ಟಾಟಾ ಪಂಚ್ ಫೇಸ್‌ಲಿಫ್ಟ್ ಒಟ್ಟು 10 ವೇರಿಯೆಂಟ್‌ಗಳಲ್ಲಿ ಲಭ್ಯವಿದೆ
ಭಾರತದ ಪ್ರಮುಖ ವಾಹನ ತಯಾರಕ ಕಂಪನಿ ಟಾಟಾ ಮೋಟಾರ್ಸ್ (Tata Motors), ತನ್ನ ಜನಪ್ರಿಯ ಎಸ್‌ಯುವಿ ಪಂಚ್‌ಗೆ ಹೊಸ ಜೀವ ತುಂಬಿದೆ. ಗ್ರಾಹಕರ ಬದಲಾಗುತ್ತಿರುವ ಆದ್ಯತೆಗಳಿಗೆ ಅನುಗುಣವಾಗಿ, ಟಾಟಾ ಪಂಚ್ ಫೇಸ್‌ಲಿಫ್ಟ್ (Tata Punch Facelift) ಎಸ್ ಯುವಿಗೆ ಹೊಸ ನೋಟ ಮತ್ತು ಹಲವು ಆಧುನಿಕ ವೈಶಿಷ್ಟ್ಯಗಳನ್ನು ಸೇರಿಸಲಾಗಿದೆ. ಈ ಫೇಸ್‌ಲಿಫ್ಟ್ ಮಾದರಿಯು ರೂ.6.12 ಲಕ್ಷದಿಂದ ರೂ.9.45 ಲಕ್ಷದವರೆಗಿನ ಆಕರ್ಷಕ ಬೆಲೆಯಲ್ಲಿ ಲಭ್ಯವಿದ್ದು, ಗ್ರಾಹಕರಿಗೆ ಹೆಚ್ಚಿನ ಆಯ್ಕೆಗಳನ್ನು ನೀಡುತ್ತದೆ. ಪ್ಯೂರ್, ಪ್ಯೂರ್ (ಒ), ಕ್ರಿಯೇಟಿವ್ ಪ್ಲಸ್, ಅಕಾಂಪ್ಲಿಶ್ಡ್ ಪ್ಲಸ್, ಅಡ್ವೆಂಚರ್ ಮತ್ತು ಅಡ್ವೆಂಚರ್ ಎಸ್ ಸೇರಿದಂತೆ ಒಟ್ಟು 10 ರೂಪಾಂತರಗಳಲ್ಲಿ ಈ ಕಾರು ಲಭ್ಯವಿದೆ.
ಟಾಟಾ ಪಂಚ್ ಫೇಸ್‌ಲಿಫ್ಟ್: ವೈಶಿಷ್ಟ್ಯಗಳು
ಟಾಟಾ ಮೋಟಾರ್ಸ್ ತನ್ನ ಜನಪ್ರಿಯ ಪಂಚ್ ಕಾರಿನಲ್ಲಿ ಗ್ರಾಹಕರಿಗೆ ಇನ್ನಷ್ಟು ಆನಂದ ನೀಡುವ ನಿಟ್ಟಿನಲ್ಲಿ ಕೆಲವು ಆಧುನಿಕ ತಂತ್ರಜ್ಞಾನಗಳನ್ನು ಸೇರಿಸಿದೆ. ಅಕಂಪ್ಲಿಶೇಡ್ ಪ್ಲಸ್ ಮತ್ತು ಅದಕ್ಕಿಂತ ಮೇಲಿನ ಮಾದರಿಗಳಲ್ಲಿ ಹೊಸದಾಗಿ ಬಂದ 10.25 ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಂ, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ ನೊಂದಿಗೆ ಡ್ರೈವಿಂಗ್ ಅನುಭವ ಇನ್ನಷ್ಟು ಆಹ್ಲಾದಕರವಾಗಿದೆ.
ಇದನ್ನೂ ಓದಿ: 5-ಸ್ಟಾರ್ ರೇಟಿಂಗ್ ಮತ್ತು ಅಗ್ಗದ ಬೆಲೆಯೊಂದಿಗೆ ಟಾಟಾ ಪಂಚ್ ಮಾರಾಟದಲ್ಲಿ ನಂ. 1 ಕಾರು

ಕಾರಿನ ಹೊರಭಾಗ ಮತ್ತು ಒಳಭಾಗದ ವಿನ್ಯಾಸದಲ್ಲಿ ಗಮನಾರ್ಹ ಬದಲಾವಣೆಗಳಿಲ್ಲದಿದ್ದರೂ, ವಿವಿಧ ಮಾದರಿಗಳಲ್ಲಿ ಸೇರಿಸಲಾಗಿರುವ ಹೊಸ ವೈಶಿಷ್ಟ್ಯಗಳು ಗ್ರಾಹಕರನ್ನು ಆಕರ್ಷಿಸಲಿವೆ. ಉದಾಹರಣೆಗೆ, ಪ್ಯೂರ್ ಮಾದರಿಯಲ್ಲಿ ಸೆಂಟ್ರಲ್ ಲಾಕಿಂಗ್, ಪವರ್ ವಿಂಡೋಗಳು ಮತ್ತು ಹಿಂಭಾಗದ ಕ್ಯಾಮೆರಾ ಸಿಗುತ್ತದೆ. ಅಡ್ವೆಂಚರ್ ಎಸ್ ಮಾದರಿಯಲ್ಲಿ ಸನ್‌ರೂಫ್ ಮತ್ತು ರಿಯರ್ ಎಸಿ ವೆಂಟ್ಸ್ ವ್ಯವಸ್ಥೆ. ಅಕಂಪ್ಲಿಶೇಡ್ ಡ್ಯಾಜಲ್ ಮಾದರಿಯಲ್ಲಿ ವೈರ್‌ಲೆಸ್ ಚಾರ್ಜಿಂಗ್ ಮುಂತಾದ ವೈಶಿಷ್ಟ್ಯಗಳನ್ನು ನೀಡಲಾಗಿದೆ.
Tata Punch ಪ್ಯೂರ್ ವೆರಿಯೆಂಟ್‌ಗಳಿಗೆ ಮಾತ್ರ ಒರ್ಕಸ್ ವೈಟ್ ಮತ್ತು ಡೇಟೋನಾ ಗ್ರೇ ಬಣ್ಣ ಆಯ್ಕೆಗಳು ಲಭ್ಯವಿದ್ದು, ಅಡ್ವೆಂಚರ್ ಮತ್ತು ಅಡ್ವೆಂಚರ್ ರಿದಮ್ ವೆರಿಯೆಂಟ್‌ಗಳಿಗೆ ಟ್ರಾಪಿಕಲ್ ಮಿಸ್ಟ್ ಬಣ್ಣವಿದೆ. ಸನ್‌ರೂಫ್ ಹೊಂದಿರುವ ಅಡ್ವೆಂಚರ್ ಟ್ರಿಮ್‌ಗಳಿಗೆ ಕ್ಯಾಲಿಪ್ಸೋ ರೆಡ್ ಶೇಡ್ ಕೂಡ ಲಭ್ಯವಿದೆ. ಅಕಾಂಪ್ಲಿಷ್ಡ್ ವೆರಿಯೆಂಟ್‌ಗಳು ಮೀಟಿಯರ್ ಬ್ರೋನ್ಸ್ ಬಣ್ಣದಲ್ಲಿ ಲಭ್ಯವಿದ್ದು, ಕ್ರಿಯೇಟಿವ್ ವೆರಿಯೆಂಟ್‌ಗಳು ಐದು ಡ್ಯುಯಲ್-ಟೋನ್ ಬಣ್ಣಗಳಲ್ಲಿ ಲಭ್ಯವಿವೆ. ಪಂಚ್ ಕಾರಿನ ಸಿಎನ್‌ಜಿ ಮಾದರಿಯು ತನ್ನ ವೈವಿಧ್ಯತೆಯನ್ನು ಇನ್ನಷ್ಟು ಹೆಚ್ಚಿಸಿಕೊಂಡಿದೆ. ಹೊಸ ತಂತ್ರಜ್ಞಾನ ಮತ್ತು ಹೆಚ್ಚುವರಿ ಮಾದರಿಗಳ ಜೊತೆಗೆ ಗ್ರಾಹಕರಿಗೆ ತಮ್ಮ ಶೈಲಿಗೆ ತಕ್ಕಂತೆ ಕಾರನ್ನು ಆಯ್ಕೆ ಮಾಡುವ ಅವಕಾಶ ನೀಡುತ್ತದೆ.
ಇದನ್ನೂ ಓದಿ: ಕೈಗೆಟುಕುವ ಬೆಲೆಯಲ್ಲಿ ಬಿಡುಗಡೆಯಾದ ಟಾಟಾ ಕರ್ವ್ ಪೆಟ್ರೋಲ್, ಡೀಸೆಲ್

ಟಾಟಾ ಪಂಚ್ ಫೇಸ್‌ಲಿಫ್ಟ್: ಪವರ್‌ಟ್ರೇನ್
ಹೊಸ ಪಂಚ್(Tata Punch) ಕಾರಿನಲ್ಲಿ ಈ ಹಿಂದಿನಂತೆ 1.2-ಲೀಟರ್ 3-ಸಿಲಿಂಡರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಪಡೆದಿದೆ. 87 ಬಿಹೆಚ್‍ಪಿ ಪವರ್ ಮತ್ತು 115 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಈ ಮಾದರಿಯುಲ್ಲಿ 5-ಸ್ಪೀಡ್ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಅನ್ನು ಆಯ್ಕೆ ಮಾಡಿಕೊಳ್ಳಬಹುದು. ಸಿಎನ್‌ಜಿ ಮಾದರಿಯು 72.5 bhp ಮತ್ತು 103 Nm ಟಾರ್ಕ್ ಅನ್ನು ನೀಡುತ್ತದೆ. ಈ ಮಾದರಿಯು ಕೇವಲ 5-ಸ್ಪೀಡ್ ಮ್ಯಾನ್ಯುವಲ್ ಗೇರ್ಬಾಕ್ಸ್ನೊಂದಿಗೆ ಮಾತ್ರ ನೀಡಲಾಗುತ್ತದೆ.
Tata Punch ಈಗ ಎಲೆಕ್ಟ್ರಿಕ್ ಮಾದರಿಯಲ್ಲಿಯೂ ಲಭ್ಯವಿದೆ, ಮತ್ತು ಇದರ ಎಕ್ಸ್ ಶೋರೂಮ್ ದರ ರೂ. 10.99 ಲಕ್ಷದಿಂದ ರೂ. 15.49 ಲಕ್ಷದವರೆಗೆ ಇದೆ. ಈ ಎಲೆಕ್ಟ್ರಿಕ್ ಮಾದರಿಯಲ್ಲಿ 25 ಕೆಡಬ್ಲ್ಯೂಹೆಚ್ ಮತ್ತು 35 ಕೆಡಬ್ಲ್ಯೂಹೆಚ್ ಬ್ಯಾಟರಿ ಪ್ಯಾಕ್‌ಗಳ ಆಯ್ಕೆ ಲಭ್ಯವಿದ್ದು, ಪೂರ್ತಿಯಾಗಿ ಚಾರ್ಜ್ ಮಾಡಿದಾಗ 265 ಕಿಲೋಮೀಟರ್‌ರಿಂದ 365 ಕಿಲೋಮೀಟರ್‌ವರೆಗೆ ಪ್ರಯಾಣ ಮಾಡಬಹುದು.