Windsor EV: ಲಕ್ಷುರಿ ವಿಂಡ್ಸರ್ ಎಲೆಕ್ಟ್ರಿಕ್ ಕಾರಿನ ಸಂಪೂರ್ಣ ಬೆಲೆ ಮತ್ತು ಪ್ರಮುಖ ಫೀಚರ್ಸ್‌ಗಳು

ಭಾರತೀಯ ಮಾರುಕಟ್ಟೆಯಲ್ಲಿ ತನ್ನದೇ ಆದ ವಿಶಿಷ್ಟ ಗುರುತನ್ನು ಸೃಷ್ಟಿಸಿಕೊಂಡಿರುವ ಎಂಜಿ ಮೋಟಾರ್ಸ್ (MG Motors), ತನ್ನ ಗ್ರಾಹಕರಿಗೆ ಇನ್ನಷ್ಟು ಹೊಸ ಆಯ್ಕೆಗಳನ್ನು ನೀಡುವ ನಿಟ್ಟಿನಲ್ಲಿ ಎಂಜಿ ಮೋಟಾರ್ಸ್ ಮತ್ತು ಜೆ‌ಎಸ್‌ಡಬ್ಲ್ಯೂ (JSW) ಸಂಸ್ಥೆಗಳ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಲಾದ ವಿಂಡ್ಸರ್ ಎಲೆಕ್ಟ್ರಿಕ್ (MG Windsor EV) ವಾಹನವು ಕಳೆದ ವಾರ ಮಾರುಕಟ್ಟೆಯಲ್ಲಿ ಬಿಡುಗಡೆಯಾಯಿತು. ಗ್ಲೋಸ್ಟರ್, ಹೆಕ್ಟರ್ ಪ್ಲಸ್ ಮತ್ತು ಕಾಮೆಟ್ ಇವಿ ಮುಂತಾದ ಮಾದರಿಗಳ ಮೂಲಕ ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದಿರುವ ಎಂಜಿ, ವಿಂಡ್ಸರ್ ಇವಿಯೊಂದಿಗೆ ತನ್ನ ಪ್ರಯಾಣವನ್ನು ಮುಂದುವರಿಸಿದೆ.

MG Windsor EV: ವೆರಿಯೆಂಟ್‌ನ ಬೆಲೆಗಳು

ಈ ಹೊಸ ವಾಹನದ ವಿವಿಧ ಮಾದರಿಗಳ ಬೆಲೆ ವಿವರಗಳನ್ನು ಕಂಪನಿಯು ಇತ್ತೀಚೆಗೆ ಪ್ರಕಟಿಸಿದೆ. ಗ್ರಾಹಕರ ವೈವಿಧ್ಯಮಯ ಅಗತ್ಯಗಳನ್ನು ಪೂರೈಸುವ ಉದ್ದೇಶದಿಂದ ವಿಂಡ್ಸರ್ ಕಾರು ಬ್ಯಾಟರಿಯೊಂದಿಗೆ ಮತ್ತು ಬ್ಯಾಟರಿಯಿಲ್ಲದೆ ಎರಡು ಮಾದರಿಗಳಲ್ಲಿ ಲಭ್ಯವಿರುತ್ತದೆ. ಬ್ಯಾಟರಿಯೊಂದಿಗೆ ಲಭ್ಯವಿರುವ ಎಕ್ಸೈಟ್ ವೆರಿಯೆಂಟ್‌ನ ಆರಂಭಿಕ ಎಕ್ಸ್ ಶೋರೂಂ ಬೆಲೆ ರೂ. 13.50 ಲಕ್ಷದಿಂದ ಆರಂಭವಾಗುತ್ತದೆ. ಹೆಚ್ಚುವರಿ ವೈಶಿಷ್ಟ್ಯಗಳೊಂದಿಗೆ ಕೂಡಿದ ಎಕ್ಸ್‌ಕ್ಲೂಸಿವ್ ವೆರಿಯೆಂಟ್‌ನ ಬೆಲೆ ರೂ. 14.50 ಲಕ್ಷ ಮತ್ತು ಎಸೆನ್ಸ್ ವೆರಿಯೆಂಟ್‌ನ ಬೆಲೆ ರೂ. 15.50 ಲಕ್ಷ ನಿಗದಿಯಾಗಿದೆ.

ಇದನ್ನೂ ಓದಿ: ಟಾಟಾ ಕರ್ವ್ ಇವಿ ರೂ. 17.49 ಲಕ್ಷಕ್ಕೆ ಲಾಂಚ್ ಆಗಿದೆ

MG Windsor EV
MG Windsor EV

ಬ್ಯಾಟರಿ ರಹಿತ ವಿಂಡ್ಸರ್ ಇವಿಯನ್ನು ಕೇವಲ ರೂ. 9.99 ಲಕ್ಷಗಳಿಂದ (ಎಕ್ಸ್ ಶೋರೂಂ) ಆರಂಭಿಸಿ ನಿಮ್ಮದಾಗಿಸಿಕೊಳ್ಳಿ. ಬ್ಯಾಟರಿಯನ್ನು ಬಾಡಿಗೆಗೆ ಪಡೆಯುವ ಸುಲಭ ಆಯ್ಕೆಯೊಂದಿಗೆ, ನಿಮಗೆ ಬೇಕಾದಾಗ ಬೇಕಾದಷ್ಟು ಚಲಿಸಿ. ಬ್ಯಾಟರಿ ನಿರ್ವಹಣೆ ಮತ್ತು ವಾರಂಟಿ ಎಂಜಿಯ ಜವಾಬ್ದಾರಿ. ಪ್ರತಿ ಕಿಲೋಮೀಟರ್‌ಗೆ ಕೇವಲ ರೂ. 3.5 ಪಾವತಿಸಿ. ಈ ಹೊಸ ಇವಿ ಕಾರಿಗೆ, ಮೂರು ವರ್ಷಗಳ ಬಳಕೆಯ ನಂತರವೂ, ಕಾರಿನ ಮೂಲ ಬೆಲೆಯ ಶೇಕಡಾ 60 ರಷ್ಟು ಮೊತ್ತವನ್ನು ಬೈಬ್ಯಾಕ್ ಆಫರ್‌ನಲ್ಲಿ ಪಡೆಯಬಹುದು.

ಬ್ಯಾಟರಿ ರಹಿತ ವಿಂಡ್ಸರ್ ಇವಿ ಕಾರು ನಿಮ್ಮದಾಗಿಸಲು ಈಗ ಕೇವಲ ರೂ. 9.99 ಲಕ್ಷಗಳಿಂದ ಆರಂಭಿಸಿ (ಎಕ್ಸ್ ಶೋರೂಂ ಬೆಲೆ). ಬ್ಯಾಟರಿಯನ್ನು ಪ್ರತಿ ತಿಂಗಳು ಅಥವಾ ವರ್ಷಕ್ಕೆ ಬಾಡಿಗೆಗೆ ಪಡೆದುಕೊಳ್ಳುವ ಅನುಕೂಲವನ್ನು ಆರಿಸಿಕೊಳ್ಳಿ. ಎಂಜಿ ಕಂಪನಿಯು ಬ್ಯಾಟರಿಯ ನಿರ್ವಹಣೆ ಮತ್ತು ವಾರಂಟಿಯ ಜವಾಬ್ದಾರಿಯನ್ನು ಹೊರುತ್ತದೆ. ಪ್ರತಿ ಕಿಲೋಮೀಟರ್‌ಗೆ ಕೇವಲ ರೂ. 3.5 ಪಾವತಿಸುವ ಮೂಲಕ ಈ ಕಾರನ್ನು ನೀವು ಚಲಿಸಬಹುದು. ಮೂರು ವರ್ಷಗಳ ನಂತರ, ನಿಮ್ಮ ಹಳೆಯ ಕಾರನ್ನು ಮಾರಾಟ ಮಾಡಲು ಬಯಸಿದರೆ, ಕಾರಿನ ಮೂಲ ಬೆಲೆಯ ಶೇಕಡಾ 60 ರಷ್ಟು ಮೊತ್ತವನ್ನು ಎಂಜಿ ನಿಮಗೆ ನೀಡುತ್ತದೆ.

MG Windsor EV
MG Windsor EV

MG Windsor EV ಕಾರಿನ ಟೆಸ್ಟ್ ಡ್ರೈವ್‌ಗಳು ಸೆಪ್ಟೆಂಬರ್ 25 ರಿಂದ ಪ್ರಾರಂಭವಾಗಲಿವೆ. ಗ್ರಾಹಕರು ಅಕ್ಟೋಬರ್ 3 ರಿಂದ ಈ ವಾಹನವನ್ನು ಬುಕ್ ಮಾಡಬಹುದು. ಬುಕ್ ಮಾಡಿದ ಗ್ರಾಹಕರಿಗೆ, ವಿಂಡ್ಸರ್ ಎಲೆಕ್ಟ್ರಿಕ್ ಕಾರುಗಳ ವಿತರಣೆಯು ಅಕ್ಟೋಬರ್ 12 ರಿಂದ ಆರಂಭವಾಗಲಿದೆ ಎಂದು ಕಂಪನಿ ಘೋಷಿಸಿದೆ. ಎಂಜಿ ವಿಂಡ್ಸರ್ ಇವಿ ಕಾರು ಟರ್ಕೋಯಿಸ್ ಗ್ರೀನ್, ಪರ್ಲ್ ವೈಟ್, ಕ್ಲೇ ಬೀಜ್ ಹಾಗೂ ಸ್ಟಾರ್‌ಬರ್ಸ್ಟ್ ಬ್ಲ್ಯಾಕ್ ಎಂಬ ನಾಲ್ಕು ಆಕರ್ಷಕ ಬಣ್ಣಗಳಲ್ಲಿ ಲಭ್ಯವಿದೆ. ಗ್ರಾಹಕರು ತಮ್ಮ ಇಷ್ಟಕ್ಕೆ ತಕ್ಕಂತೆ ಬಣ್ಣವನ್ನು ಆರಿಸಿಕೊಳ್ಳಬಹುದು.

ಇದನ್ನೂ ಓದಿ: ಮಿನಿ ಕಂಟ್ರಿಮನ್ ಎಲೆಕ್ಟ್ರಿಕ್ ಕಾರು ರೂ. 54.90 ಲಕ್ಷ ಬೆಲೆಯಲ್ಲಿ ಲಾಂಚ್ ಆಗಿದೆ

ಎಂಜಿ ವಿಂಡ್ಸರ್ ಇವಿ: ಇಂಟೀರಿಯರ್, ಎಕ್ಸ್ಪೀರಿಯರ್ ಮತ್ತು ಫೀಚರ್ಸ್‌

ಎಂಜಿ ಕಂಪನಿಯ ಈ ಹೊಸ ಇವಿ ಕಾರು ಒಂದು ಆಕರ್ಷಕವಾದ ದೊಡ್ಡ ಹ್ಯಾಚ್‌ಬ್ಯಾಕ್‌ ಆಗಿದ್ದು, ಐವರು ಪ್ರಯಾಣಿಕರಿಗೆ ಆರಾಮದಾಯಕವಾದ ಪ್ರಯಾಣವನ್ನು ಒದಗಿಸುತ್ತದೆ. ಇದರ ವಿಶಿಷ್ಟ ವಿನ್ಯಾಸವು ಕಣ್ಣನ್ನು ಸೆಳೆಯುತ್ತದೆ. ಸ್ಪ್ಲಿಟ್ ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಎರಡೂ ಬದಿಗಳಲ್ಲಿ ವಿಸ್ತಾರವಾದ ಎಲ್ಇಡಿ ಡಿಆರ್‌ಎಲ್‌ಗಳು ಮತ್ತು ಬಂಪರ್‌ನಲ್ಲಿ ಅಳವಡಿಸಲಾದ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು ಕಾರಿನ ಮುಂಭಾಗಕ್ಕೆ ಆಕರ್ಷಕವಾದ ನೋಟವನ್ನು ನೀಡುತ್ತವೆ. ಫ್ಲಶ್ ಡೋರ್ ಹ್ಯಾಂಡಲ್‌ಗಳು ಕಾರಿನ ಸೌಂದರ್ಯವನ್ನು ಹೆಚ್ಚಿಸುತ್ತವೆ. ಮತ್ತು ಹಿಂಭಾಗದ ಎಲ್ಇಡಿ ಲೈಟ್ ಬಾರ್‌ಗಳು, ಎಲ್-ಆಕಾರಕ್ಕೆ ಹೋಲಿಕೆಯಾಗುವ ಎಲ್ಇಡಿ ಟೈಲ್‌ಲೈಟ್‌ಗಳು, ವಿಂಡ್‌ಸ್ಕ್ರೀನ್‌ಗಳು, 18-ಇಂಚಿನ ಅಲಾಯ್ ವೀಲ್‌ಗಳು ಹಾಗೂ ವಿಶಾಲವಾದ ಗ್ಲಾಸ್‌ಹೌಸ್ ಕಾರಿಗೆ ಒಂದು ಆಧುನಿಕ ಮತ್ತು ಸ್ಟೈಲಿಶ್ ನೋಟವನ್ನು ನೀಡುತ್ತವೆ.

MG Windsor EV

MG Windsor EV, ಆಧುನಿಕ ತಂತ್ರಜ್ಞಾನ ಮತ್ತು ಐಷಾರಾಮಿ ವೈಶಿಷ್ಟ್ಯಗಳ ಸಮ್ಮಿಶ್ರಣವಾಗಿದೆ. ವಿಶಾಲ ಕ್ಯಾಬಿನ್‌ನಲ್ಲಿ ದೊಡ್ಡದಾದ 15.6 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಬಿಯೆಂಟ್ ಲೈಟಿಂಗ್, ಫ್ಲೋಟಿಂಗ್ ಸೆಂಟರ್ ಕನ್ಸೋಲ್, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್, 135 ಡಿಗ್ರಿಗಳಷ್ಟು ಒರಗಿಕೊಳ್ಳುವ ಆಸನಗಳು, ವೈರ್‌ಲೆಸ್ ಫೋನ್ ಚಾರ್ಜಿಂಗ್, ಕೀಲೆಸ್ ಎಂಟ್ರಿ ಮತ್ತು ಪುಶ್-ಬಟನ್ ಸ್ಟಾರ್ಟ್, ದೊಡ್ಡದಾದ ಪನೋರಮಿಕ್ ಸನ್‌ರೂಫ್‌ನಂತಹ ಆಧುನಿಕ ವೈಶಿಷ್ಟ್ಯಗಳು ಈ ವಾಹನವನ್ನು ಇನ್ನಷ್ಟು ವಿಶೇಷವಾಗಿಸುತ್ತವೆ. ಇದರೊಂದಿಗೆ ಹೊಸ ಕಾರಿನಲ್ಲಿ ಸುರಕ್ಷತೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದ್ದು 6 ಏರ್ ಬ್ಯಾಗ್ ಗಳು, ಆಲ್ ವ್ಹೀಲ್ ಡಿಸ್ಕ್ ಬ್ರೇಕ್ಸ್, 360 ಡಿಗ್ರಿ ವ್ಯೂ ಕ್ಯಾಮೆರಾ, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, ಟಿಪಿಎಂಎಸ್ ಸೇರಿದಂತೆ ಹಲವು ಫೀಚರ್ಸ್ ನೀಡಲಾಗಿದೆ.

ಇದನ್ನೂ ಓದಿ: ಒಂದೇ ದಿನದಲ್ಲಿ200 BYD SEAL ಎಲೆಕ್ಟ್ರಿಕ್ ಐಷಾರಾಮಿ ಸೆಡಾನ್‌ಗಳನ್ನು ವಿತರಿಸಲಾಗೀದೆ

ಎಂಜಿ ವಿಂಡ್ಸರ್ ಇವಿ: ಬ್ಯಾಟರಿ ಪ್ಯಾಕ್ ಮತ್ತು ಮೈಲೇಜ್

ವಿಂಡ್ಸರ್ ಇವಿ ಕಾರಿನಲ್ಲಿ ಸಿಂಗಲ್ ಎಲೆಕ್ಟ್ರಿಕ್ ಮೋಟಾರ್ ಮತ್ತು 38kWh ಬ್ಯಾಟರಿ ಪ್ಯಾಕ್ ನೀಡಲಾಗಿದ್ದು, ಇದು 136 ಹಾರ್ಸ್ ಪವರ್ ಮತ್ತು 200 ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಪ್ರತಿ ಚಾರ್ಜ್ ಗೆ ಗರಿಷ್ಠ 331 ಕಿ.ಮೀ ಮೈಲೇಜ್ ನೀಡುತ್ತದೆ. ಹಾಗೆಯೇ ಈ ಕಾರಿನಲ್ಲಿ ಇಕೋ, ಇಕೋ ಪ್ಲಸ್, ನಾರ್ಮಲ್ ಮತ್ತು ಸ್ಪೋರ್ಟ್ ಎಂಬ ನಾಲ್ಕು ವಿಭಿನ್ನ ಡ್ರೈವಿಂಗ್ ಮೋಡ್‌ಗಳೊಂದಿಗೆ, ಚಾಲಕರು ತಮ್ಮ ಚಾಲನಾ ಅನುಭವವನ್ನು ಕಸ್ಟಮೈಸ್ ಮಾಡಬಹುದು. ಹೊಸ ಕಾರು ಖರೀದಿಸುವ ಗ್ರಹಕರಿಗೆ ಮೊದಲ ಒಂದು ವರ್ಷ ಉಚಿತ ಫಾಸ್ಟ್ ಚಾರ್ಜಿಂಗ್ ಸೌಲಭ್ಯದ ಆಫರ್ ನೀಡಿದೆ.

Leave a Comment