TVS Raider 125: ಕಡಿಮೆ ಬೆಲೆಗೆ ಟಿವಿಎಸ್ ರೈಡರ್ 125 ಡ್ರಮ್ ಬ್ರೇಕ್ ವೇರಿಯೆಂಟ್ ಬಿಡುಗಡೆ

TVS Raider 125 ಡ್ರಮ್ ಬ್ರೇಕ್ ಮಾದರಿಯ ಮೂಲ ಬೆಲೆಗೆ ಹೋಲಿಸಿದರೆ ಸರಿ ಸುಮಾರು ರೂ.10,000 ಕಡಿಮೆಯಾಗಿದೆ

ದ್ವಿಚಕ್ರ ವಾಹನಗಳ ಕ್ಷೇತ್ರದಲ್ಲಿ ತನ್ನದೇ ಆದ ವಿಶಿಷ್ಟ ಸ್ಥಾನವನ್ನು ಹೊಂದಿರುವ ಟಿವಿಎಸ್ ಮೋಟಾರ್ಸ್ (TVS Motor), ತನ್ನ ರೈಡರ್ 125 (TVS Raider 125) ಮೋಟಾರ್‌ಸೈಕಲ್‌ಗೆ ಹೊಸ ತಾಂತ್ರಿಕ ಅಪ್‌ಗ್ರೇಡ್‌ಗಳೊಂದಿಗೆ ಹೊಸ ರೂಪಾಂತರವನ್ನು ಪರಿಚಯಿಸಿದೆ. ಭಾರತದ ಮಧ್ಯಮ ವರ್ಗದ ಗ್ರಾಹಕರ ಆದ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾದ ಈ ಬೈಕ್, ಕೈಗೆಟುಕುವ ಬೆಲೆ, ಸ್ಟೈಲಿಶ್ ವಿನ್ಯಾಸ ಮತ್ತು ಅತ್ಯುತ್ತಮ ಮೈಲೇಜ್ ನೊಂದಿಗೆ ಬರಲಿದೆ.

ಟಿವಿಎಸ್ ರೈಡರ್ 125 (TVS Raider 125) ಬೈಕ್‌ನ ಹೊಸ ಮಾದರಿಯಲ್ಲಿ ವೆಚ್ಚವನ್ನು ಕಡಿಮೆ ಮಾಡಲು ಎರಡೂ ಚಕ್ರಗಳಲ್ಲಿ ಡ್ರಮ್ ಬ್ರೇಕ್ ವ್ಯವಸ್ಥೆಯನ್ನು ಅಳವಡಿಸಲಾಗಿದ್ದ, ಇದರ ಬೆಲೆ ಕೂಡ ತುಂಬಾ ಆಕರ್ಷಕವಾಗಿದೆ. ನೀವು ಈ ಬೈಕ್ ಅನ್ನು ಕೇವಲ ರೂ. 84,469 (ಎಕ್ಸ್ ಶೋರೂಂ) ಕ್ಕೆ ಖರೀದಿಸಬಹುದು. ಈ ಮಾದರಿಯ ಮೂಲ ಬೆಲೆಗೆ ಹೋಲಿಸಿದರೆ ಸರಿ ಸುಮಾರು ರೂ.10,000 ಕಡಿಮೆಯಾಗಿದೆ ಹೀಗಾಗಿ, ನಿಮ್ಮ ಬಜೆಟ್‌ಗೆ ತಕ್ಕಂತೆ ಒಂದು ಸ್ಟೈಲಿಶ್ ಮತ್ತು ಕಾರ್ಯಕ್ಷಮತೆಯ ಬೈಕ್ ಅನ್ನು ನೀವು ಖರೀದಿಸಬಹುದು.

ಇದನ್ನೂ ಓದಿ:  ಹೊಸ ಟಿವಿಎಸ್ ಅಪಾಚೆ ಆರ್‌ಆರ್‌ 310 ಬಿಡುಗಡೆ

TVS Raider 125 Drum Brake
TVS Raider 125 Drum Brake

ಟಿವಿಎಸ್ ರೈಡರ್ 125: ವೈಶಿಷ್ಟ್ಯಗಳು

ಈ ಹೊಸ ಮಾದರಿಯಲ್ಲಿ 130mm ಡ್ರಮ್ ಬ್ರೇಕ್ ಅಳವಡಿಸಲಾಗಿದೆ. ಇದು ಸಂಯೋಜಿತ ಬ್ರೇಕಿಂಗ್ ವ್ಯವಸ್ಥೆಯಾಗಿದ್ದು, ಹಿಂದಿನ ಮಾದರಿಗಳಲ್ಲಿ ಬಳಸುತ್ತಿದ್ದ 240mm ಡಿಸ್ಕ್ ಬ್ರೇಕ್‌ಗೆ ಬದಲಿಯಾಗಿ ಬಂದಿದೆ. ಈ ಹೊಸ ಬ್ರೇಕ್ ವ್ಯವಸ್ಥೆಯ ಜೊತೆಗೆ, ಸಿಂಗಲ್ ಪೀಸ್ ಸೀಟ್‌, ಎಲ್‌ಇಡಿ ಹೆಡ್‌ಲೈಟ್ ಮತ್ತು ಎಲ್‌ಸಿಡಿ ಇನ್‌ಸ್ಟ್ರುಮೆಂಟ್ ಕ್ಲಸ್ಟರ್‌ನಂತಹ ಎಲ್ಲಾ ಆಧುನಿಕ ವೈಶಿಷ್ಟ್ಯಗಳು ಈ ಮಾದರಿಯಲ್ಲೂ ಲಭ್ಯವಿದೆ.

ಈ ಬೈಕ್, ಇಕೋ ಮತ್ತು ಪವರ್ ಎಂಬ ಎರಡು ವಿಭಿನ್ನ ರೈಡಿಂಗ್ ಮೋಡ್‌ಗಳೊಂದಿಗೆ ನಿಮ್ಮ ಸವಾರಿ ಅನುಭವವನ್ನು ಹೆಚ್ಚಿಸುತ್ತದೆ. ಉನ್ನತ ಶ್ರೇಣಿಯ ಬೈಕ್‌ಗಳಂತೆ, ಈ ಬೈಕ್ ಸಹ ಟಿವಿಎಸ್‌ನ ಅತ್ಯಾಧುನಿಕ ‘ಸ್ಮಾರ್ಟ್‌ಕ್ಸನೆಕ್ಟ್’ ತಂತ್ರಜ್ಞಾನದೊಂದಿಗೆ ಕೂಡಿದ ಟಿಎಫ್ಟಿ ಡಿಸ್ಪ್ಲೇ ಅನ್ನು ಹೊಂದಿದೆ. ಅಷ್ಟೇ ಅಲ್ಲ, ಈ ಬೈಕ್ 10 ಲೀಟರ್‌ ಸಾಮರ್ಥ್ಯದ ಇಂಧನ ಟ್ಯಾಂಕ್‌ನೊಂದಿಗೆ ಆಕರ್ಷಕವಾದ ಸ್ಟ್ರೈಕಿಂಗ್ ರೆಡ್ ಮತ್ತು ವಿಕೆಡ್ ಬ್ಲ್ಯಾಕ್ ಎಂಬ  ಬಣ್ಣಗಳಲ್ಲಿ ಲಭ್ಯವಿದೆ.

ಇದನ್ನೂ ಓದಿ: ಹೊಸ ಜುಪಿಟರ್ 110 ಸ್ಕೂಟರ್ ಬಿಡುಗಡೆ, ಈ ಬೆಲೆಗೆ ಇಷ್ಟೆಲ್ಲಾ ಫೀಚರ್ಸ್?

ಟಿವಿಎಸ್ ರೈಡರ್ 125: ಎಂಜಿನ್

ಈ ಬೈಕ್ 124.8 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, 7,500 ಆರ್ಪಿಎಂನಲ್ಲಿ 11.2 ಬಿಹೆಚ್ಪಿ ಮತ್ತು 6,000 ಆರ್ಪಿಎಂನಲ್ಲಿ 11.2 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಜೊತೆಗೆ, ಈ ಬೈಕ್ 5-ಸ್ಪೀಡ್ ಗೇರ್ಬಾಕ್ಸ್‌ನೊಂದಿಗೆ ಸುಸಜ್ಜಿತವಾಗಿದ್ದು, ಇದು ಲೀಟರಿಗೆ 67 ಕಿಲೋಮೀಟರ್‌ವರೆಗೆ ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ. ಅಂತೆಯೇ, ರೈಡರ್ 125 ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಹಿಂಭಾಗದಲ್ಲಿ 5-ಸ್ಟೆಪ್ ಪ್ರಿಲೋಡ್ ಅಡ್ಜಸ್ಟೆಬಲ್ ಮೊನೊಶಾಕ್ ಸಸ್ಪೆನ್ಷನ್ ಸೆಟಪ್ ಒಳಗೊಂಡಿದೆ.

Leave a Comment