Maybach EQS: ಮರ್ಸಿಡಿಸ್-ಮೇಬ್ಯಾಕ್ EQS 680 ಐಷಾರಾಮಿ ಎಲೆಕ್ಟ್ರಿಕ್ ಎಸ್‍ಯುವಿ ಬಿಡುಗಡೆ

ಮರ್ಸಿಡಿಸ್-ಮೇಬ್ಯಾಕ್ EQS 680 ವಾಹನವು ಒಂದೇ ಚಾರ್ಜ್‌ನಲ್ಲಿ 610 ಕಿಲೋಮೀಟರ್ ದೂರವನ್ನು ಕ್ರಮಿಸುವ ಸಾಮರ್ಥ್ಯ ಹೊಂದಿದೆ

ಐಷಾರಾಮಿ ವಾಹನಗಳ ಜಗತ್ತಿನಲ್ಲಿ ಹೆಸರುವಾಸಿಯಾಗಿರುವ ಮರ್ಸಿಡಿಸ್-ಬೆಂಝ್ ಕಂಪನಿಯು ಭಾರತೀಯ ಗ್ರಾಹಕರನ್ನು ಮೆಚ್ಚಿಸುವ ನಿಟ್ಟಿನಲ್ಲಿ ಮೇಬ್ಯಾಕ್ EQS 680 (Maybach EQS 680) ಎಂಬ ಹೊಸ ಎಲೆಕ್ಟ್ರಿಕ್ ಎಸ್‌ಯುವಿಯನ್ನು ಬಿಡುಗಡೆ ಮಾಡಿದೆ. ಈ ಕಾರಿನ ಎಕ್ಸ್‌ಶೋರೂಂ ಬೆಲೆ ರೂ. 2.25 ಕೋಟಿ ಆಗಿದ್ದು, ಕಳೆದ ವರ್ಷ ಏಪ್ರಿಲ್‌ನಲ್ಲಿ ವಿಶ್ವದಾದ್ಯಂತ ಪರಿಚಯಿಸಲಾದ ಈ ವಾಹನವು ಭಾರತದಲ್ಲಿ ಇಂದು ಬಿಡುಗಡೆಯಾಗಿದೆ.

ಮೇಬ್ಯಾಕ್ EQS 680: ಎಕ್ಸ್ಟೀರಿಯರ್, ಇಂಟೀರಿಯರ್ ಮತ್ತು ವೈಶಿಷ್ಟ್ಯಗಳು

ಮರ್ಸಿಡಿಸ್-ಮೇಬ್ಯಾಕ್ ವಾಹನವು ಎರಡು ಬಣ್ಣಗಳ ಸಮ್ಮಿಶ್ರಣದೊಂದಿಗೆ ಅತ್ಯಂತ ಆಕರ್ಷಕವಾಗಿ ಕಾಣುತ್ತದೆ. ಮೇಲಿನ ಭಾಗವು ಕಪ್ಪು ಅಥವಾ ನೀಲಿ ಬಣ್ಣದಲ್ಲಿ ಬರುತ್ತದೆ , ಕೆಳಗಿನ ಭಾಗವು ಸೆಲೆನೈಟ್ ಗ್ರೇ, ಸಿಲ್ವರ್, ಕಲಹರಿ ಗೋಲ್ಡ್ ಅಥವಾ ವೆಲ್ವೆಟ್ ಬ್ರೌನ್ ಬಣ್ಣಗಳಲ್ಲಿ ಬರುತ್ತದೆ. ಮುಂಭಾಗದಲ್ಲಿ, ಹುಡ್ ಮೇಲೆ ಮರ್ಸಿಡಿಸ್-ಬೆಂಜ್‌ನ 3-ಪಾಯಿಂಟ್ ಸ್ಟಾರ್ ಲೋಗೋ, ಮೇಬ್ಯಾಕ್ ಎಂಬ ಹೆಸರು ಮತ್ತು ಗ್ರಿಲ್‌ನಲ್ಲಿನ ಲಂಬವಾದ ಸ್ಲಾಟ್‌ಗಳು , ಸಿಗ್ನೇಚರ್ ಮೇಬ್ಯಾಕ್ ಮಾದರಿಗಳಿಂದ ಅಲಂಕರಿಸಲ್ಪಟ್ಟ ಏರ್ ಇನ್ಲೆಟ್ಗಳಿವೆ. ವಿಶೇಷವಾದ  LED ಹೆಡ್‌ಲೈಟ್‌ಗಳು ಮತ್ತು ಟೈಲ್‌ಲ್ಯಾಂಪ್‌ಗಳು, ಮೃದುವಾದ ಡೋರ್ ಹ್ಯಾಂಡಲ್ಗಳು, 21 ಇಂಚಿನ ವೀಲ್ಸ್ ಗಳು, ಡಿ-ಪಿಲ್ಲರ್‌ಗಳ ಮೇಲಿನ ಮೇಬಾಚ್ ಚಿಹ್ನೆಗಳು ಮುಖ್ಯ ಆಕರ್ಷಣೆಗಳಾಗಿವೆ, ಇದಲ್ಲದೆ, ಕ್ರೋಮ್ ರೂಫ್ ಸ್ಪಾಯ್ಲರ್ ಮತ್ತು ಹಿಂಭಾಗದ ಏಪ್ರನ್‌ಗಳು,ಈ ವಾಹನದ ಅತ್ಯಾಧುನಿಕತೆಯನ್ನು ಪ್ರತಿಬಿಂಬಿಸುತ್ತವೆ.

ಇದನ್ನೂ ಓದಿ: ಒಂದೇ ದಿನದಲ್ಲಿ200 BYD SEAL ಎಲೆಕ್ಟ್ರಿಕ್ ಐಷಾರಾಮಿ ಸೆಡಾನ್‌ಗಳನ್ನು ವಿತರಿಸಲಾಗೀದೆ

Mercedes-Maybach EQS 680
Mercedes-Maybach EQS 680

ಈ ಹೈ-ಎಂಡ್ ಎಲೆಕ್ಟ್ರಿಕ್ ಎಸ್‍ಯುವಿಯ ಒಳಭಾಗದಲ್ಲಿ 15-ಸ್ಪೀಕರ್ ಬರ್ಮೆಸ್ಟರ್ 4D ಸರೌಂಡ್ ಸೌಂಡ್ ಸಿಸ್ಟಮ್, ಇದರಲ್ಲಿ ಬಾಸ್ ಸ್ಪೀಕರ್ಗಳು, 3ಡಿ ಸ್ಪೀಕರ್ಗಳು ಸೇರಿವೆ, ಆಕ್ಟಿವ್ ಆಂಬಿಯೆಂಟ್ ಲೈಟಿಂಗ್, ಇದು ನಿಮಗೆ 64 ವಿಭಿನ್ನ ಬಣ್ಣದ ಆಯ್ಕೆಗಳನ್ನು ನೀಡುತ್ತದೆ. ನಪ್ಪಾ ಲೆದರ್ ಸೀಟ್‌ಗಳು ಮತ್ತು ರಿಯರ್ ಇನ್ಫೋಟೈನ್‌ಮೆಂಟ್ ಕಂಟ್ರೋಲ್‌ಗಳನ್ನು ಒಳಗೊಂಡಂತೆ ಹಲವಾರು ಐಷಾರಾಮಿ ವೈಶಿಷ್ಟ್ಯಗಳನ್ನು ಹೊಂದಿದೆ. ಇದಲ್ಲದೆ, ಹಿಂಭಾಗದಲ್ಲಿ ಇರುವವರೆಗೂ 11.6-ಇಂಚಿನ ಮನರಂಜನಾ ಡಿಸ್ ಪ್ಲೇಯನ್ನು ಒಳಗೊಂಡಿದೆ. ಹಿಂಬದಿಯ ಆಸನಗಳ ಸೌಕರ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ, ವಾಹನದ ಹಿಂಭಾಗದ ಆರ್ಮ್‌ರೆಸ್ಟ್‌ನ ಹಿಂದೆ 10 ಲೀಟರ್ ಸಾಮರ್ಥ್ಯದ ರೆಫ್ರಿಜರೇಟರ್ ಅನ್ನು ಅಳವಡಿಸಲಾಗಿದೆ. ಇದರಲ್ಲಿ ತಾಪಮಾನವನ್ನು ನಿಯಂತ್ರಿಸುವ ವ್ಯವಸ್ಥೆಯನ್ನು ಸೇರಿಸಲಾಗಿದೆ.

Mercedes-Maybach EQS 680
Mercedes-Maybach EQS 680

Maybach EQS 680 ವಾಹನದಲ್ಲಿ, ನಿಮಗೆ ವಿವಿಧ ಸುರಕ್ಷಾ ವೈಶಿಷ್ಟ್ಯಗಳನ್ನು ಕಾಣಬಹುದು. ಇದು 11 ಏರ್‌ಬ್ಯಾಗ್‌ಗಳು, ಅಡಾಪ್ಟಿವ್ ಬ್ರೇಕಿಂಗ್ ತಂತ್ರಜ್ಞಾನ, ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್ (ABS), ಲೆವೆಲ್ 2 ADAS, 360-ಡಿಗ್ರಿ ಕ್ಯಾಮೆರಾ, ಹೀಟೆಡ್ ವಿಂಡ್‌ಶೀಲ್ಡ್ ವಾಶರ್ ಸಿಸ್ಟಮ್, ಮಳೆ-ರೈನ್ ಸೆನ್ಸಿಂಗ್  ವಿಂಡ್‌ಶೀಲ್ಡ್ ವೈಪರ್‌ಗಳು, ಆಂಟಿ-ಥೆಫ್ಟ್ ಅಲಾರ್ಮ್ ಸಿಸ್ಟಮ್, ಕೀ ಲೆಸ್  ಸ್ಟಾರ್ಟ್ ಜೊತೆಗೆ ಸ್ಮಾರ್ಟ್ ಕೀ , ಎಕ್ಸಿಟ್ ವಾರ್ನಿಂಗ್ ಅಸಿಸ್ಟ್, ಆಕ್ಟಿವ್ ಸ್ಟೀರಿಂಗ್ ಅಸಿಸ್ಟ್, ಆಕ್ಟಿವ್ ಬ್ರೇಕ್ ಅಸಿಸ್ಟ್, ಮರ್ಸಿಡೀಸ್-ಬೆನ್ಜ್ ಎಮರ್ಜೆನ್ಸಿ ಕಾಲ್ ಜೊತೆಗೆ ಹಲವಾರು ಸುರಕ್ಷಿತ ವೈಶಿಷ್ಟಗಳನ್ನು ಹೊಂದಿದೆ.

ಇದನ್ನೂ ಓದಿ: ಪೋರ್ಷೆ ಮಾಕಾನ್ ಇವಿ RWD ಕಾರು ಭಾರತದಲ್ಲಿ ಬಿಡುಗಡೆ ಬೆಲೆ ರೂ. 1.23 ಕೋಟಿ

Mercedes-Maybach EQS 680: ಪವರ್‌ಟ್ರೇನ್, ರೇಂಜ್

ಮರ್ಸಿಡಿಸ್-ಮೇಬ್ಯಾಕ್ EQS 680 ವಾಹನವು 122 kWh ಸಾಮರ್ಥ್ಯದ ಅತ್ಯಾಧುನಿಕ ಬ್ಯಾಟರಿಯನ್ನು ಹೊಂದಿದೆ. ಈ ಬ್ಯಾಟರಿಯು ಎರಡು ಶಕ್ತಿಶಾಲಿ ಎಲೆಕ್ಟ್ರಿಕ್ ಮೋಟರ್‌ಗಳಿಗೆ ಶಕ್ತಿಯನ್ನು ಒದಗಿಸುತ್ತದೆ, ಇದು 658 ಹೆಚ್‌ಪಿ ಗರಿಷ್ಠ ಶಕ್ತಿ ಮತ್ತು 950 Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. 4ಮ್ಯಾಟಿಕ್ AWD ತಂತ್ರಜ್ಞಾನದ ಮೂಲಕ ಎಲ್ಲಾ ನಾಲ್ಕು ಚಕ್ರಗಳಿಗೆ ಶಕ್ತಿಯನ್ನು ವಿತರಿಸಲಾಗುತ್ತದೆ. ಇದರ ಪರಿಣಾಮವಾಗಿ, ವಾಹನವು ಕೇವಲ 4.4 ಸೆಕೆಂಡುಗಳಲ್ಲಿ 0 ರಿಂದ 100 ಕಿಮೀ/ಗಂಟೆ ವೇಗವನ್ನು ಪಡೆಯುತ್ತದೆ ಮತ್ತು ಗರಿಷ್ಠ 210 ಕಿಮೀ/ಗಂಟೆ ವೇಗವನ್ನು ತಲುಪುತ್ತದೆ. ಒಂದೇ ಚಾರ್ಜ್‌ನಲ್ಲಿ 611 ಕಿಮೀ ವರೆಗೆ ಸಂಚರಿಸಬಲ್ಲ ಈ ವಾಹನವು ದೀರ್ಘ ಪ್ರಯಾಣಗಳಿಗೂ ಸೂಕ್ತವಾಗಿದೆ. ಅಷ್ಟೇ ಅಲ್ಲದೆ, 200 kW ವೇಗದ ಚಾರ್ಜಿಂಗ್ ಸೌಲಭ್ಯದಿಂದ ಕೇವಲ 20 ನಿಮಿಷಗಳಲ್ಲಿ 300 ಕಿಮೀ  ವರೆಗೆ ಚಲಿಸುವಷ್ಟು ಚಾರ್ಜ್ ಮಾಡಬಹುದು.

Leave a Comment