Hero Splendor: ಕೈಗೆಟುಕುವ ಬೆಲೆಯಲ್ಲಿ ಹೊಸ ಫೀಚರ್‌ಗಳೊಂದಿಗೆ ಹೀರೋ ಸ್ಪ್ಲೆಂಡರ್ ಬಿಡುಗಡೆ

ಭಾರತದ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ವಿಶ್ವಾಸಾರ್ಹತೆಗೆ ಹೆಸರು ಮಾಡಿರುವ ಹೀರೋ ಮೋಟೋಕಾರ್ಪ್ (Hero MotoCorp), ತನ್ನ ಗ್ರಾಹಕರ ವೈವಿಧ್ಯಮಯ ಆದ್ಯತೆಗಳನ್ನು ಪೂರೈಸುವ ನಿಟ್ಟಿನಲ್ಲಿ ಹಳ್ಳಿಗಾಡಿನಿಂದ ಮಹಾನಗರಗಳವರೆಗೆ ವ್ಯಾಪಕ ಶ್ರೇಣಿಯ ಬೈಕ್ ಮತ್ತು ಸ್ಕೂಟರ್‌ಗಳನ್ನು ನೀಡುತ್ತಿದೆ. ಆಕರ್ಷಕ ವಿನ್ಯಾಸ ಮತ್ತು ಅತ್ಯಾಧುನಿಕ ವೈಶಿಷ್ಟ್ಯಗಳ ಸಮಾಗಮದಿಂದ ಗ್ರಾಹಕರ ಹೃದಯ ಗೆದ್ದಿರುವ ಹೀರೋ, ಇದೀಗ ತನ್ನ ಜನಪ್ರಿಯ ಸ್ಪ್ಲೆಂಡರ್ ಮಾದರಿಗೆ ಹೊಸ ಆಯಾಮವನ್ನು ನೀಡುವ ಮೂಲಕ. ಕಂಪನಿಯು ಇತ್ತೀಚೆಗೆ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ಹೊಸ ವೈಶಿಷ್ಟ್ಯಗಳಿಂದ ತುಂಬಿರುವ ಹೊಸ ಸ್ಪ್ಲೆಂಡರ್ (Hero Splendor) ಮೋಟಾರ್‌ಸೈಕಲ್‌ ಅನ್ನು ಬಿಡುಗಡೆ ಮಾಡಿದೆ.

ಹೀರೋ ಮೋಟೋಕಾರ್ಪ್ ಕಂಪನಿಯು ತನ್ನ ಪ್ರಮುಖ ದ್ವಿಚಕ್ರ ವಾಹನವಾದ ಸ್ಪ್ಲೆಂಡರ್ ಬೈಕ್‌ಗೆ ಹೊಸ ಜೀವ ತುಂಬಿದೆ. ಈ ಬೈಕ್‌ಗೆ ಮೊದಲ ಬಾರಿಗೆ ಮುಂಭಾಗದ ಡಿಸ್ಕ್ ಬ್ರೇಕ್ ವ್ಯವಸ್ಥೆಯನ್ನು ಅಳವಡಿಸಲಾಗಿದ್ದು, ಈ ಡಿಸ್ಕ್ ಬ್ರೇಕ್ ವ್ಯವಸ್ಥೆಯು ಸುರಕ್ಷತೆಯನ್ನು ಹೆಚ್ಚಿಸುವುದರ ಜೊತೆಗೆ ಚಾಲನೆಯ ಆನಂದವನ್ನು ಹೆಚ್ಚಿಸುತ್ತದೆ. ಈ ಹೊಸ ವೈಶಿಷ್ಟ್ಯವು ಸ್ಪ್ಲೆಂಡರ್ ಪ್ಲಸ್ ಎಕ್ಸ್‌ಟೆಕ್ (Splendor Plus XTEC) ಮಾದರಿಯಲ್ಲಿ ಮಾತ್ರ ಲಭ್ಯವಿದ್ದು, ಈ ಮಾದರಿಯ ಬೆಲೆ ಎಕ್ಸ್ ಶೋರೂಂನಲ್ಲಿ ರೂ. 83,461 ಆಗಿದೆ.

ಇದನ್ನೂ ಓದಿ: ಆಕರ್ಷಕ ಬಣ್ಣದೊಂದಿಗೆ ಬಿಡುಗಡೆಯಾಯ್ತು ಹೊಸ ಹೀರೋ ಗ್ಲಾಮರ್

ಹೀರೋ ಸ್ಪ್ಲೆಂಡರ್ (Hero Splendor): ವೈಶಿಷ್ಟ್ಯಗಳು

ಡಿಸ್ಕ್ ಬ್ರೇಕ್ ವ್ಯವಸ್ಥೆಯನ್ನು ಹೊಂದಿರುವ ಹೊಸ ಹೀರೋ ಸ್ಪ್ಲೆಂಡರ್ ಪ್ಲಸ್ ಎಕ್ಸ್‌ಟೆಕ್ ಮಾದರಿಯ ಬೆಲೆ, ಡ್ರಮ್ ಬ್ರೇಕ್ ವ್ಯವಸ್ಥೆಯನ್ನು ಹೊಂದಿರುವ ಮಾದರಿಯ ಬೆಲೆಗಿಂತ ರೂ. 3,550 ಹೆಚ್ಚಾಗಿದೆ. ಈ ಬೈಕು ಮೂರು ಆಕರ್ಷಕ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ: ಬ್ಲ್ಯಾಕ್ ಸ್ಪಾರ್ಕಲಿಂಗ್ ಬ್ಲೂ, ಬ್ಲ್ಯಾಕ್ ಟಾರ್ನಾಡೋ ಗ್ರೇ ಮತ್ತು ಬ್ಲ್ಯಾಕ್ ರೆಡ್. ಈ ಹೊಸ ಮೋಟಾರ್‌ ಸೈಕಲ್‌ನಲ್ಲಿ ಎಲ್ಇಡಿ ಹೆಡ್‌ಲ್ಯಾಂಪ್, ಬ್ಲೂಟೂತ್ ಕನೆಕ್ಟಿವಿಟಿಯೊಂದಿಗೆ ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್, ಅಲಾಯ್ ವೀಲ್‌ ಮತ್ತು ಇಂಧನ ಉಳಿತಾಯದ ಐ3ಎಸ್ ಸ್ಟಾರ್ಟ್/ಸ್ಟಾಪ್ ಸಿಸ್ಟಮ್‌ನಂತಹ ಆಧುನಿಕ ವೈಶಿಷ್ಟ್ಯಗಳನ್ನು ನೀವು ಕಾಣಬಹುದು. ಇದಲ್ಲದೆ, ಬೈಕ್ ಸೈಡ್-ಸ್ಟ್ಯಾಂಡ್ ಕಟ್-ಆಫ್ ಸೌಲಭ್ಯವನ್ನು ಹೊಂದಿದೆ.

Hero Splendor Plus XTEC
Hero Splendor Plus XTEC

ಈ ಹೊಸ ಮಾದರಿಯ Hero Splendor ಪವರ್‌ಟ್ರೈನ್‌ನಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಈ ಬೈಕ್ 97.2 ಸಿಸಿ ಸಿಂಗಲ್ ಸಿಲಿಂಡರ್, ಏರ್ ಕೂಲ್ಡ್ ಪೆಟ್ರೋಲ್ ಎಂಜಿನ್‌ನೊಂದಿಗೆ ಬರುತ್ತದೆ. ಈ ಎಂಜಿನ್ 7.9 ಬಿಹೆಚ್‌ಪಿ ಗರಿಷ್ಠ ಶಕ್ತಿ ಮತ್ತು 8.05 ಎನ್ಎಂ ಗರಿಷ್ಠ ಟಾರ್ಕ್ ಉತ್ಪಾದಿಸುತ್ತದೆ. ಇದರೊಂದಿಗೆ 4-ಸ್ಪೀಡ್ ಗೇರ್‌ಬಾಕ್ಸ್ ಅನ್ನು ಸೇರಿಸಲಾಗಿದೆ. ವಾಹನದ ಒಟ್ಟಾರೆ ತೂಕವು 113.6 ಕೆಜಿ ಆಗಿದ್ದು. ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ 5-ಸ್ಟೆಪ್ ಡ್ಯುಯಲ್ ಶಾಕ್ ಅಬ್ಸಾರ್ಬರ್‌ಗಳನ್ನು ಒಳಗೊಂಡಿದೆ. ಇದರೊಂದಿಗೆ, ಮುಂಭಾಗದಲ್ಲಿ 240 ಎಂಎಂ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ 130 ಎಂಎಂ ಡ್ರಮ್ ಬ್ರೇಕ್ ವ್ಯವಸ್ಥೆಯನ್ನು ಹೊಂದಿದೆ. ಸುರಕ್ಷತೆಯ ದೃಷ್ಟಿಯಿಂದ, ಈ ವಾಹನವು ಇಂಟಿಗ್ರೇಟೆಡ್ ಬ್ರೇಕಿಂಗ್ ಸಿಸ್ಟಮ್‌ನಿಂದ (ಐಬಿಎಸ್) ಸಜ್ಜಿತವಾಗಿದೆ.

ಇದನ್ನೂ ಓದಿ: ಹೀರೋ ಎಕ್ಸ್‌ಟ್ರೀಮ್ 160R 4V ಹೊಸ ಅವತಾರದಲ್ಲಿ 1.38 ಲಕ್ಷ ರೂಪಾಯಿಗೆ ಬಿಡುಗಡೆ

Leave a Comment