ಅತ್ಯಂತ ದುಬಾರಿ Rolls Royce Cullinan ಸೀರಿಸ್ II ಇನ್ನೂ 6.75-ಲೀಟರ್ ವಿ 12 ಎಂಜಿನ್ನೊಂದಿಗೆ ಬರುತ್ತದೆ.
ಐಷಾರಾಮಿ ಕಾರುಗಳ ಜಗತ್ತಿನಲ್ಲಿ ಹೊಸ ಅಧ್ಯಾಯವನ್ನು ಬರೆದಿರುವ ರೋಲ್ಸ್-ರಾಯ್ಸ್ (Rolls Royce) ತನ್ನ ಅತ್ಯಂತ ಜನಪ್ರಿಯ ಎಸ್ಯುವಿ(SUV), ಕಲಿನನ್ಗೆ ಹೊಸ ಜೀವ ತುಂಬಿದೆ, ಭಾರತದಲ್ಲಿ ಪರಿಚಯಿಸಲಾದ ಕಲಿನನ್ ಸೀರಿಸ್ II (Rolls Royce Cullinan Series II). ವಿಶ್ವದ ಮೊದಲ ಸೂಪರ್ ಲಕ್ಷುರಿ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ವಾಹನವು ಅತ್ಯಂತ ಶಕ್ತಿಶಾಲಿ ಎಂಜಿನ್, ಆಕರ್ಷಕ ವಿನ್ಯಾಸ ಮತ್ತು ಅತ್ಯಾಧುನಿಕ ತಂತ್ರಜ್ಞಾನದಿಂದ ಗಮನ ಸೆಳೆಯುತ್ತದೆ. ಪ್ರತಿ ವಿವರದಲ್ಲೂ ಪರಿಪೂರ್ಣತೆಯನ್ನು ಹೊಂದಿರುವ ಕಲಿನನ್ II ಖಂಡಿತವಾಗಿಯೂ ವಾಹನ ಪ್ರಿಯರನ್ನು ಮಂತ್ರಮುಗ್ಧಗೊಳಿಸಲಿದೆ.
ರೋಲ್ಸ್-ರಾಯ್ಸ್ ಕಲಿನನ್ ಸೀರಿಸ್ II ಸಾಮಾನ್ಯ ಮಾದರಿಯನ್ನು ರೂ 10.50 ಕೋಟಿ ರೂಪಾಯಿಗಳಿಗೆ ಮತ್ತು ಬ್ಲ್ಯಾಕ್ ಬ್ಯಾಡ್ಜ್ ಆವೃತ್ತಿಯನ್ನು ರೂ 12.25 ಕೋಟಿ ರೂಪಾಯಿಗಳಿಗೆ ಬಿಡುಗಡೆ ಮಾಡಲಾಗಿದೆ. ಆದರೆ ಬೆಲೆ ಇಷ್ಟಕ್ಕೆ ಸೀಮಿತವಲ್ಲ. ರೋಲ್ಸ್-ರಾಯ್ಸ್ನ ವಿಶಿಷ್ಟತೆ ಎಂದರೆ ಪ್ರತಿ ಕಾರು ಗ್ರಾಹಕರ ಆದ್ಯತೆಗಳಿಗೆ ಅನುಗುಣವಾಗಿ ಕಸ್ಟಮೈಸ್ ಮಾಡಲಾಗುತ್ತದೆ. ಹೆಚ್ಚು ಕಸ್ಟಮೈಸ್ ಸೇರಿಸಿದಾಗ ಇದರ ಬೆಲೆ ಇನ್ನೂ ಹೆಚ್ಚಾಗುತ್ತದೆ. ಹೀಗಾಗಿ, ನಿಮ್ಮ ಕಲಿನನ್ ನಿಮ್ಮ ಕನಸಿನ ಪ್ರತಿಬಿಂಬವಾಗಲಿದೆ. ಚೆನ್ನೈ ಮತ್ತು ದೆಹಲಿಯ ರೋಲ್ಸ್-ರಾಯ್ಸ್ ಶೋರೂಮ್ಗಳಲ್ಲಿ ಈ ಅದ್ಭುತ ಕಾರನ್ನು ನೀವು ವೀಕ್ಷಿಸಬಹುದು. 2024ರ ಕೊನೆಯ ತ್ರೈಮಾಸಿಕದಿಂದ ಭಾರತೀಯ ಗ್ರಾಹಕರು ತಮ್ಮ ಕಲಿನನ್ಗಳನ್ನು ಹೊಂದಲು ಸಿದ್ಧರಾಗಬಹುದು.
ಇದನ್ನೂ ಓದಿ: ಲಾಂಬೋರ್ಗಿನಿ ಉರುಸ್ ಎಸ್ಇ ಭಾರತಕ್ಕೆ ಆಗಮನ, ಬೆಲೆ ₹ 4.57 ಕೋಟಿ

2018ರಲ್ಲಿ ರೋಲ್ಸ್-ರಾಯ್ಸ್ ಕಂಪನಿಯು ಕಲಿನನ್ ಎಂಬ ಅತ್ಯಂತ ಐಷಾರಾಮಿ ಎಸ್ಯುವಿಯನ್ನು ಪರಿಚಯಿಸಿತು. ಬಳಿಕ ಈ ಕಾರಿಗೆ ಹಲವು ಆಧುನಿಕ ತಂತ್ರಜ್ಞಾನಗಳನ್ನು ಸೇರಿಸಿ, ಅದರ ವಿನ್ಯಾಸವನ್ನು ಇನ್ನಷ್ಟು ಸುಂದರಗೊಳಿಸುವ ಮೂಲಕ ಹಲವಾರು ಬಾರಿ ಅಪ್ಗ್ರೇಡ್ ಮಾಡಲಾಯಿತು. ಅತಿ ಹೆಚ್ಚು ಬೆಲೆಯಿದ್ದರೂ ಈ ಕಾರಿಗೆ ಗ್ರಾಹಕರ ಬೇಡಿಕೆ ಎಂದಿಗೂ ಕಡಿಮೆಯಾಗಲಿಲ್ಲ. ಇದೀಗ ಕಲಿನನ್ ಸರಣಿಯ ಎರಡನೇ ಆವೃತ್ತಿಯಾದ ಕಲಿನನ್ II ಕಾರಿನ ಬೆಲೆ ಹಿಂದಿನ ಮಾದರಿಗಿಂತ ಸುಮಾರು ರೂ 3.55 ಕೋಟಿ ಹೆಚ್ಚಾಗಿದೆ. ಹಿಂದಿನ ಮಾದರಿಯ ಬೆಲೆ ರೂ 6.95 ಕೋಟಿ ಆಗಿತ್ತು. ಹೊಸ ಬ್ಲ್ಯಾಕ್ ಬ್ಯಾಡ್ಜ್ ಮಾದರಿಯ ಕಾರಿನ ಬೆಲೆ ರೂ 4.05 ಕೋಟಿ ಹೆಚ್ಚಾಗಿದೆ. ಹಿಂದಿನ ಮಾದರಿಯ ಬೆಲೆ ರೂ 8.20 ಕೋಟಿ ಆಗಿತ್ತು. ಈ ಬೆಲೆ ಏರಿಕೆಯ ನಂತರ ಕುಲಿನನ್ ಕಾರು ಭಾರತದಲ್ಲಿ ಅತ್ಯಂತ ದುಬಾರಿ ಎಸ್ಯುವಿಯಾಗಿದೆ.
ರೋಲ್ಸ್ ರಾಯ್ಸ್ ಕಲಿನನ್ ಸೀರಿಸ್ II: ವೈಶಿಷ್ಟ್ಯಗಳು
Rolls Royce Cullinan Series II ನಲ್ಲಿ ಮೊದಲ ಬಾರಿಗೆ ಪರಿಚಯಿಸಲಾದ ಪ್ಯಾಂಥಿಯಾನ್ ಗ್ರಿಲ್, ಕಾರಿನ ಮುಂಭಾಗಕ್ಕೆ ಒಂದು ಅದ್ಭುತವಾದ ಸ್ಪರ್ಶವನ್ನು ನೀಡುತ್ತದೆ. ಇದಲ್ಲದೆ, ಹೊಸ ಎಲ್-ಆಕಾರದ ಎಲ್ಇಡಿ ಡೇಟೈಮ್ ರನ್ನಿಂಗ್ ಲ್ಯಾಂಪ್ಗಳು ಮತ್ತು ಮರುವಿನ್ಯಾಸಗೊಂಡ ಹೆಡ್ಲ್ಯಾಂಪ್ಗಳು ಕಾರಿನ ನೋಟವನ್ನು ಇನ್ನಷ್ಟು ಆಕರ್ಷಕವಾಗಿಸಿ, ಐಷಾರಾಮಿಯ ಮಟ್ಟವನ್ನು ಹೆಚ್ಚಿಸಿವೆ. ಮುಂಭಾಗದ ಬಂಪರ್ ನಲ್ಲಿ ನವೀಕರಿಸಲಾದ ಏರ್ ಇನ್ಟೇಕ್ಗಳೊಂದಿಗೆ, ಸೈಡ್ ಸಿಲ್ಗಳ ಉದ್ದಕ್ಕೂ ಸೇರಿಸಲಾದ ಗ್ಲೋಸ್ಸಿ ಬ್ಲಾಕ್ ಟಚ್ ಕಲಿನನ್ಗೆ ರಿಫ್ರೆಶ್ ನೋಟವನ್ನು ನೀಡುತ್ತದೆ.
ವಾಹನದ ಹಿಂಭಾಗವನ್ನು ಸಹ ನವೀಕರಿಸಲಾಗಿದ್ದು, ಸ್ಟೇನ್ಲೆಸ್ ಸ್ಟೀಲ್ ಸ್ಕಿಡ್ ಪ್ಲೇಟ್ ಮತ್ತು ಹೊಳೆಯುವ ಸ್ಟೇನ್ಲೆಸ್ ಸ್ಟೀಲ್ ಎಕ್ಸಾಸ್ಟ್ ಎಕ್ಸಿಟ್ ಹೊಂದಿದೆ. 7-ಸ್ಪೋಕ್ ವಿನ್ಯಾಸದ 23 ಇಂಚಿನ ಚಕ್ರಗಳು ಕಾರಿನ ಸೊಗಸಾದ ನೋಟವನ್ನು ಹೆಚ್ಚಿಸುತ್ತದೆ. ಪ್ರತಿ ಚಕ್ರದ ಮೇಲಿನ RR ಲೋಗೋ ಕಾರಿನ ಶ್ರೇಷ್ಠತೆಯನ್ನು ಪ್ರತಿಬಿಂಬಿಸುತ್ತದೆ. ದೊಡ್ಡ ಗಾತ್ರದ ಟೈರ್ಗಳು ಕಾರಿಗೆ ಅತ್ಯುತ್ತಮ ಹಿಡಿತವನ್ನು ನೀಡುವುದಲ್ಲದೆ, ಚಾಲನೆಯ ಅನುಭವವನ್ನು ಇನ್ನಷ್ಟು ಆರಾಮದಾಯಕವಾಗಿಸುತ್ತದೆ.
ಇದನ್ನೂ ಓದಿ: ಭಾರತದಲ್ಲಿ ಬಿಡುಗಡೆಯಾದ ಐಷಾರಾಮಿ ಆಡಿ ಕ್ಯೂ8 ಫೇಸ್ಲಿಫ್ಟ್

ಕಲಿನನ್ ಕಾರಿನ ಕ್ಯಾಬಿನ್ನಲ್ಲಿ, ಡ್ಯಾಶ್ಬೋರ್ಡ್ಗೆ ವಿಸ್ತರಿಸುವ ವಿಶಾಲವಾದ ಗಾಜಿನ ಫಲಕವಿದೆ. ಹೆಚ್ಚುವರಿಯಾಗಿ, ಡ್ಯಾಶ್ಬೋರ್ಡ್ನಲ್ಲಿ ಹೊಸ ಪ್ರದರ್ಶನ ವಿಭಾಗವಿದೆ, ಅದು ಸೂಕ್ಷ್ಮವಾದ ವಿವರವಾದ ಅನಲಾಗ್ ಗಡಿಯಾರ ಮತ್ತು ಕೆಳಗೆ ಸಣ್ಣ, ಪ್ರಕಾಶಮಾನವಾದ ಸ್ಪಿರಿಟ್ ಆಫ್ ಎಕ್ಸ್ಟಸಿ ಮ್ಯಾಸ್ಕಾಟ್ ಅನ್ನು ಹೊಂದಿದೆ. ಕಲಿನನ್ ಮಾದರಿಯು ರೋಲ್ಸ್ನ ಇತ್ತೀಚಿನ ಸ್ಪಿರಿಟ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಅನ್ನು ಒಳಗೊಂಡಿದೆ, ಇದು ನವೀಕರಿಸಿದ ಗ್ರಾಫಿಕ್ಸ್ ಮತ್ತು ಪ್ರದರ್ಶನಗಳನ್ನು ನೀಡುತ್ತದೆ.
ಈ ವಾಹನದಲ್ಲಿ ಡ್ಯುಯಲ್-ಸ್ಕ್ರೀನ್ ಇನ್ಫೋಟೈನ್ಮೆಂಟ್ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಸಂಗೀತ ಪ್ರಿಯರಿಗೆ, ಇದು 18 ಸ್ಪೀಕರ್ಗಳೊಂದಿಗೆ 18 ಚಾನೆಲ್ಗಳನ್ನು ಹೊಂದಿರುವ 1400-ವ್ಯಾಟ್ನ ಶಕ್ತಿಶಾಲಿ ಆಡಿಯೋ ಸಿಸ್ಟಮ್ನೊಂದಿಗೆ ಬರುತ್ತದೆ. ಮಾಲೀಕರು ತಮ್ಮ ಉಪಕರಣಗಳ ಬಣ್ಣಗಳನ್ನು ಕಾರಿನ ಬಣ್ಣ ಅಥವಾ ಒಳಾಂಗಣ ವಿನ್ಯಾಸಕ್ಕೆ ಹೊಂದಿಸುವ ಮೂಲಕ ತಮ್ಮ ಅನುಭವವನ್ನು ವೈಯಕ್ತೀಕರಿಸಿಕೊಳ್ಳಬಹುದು.
ಇದನ್ನೂ ಓದಿ: ಮರ್ಸಿಡಿಸ್-ಮೇಬ್ಯಾಕ್ EQS 680 ಐಷಾರಾಮಿ ಎಲೆಕ್ಟ್ರಿಕ್ ಎಸ್ಯುವಿ ಬಿಡುಗಡೆ
ರೋಲ್ಸ್ ರಾಯ್ಸ್ ಕಲಿನನ್ ಸೀರಿಸ್ II: ಎಂಜಿನ್ ವಿಶೇಷತೆಗಳು
ನವೀಕರಿಸಿದ ಐಷಾರಾಮಿ ರೋಲ್ಸ್ ರಾಯ್ಸ್ ಕಲಿನನ್ ಸೀರಿಸ್ II ಅನ್ನು 6.75-ಲೀಟರ್ ಟ್ವಿನ್-ಟರ್ಬೋಚಾರ್ಜ್ಡ್ V12 ಎಂಜಿನ್ನಿಂದ ನಡೆಸಲಾಗುತ್ತದೆ. ಈ ಎಂಜಿನ್ ಸಾಮಾನ್ಯ ಮಾದರಿಯಲ್ಲಿ 571 ಹಾರ್ಸ್ಪವರ್ ಮತ್ತು 850Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಆದರೆ, ಬ್ಲ್ಯಾಕ್ ಬ್ಯಾಡ್ ಆವೃತ್ತಿಯು ಇನ್ನಷ್ಟು ಶಕ್ತಿಶಾಲಿಯಾಗಿದ್ದು, 600 ಹಾರ್ಸ್ಪವರ್ ಮತ್ತು 900Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ 8-ಸ್ಪೀಡ್ ಆಟೋಮ್ಯಾಟಿಕ್ ಗೇರ್ಬಾಕ್ಸ್ ಮೂಲಕ ಶಕ್ತಿಯನ್ನು ಎಲ್ಲಾ ನಾಲ್ಕು ಚಕ್ರಗಳಿಗೆ ವಿತರಿಸುತ್ತದೆ.