ಭಾರತದಲ್ಲಿ ವಾಹನಗಳೆಂದರೆ ಮಹೀಂದ್ರಾ(Mahindra) ಎಂಬ ಹೆಸರು ಮೊದಲು ಬರುತ್ತದೆ. ಸ್ಕಾರ್ಪಿಯೋ ಎಕ್ಸ್‌ಯುವಿ700, ಥಾರ್, ಎಕ್ಸ್‌ಯುವಿ 3 ಎಕ್ಸ್ಒ ಮುಂತಾದ ಕಾರುಗಳ ಮೂಲಕ ದೇಶೀಯ ಮಾರುಕಟ್ಟೆಯಲ್ಲಿ ತನ್ನದೇ ಆದ ವಿಶೇಷ ಸ್ಥಾನ ಮಾಡಿಕೊಂಡಿದೆ. ಇವುಗಳ ಆಧುನಿಕ ವಿನ್ಯಾಸ ಮತ್ತು ಅತ್ಯಾಧುನಿಕ ವೈಶಿಷ್ಟ್ಯಗಳು ಗ್ರಾಹಕರನ್ನು ಬಹಳವಾಗಿ ಆಕರ್ಷಿಸುತ್ತಿವೆ. ಈ ಸೆಪ್ಟೆಂಬರ್‌ನಲ್ಲಿ ಬೆಂಗಳೂರಿನ ಆಯ್ದ ಮಹೀಂದ್ರಾ ಡೀಲರ್‌ಶಿಪ್‌ಗಳಲ್ಲಿ ಎಕ್ಸ್‌ಯುವಿ 400 ಎಲೆಕ್ಟ್ರಿಕ್ (XUV400 EV) ಕಾರಿನ ಮೇಲೆ ಭರ್ಜರಿ ಡಿಸ್ಕೌಂಟ್ ಆಫರ್ ಲಭ್ಯವಿದೆ.
ಮಹೀಂದ್ರಾ ಎಕ್ಸ್‌ಯುವಿ400 ಇವಿ ವಿದ್ಯುತ್ ವಾಹನವು ಗ್ರಾಹಕರ ಬಜೆಟ್‌ಗೆ ಸರಿಹೊಂದುವಂತೆ ರೂ. 3 ಲಕ್ಷದವರೆಗಿನ ಆಕರ್ಷಕ ರಿಯಾಯಿತಿಯೊಂದಿಗೆ ಮಾರುಕಟ್ಟೆಯಲ್ಲಿ ಲಭ್ಯವಿದೆ. ಇಸಿ ಪ್ರೊ ಮತ್ತು ಇಎಲ್ ಪ್ರೊ ಎಂಬ ಎರಡು ರೂಪಾಂತರಗಳಲ್ಲಿ ಲಭ್ಯವಿರುವ ಈ ವಾಹನವು ಎಕ್ಸ್‌ಶೋರೂಂ ಬೆಲೆ ರೂ. 15.49 ಲಕ್ಷದಿಂದ ರೂ. 19.39 ಲಕ್ಷದವರೆಗಿನ ಬೆಲೆಯನ್ನು ಹೊಂದಿದೆ.
ಇದನ್ನೂ ಓದಿ: ಮಹೀಂದ್ರಾ ಥಾರ್ ಮೇಲೆ ಭಾರಿ ರಿಯಾಯಿತಿ! ಈಗಲೇ ಖರೀದಿಸಿ ಹಣ ಉಳಿಸಿ
ಎಕ್ಸ್‌ಯುವಿ 400 ಇವಿ (Mahindra XUV400 EV): ಬ್ಯಾಟರಿ ಪ್ಯಾಕ್ ಮತ್ತು ವೈಶಿಷ್ಟ್ಯಗಳು
ಈ ಕಾರು ಹತ್ತಾರು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಹೊಂದಿದೆ. 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ ಮೂಲಕ ವೈರ್ಲೆಸ್ ಸಂಪರ್ಕ, 10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ, ವೈರ್‌ಲೆಸ್ ಫೋನ್ ಚಾರ್ಜರ್, ಡುಯಲ್ ಜೋನ್ ಎಸಿ, ಸನ್‌ರೂಫ್, ಮತ್ತು ಪುಶ್-ಬಟನ್ ಸ್ಟಾರ್ಟ್/ ಸ್ಟಾಪ್, ಎಲೆಕ್ಟ್ರಿಕಲ್ ಅಡ್ಜೆಸ್ಟಬಲ್ ORVMs, ಎಲ್ಇಡಿ ಡಿಆರ್ಎಲ್ಗಳೊಂದಿಗೆ ಪ್ರೊಜೆಕ್ಟರ್ ಹೆಡ್ಲ್ಯಾಂಪ್ಗಳನ್ನು ಒಳಗೊಂಡಿದೆ.

ಮಹೀಂದ್ರಾ ಎಕ್ಸ್‌ಯುವಿ400 ಇವಿ ಪ್ರಯಾಣಿಕರಿಗೆ ಗರಿಷ್ಠ ರಕ್ಷಣೆ ಒದಗಿಸುತ್ತದೆ. ಸುರಕ್ಷತೆಗಾಗಿ 6 ಏರ್‌ಬ್ಯಾಗ್‌ಗಳು ಜೊತೆಗೆ ರೈನ್ ಸೆನ್ಸಿಂಗ್ ವೈಪರ್ಗಳು, ಐಎಸ್ಒಫಿಕ್ಸ್(ISOFIX) ಮೌಂಟ್ಗಳು ಮತ್ತು ಆಟೋ ಹೆಡ್ಲ್ಯಾಂಪ್ಗಳಿವೆ ,ಇಎಸ್‌ಪಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ), ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), ಹಿಲ್ ಹೋಲ್ಡ್ ಅಸಿಸ್ಟ್ ಹಾಗೂ ರೇರ್ ಪಾರ್ಕಿಂಗ್ ಕ್ಯಾಮೆರಾವನ್ನು ಹೊಂದಿದೆ.
ಇದನ್ನೂ ಓದಿ: ಟಾಟಾ ಎಲೆಕ್ಟ್ರಿಕ್ ಕಾರುಗಳ ಮೇಲೆ 2 ಲಕ್ಷ ರೂಪಾಯಿ ವರೆಗೆ ಡಿಸ್ಕೌಂಟ್ ಆಫರ್
ಮಹೀಂದ್ರಾ ಎಕ್ಸ್‌ಯುವಿ400 ಇವಿ ಭಾರತೀಯ ಆಟೋಮೋಟಿವ್ ದೈತ್ಯನ ಏಕೈಕ ಎಲೆಕ್ಟ್ರಿಕ್ ಕೊಡುಗೆಯಾಗಿದೆ ಮತ್ತು ಈ ಎಕ್ಸ್‌ಯುವಿ ಎರಡು ರೂಪಾಂತರಗಳಲ್ಲಿ ಎರಡು ಬ್ಯಾಟರಿ ಆಯ್ಕೆಗಳೊಂದಿಗೆ ನೀಡಲಾಗುತ್ತದೆ. XUV400 EC ಪ್ರೊ ತನ್ನ ಏಕೈಕ ಆಯ್ಕೆಯಾಗಿ 34.5 kWh ಬ್ಯಾಟರಿಯನ್ನು ಪಡೆಯುತ್ತದೆ ಮತ್ತು ಇದು ಒಂದು ಬಾರಿ ಚಾರ್ಜ್ ಮಾಡಿದರೆ 359 ಕಿಲೋಮೀಟರ್‌ವರೆಗೆ ಸುಲಭವಾಗಿ ಓಡಿಸಬಹುದು. XUV400 EL ಪ್ರೊ ರೂಪಾಂತರವು ಹೆಚ್ಚುವರಿಯಾಗಿ 39.4 kWh ಬ್ಯಾಟರಿಯ ಆಯ್ಕೆಯನ್ನು ಪಡೆಯುತ್ತದೆ, ಇದು ಒಂದೇ ಚಾರ್ಜ್ನಲ್ಲಿ 456 ಕಿಮೀ ವ್ಯಾಪ್ತಿಯನ್ನು ನೀಡುತ್ತದೆ. ಅಷ್ಟೇ ಅಲ್ಲ, 50 ಕೆಡಬ್ಲ್ಯೂ ಡಿಸಿ ಫಾಸ್ಟ್ ಚಾರ್ಜರ್ ಬಳಸಿದರೆ, ಬ್ಯಾಟರಿಯನ್ನು ಕೇವಲ 50 ನಿಮಿಷಗಳಲ್ಲಿ ಪೂರ್ತಿಯಾಗಿ ಚಾರ್ಜ್ ಮಾಡಬಹುದು.
ಪ್ರವಾಸಕ್ಕೆ ಹೋಗುವಾಗ ಕುಟುಂಬ ಮತ್ತು ಸ್ನೇಹಿತರೊಂದಿಗೆ ಆರಾಮದಾಯಕವಾಗಿ ಪ್ರಯಾಣಿಸಲು ಬಯಸುವವರಿಗೆ ಈ ಎಲೆಕ್ಟ್ರಿಕ್ ಕಾರು ಪರಿಪೂರ್ಣ ಆಯ್ಕೆಯಾಗಿದೆ. ಐವರು ವ್ಯಕ್ತಿಗಳಿಗೆ ಸಾಕಷ್ಟು ಸ್ಥಳಾವಕಾಶ ಮತ್ತು 378 ಲೀಟರ್‌ನ ವಿಶಾಲವಾದ ಬೂಟ್ ಸ್ಪೇಸ್‌ನೊಂದಿಗೆ, ಈ ಕಾರು ನಿಮ್ಮ ಎಲ್ಲಾ ಪ್ರಯಾಣದ ಅಗತ್ಯಗಳನ್ನು ಪೂರೈಸುತ್ತದೆ. ಆರ್ಕ್ಟಿಕ್ ಬ್ಲೂ, ಎವರೆಸ್ಟ್ ವೈಟ್, ಗ್ಯಾಲಕ್ಸಿ ಗ್ರೇ, ನಾಪೋಲಿ ಬ್ಲಾಕ್ ಮತ್ತು ನೆಬ್ಯುಲಾ ಬ್ಲೂ ಸೇರಿದಂತೆ ವಿವಿಧ ಬಣ್ಣಗಳಲ್ಲಿ ನಿಮ್ಮ ಇಷ್ಟಕ್ಕೆ ತಕ್ಕಂತೆ ಆಯ್ಕೆ ಮಾಡಿಕೊಳ್ಳಬಹುದು.