ಸರಿಹೊಂದುವ ಆಯ್ಕೆಯನ್ನು ಹುಡುಕುತ್ತಿರುವ ಗ್ರಾಹಕರಿಗೆ ಉತ್ತಮ ಆಯ್ಕೆಯಾಗಿದೆ. 1.2 ಲೀಟರ್ ಪೆಟ್ರೋಲ್ ಎಂಜಿನ್ಗೆ ಜೋಡಿಸಲಾದ ಫ್ಯಾಕ್ಟರಿ ಫಿಟ್ಟೆಡ್ ಡ್ಯುಯಲ್ ಸಿಲಿಂಡರ್ ಸಿಎನ್ಜಿ ಕಿಟ್ನೊಂದಿಗೆ, ಈ ಕಾರು ಪ್ರತಿ ಕಿಲೋಗ್ರಾಂ ಸಿಎನ್ಜಿಗೆ 27.1 ಕಿಲೋಮೀಟರ್ಗಳಷ್ಟು ಅದ್ಭುತ ಮೈಲೇಜ್ ನೀಡುತ್ತದೆ. 5-ಸ್ಪೀಡ್ ಮ್ಯಾನುವಲ್ ಗೇರ್ಬಾಕ್ಸ್ನೊಂದಿಗೆ ಸುಲಭವಾಗಿ ಚಲಾಯಿಸಬಹುದಾದ ಈ ಅಪ್ಡೇಟೆಡ್ CNG ವೇರಿಯಂಟ್ಗಳು ರೂ 8.50 ಲಕ್ಷದಿಂದ ಪ್ರಾರಂಭವಾಗಿ ರೂ 9.38 ಲಕ್ಷದವರೆಗೆ ಹೋಗುತ್ತವೆ. ಸಾಮಾನ್ಯ ಪೆಟ್ರೋಲ್ ವೇರಿಯಂಟ್ಗೆ ಹೋಲಿಸಿದರೆ, CNG ವೇರಿಯಂಟ್ಗಳು ಅವುಗಳಿಗಿಂತ ರೂ ೧ ಲಕ್ಷಗಳಷ್ಟೇ ಬೆಲೆ ಹೆಚ್ಚಾಗಿರುತ್ತದೆ.
ಇದನ್ನೂ ಓದಿ: ಹ್ಯುಂಡೈ ಎಕ್ಸ್ಟೆರ್ CNG ಡ್ಯುಯಲ್ ಸಿಲಿಂಡರ್ ಭಾರತದಲ್ಲಿ ಬಿಡುಗಡೆ!

ಹ್ಯುಂಡೈ ಗ್ರ್ಯಾಂಡ್ ಐ10 ನಿಯೋಸ್ (Hyundai Grand i10 Nios CNG)
ಗ್ರಾಹಕರ ಬದಲಾಗುತ್ತಿರುವ ಅಗತ್ಯಗಳನ್ನು ಪೂರೈಸಲು, ಗ್ರಾಂಡ್ i10 ನಿಯೋಸ್ HY-CNG ಡ್ಯುಓ ಈಗ ಮಾಗ್ನಾ ಮತ್ತು ಸ್ಪೋರ್ಟ್ಸ್ ಎಂಬ ಎರಡು ಆಕರ್ಷಕ ಮಾದರಿಗಳಲ್ಲಿ ಲಭ್ಯವಿದೆ. ಈ ಸಿಎನ್ಜಿ ವಾಹನಗಳು ಕ್ರಮವಾಗಿ 7.75 ಲಕ್ಷ ರೂಪಾಯಿ ಮತ್ತು 8.30 ಲಕ್ಷ ರೂಪಾಯಿ (ಎಕ್ಸ್ ಶೋರೂಂ) ಬೆಲೆಯಲ್ಲಿ ನಿಮ್ಮದಾಗಬಹುದು. ಜೊತೆಗೆ, ಹಿಂದಿನಂತೆ ಸಿಂಗಲ್ ಸಿಲಿಂಡರ್ ಸಿಎನ್ಜಿ ಸಿಸ್ಟಮ್ನೊಂದಿಗೆ ಗ್ರಾಂಡ್ i10 ನಿಯೋಸ್ ಕೂಡ ಲಭ್ಯವಿದ್ದು, ಇದು ಇಂಧನ ಕಡಿಮೆ ಮಾಡಲು ಬಯಸುವ ಗ್ರಾಹಕರಿಗೆ ಪರಿಪೂರ್ಣ ಆಯ್ಕೆಯಾಗಿದೆ. ಹ್ಯುಂಡೈ ಗ್ರ್ಯಾಂಡ್ i10 ನಿಯೋಸ್ ಸಿಎನ್ಜಿ ಮಾದರಿಯು ಪ್ರತಿ ಕಿಲೋಗ್ರಾಂ ಗ್ಯಾಸ್ಗೆ 27 ಕಿಲೋಮೀಟರ್ಗಳಷ್ಟು ಅದ್ಭುತ ಮೈಲೇಜ್ ನೀಡುತ್ತದೆ.
ಇದನ್ನೂ ಓದಿ: ಹ್ಯುಂಡೈ ಗ್ರ್ಯಾಂಡ್ i10 ನಿಯೋಸ್ ಹೈ-ಸಿಎನ್ಜಿ ಡ್ಯುಯೊ ಬಿಡುಗಡೆ

ಟಾಟಾ ಪಂಚ್ (Tata Punch CNG)
ಟಾಟಾ ಪಂಚ್ ಸಿಎನ್ಜಿ ಕಾರುಗಳು ತಮ್ಮ ವಿಶಿಷ್ಟ ವೈಶಿಷ್ಟ್ಯಗಳು ಮತ್ತು ಆಕರ್ಷಕ ಬೆಲೆಯಿಂದ ಗ್ರಾಹಕರನ್ನು ಸೆಳೆಯುತ್ತಿವೆ. ಈ ಮಾದರಿಯ ಆರಂಭಿಕ ಎಕ್ಸ್ ಶೋರೂಂ ಬೆಲೆ ರೂ. 7.23 ಲಕ್ಷದಿಂದ ಆರಂಭವಾಗುತ್ತದೆ. 1.2 ಲೀಟರ್ ಎನ್ಎ ಪೆಟ್ರೋಲ್ ಎಂಜಿನ್ ಜೊತೆಗೆ ವಿಶೇಷ ತಂತ್ರಜ್ಞಾನದಿಂದ ಸಜ್ಜಿತವಾದ ಐಸಿಎನ್ಜಿ ಕಿಟ್ ಅನ್ನು ಜೋಡಿಸಲಾಗಿದ್ದು, ಮ್ಯಾನುವಲ್ ಗೇರ್ಬಾಕ್ಸ್ನೊಂದಿಗೆ ಪ್ರತಿ ಕೆಜಿ ಸಿಎನ್ಜಿಗೆ 26.99 ಕಿ.ಮೀ ವರೆಗೆ ಮೈಲೇಜ್ ನೀಡುತ್ತದೆ. ಗ್ರಾಹಕರ ಆಯ್ಕೆಗಾಗಿ ಈ ಟಾಟಾ ಪಂಚ್ ಸಿಎನ್ಜಿ ಕಾರುಗಳು ಟ್ರಾಪಿಕಲ್ ಮಿಸ್ಟ್, ಓರ್ಕಸ್ ವೈಟ್ ಮತ್ತು ಡೇಟೋನಾ ಗ್ರೇ ಎಂಬ ಮೂರು ವಿಭಿನ್ನ ಬಣ್ಣಗಳಲ್ಲಿ ಲಭ್ಯವಿದೆ.