Hyundai Aura: ಉತ್ತಮ ಮೈಲೇಜ್ ನೊಂದಿಗೆ “ಹ್ಯುಂಡೈ ಔರಾ” ಡುಯಲ್ ಸಿಎನ್‌ಜಿ ಕಾರು ಬಿಡುಗಡೆ

ಭಾರತೀಯ ವಾಹನ ಮಾರುಕಟ್ಟೆಯಲ್ಲಿ ಪ್ರಮುಖ ಸ್ಥಾನವನ್ನು ಹೊಂದಿರುವ ಹ್ಯುಂಡೈ ಮೋಟಾರ್ ಇಂಡಿಯಾ(Hyundai Motor India), ಗ್ರಾಹಕರ ಆದ್ಯತೆಗಳನ್ನು ಗಮನದಲ್ಲಿಟ್ಟುಕೊಂಡು, ಮಂಗಳವಾರ ಹೊಸ ಔರಾ ಡ್ಯುಯಲ್-ಸಿಎನ್‌ಜಿ (Hyundai Aura Dual-CNG) ಸೆಡಾನ್ ಅನ್ನು ಬಿಡುಗಡೆ ಮಾಡಿದೆ. ಆಕರ್ಷಕ ವಿನ್ಯಾಸ ಮತ್ತು ಅತ್ಯಾಧುನಿಕ ಡ್ಯುಯಲ್-ಸಿಎನ್‌ಜಿ ತಂತ್ರಜ್ಞಾನ ಮತ್ತು ಉತ್ತಮ ಮೈಲೇಜ್ ನೊಂದಿಗೆ ಸಜ್ಜಿತವಾದ ಈ ಕಾರು, ಇಂಧನ ದಕ್ಷತೆ ಮತ್ತು ಪರಿಸರ ಸ್ನೇಹಿ ವಾಹನವನ್ನು ಹುಡುಕುವ ಗ್ರಾಹಕರಿಗೆ ಸೂಕ್ತ ಆಯ್ಕೆಯಾಗಿದೆ.

ಹ್ಯುಂಡೈ ಔರಾ ಸೆಡಾನ್‌ನ ಎಂಟ್ರಿ-ಲೆವೆಲ್ ರೂಪಾಂತರವಾದ ‘ಇ’ ಮಾದರಿಯು ಡ್ಯುಯಲ್-ಸಿಎನ್‌ಜಿ ಎಂಜಿನ್ ತಂತ್ರಜ್ಞಾನದೊಂದಿಗೆ ಹೊಸ ಆವೃತ್ತಿಯಲ್ಲಿ ಬಿಡುಗಡೆಯಾಗಿದೆ. ಈ ಮಾದರಿಯನ್ನು ಕೇವಲ ರೂ.7.49 ಲಕ್ಷ (ಎಕ್ಸ್ ಶೋರೂಂ) ದರದಲ್ಲಿ ಖರೀದಿಸಬಹುದು. ಗಮನಿಸಬೇಕಾದ ಅಂಶವೆಂದರೆ, ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿ ಈ ಮಾದರಿಯ ಬೆಲೆ ರೂ.6.49 ಲಕ್ಷ (ಎಕ್ಸ್ ಶೋರೂಂ) ಆಗಿದೆ. ಈ ಎರಡರ ನಡುವೆ ಬೆಲೆಯಲ್ಲಿ ಒಂದು ಲಕ್ಷ ರೂಪಾಯಿಗಳ ವ್ಯತ್ಯಾಸವಿದೆ.

ಈ ಮಾದರಿಯು ತನ್ನ ವಿಭಾಗದಲ್ಲಿ ಅತ್ಯಂತ ಕೈಗೆಟುಕುವ ಸಿಎನ್‌ಜಿ ಆಯ್ಕೆಯಾಗಿದೆ. ಈಗ ಗ್ರಾಹಕರು ಇ, ಎಸ್ ಮತ್ತು ಎಸ್ಎಕ್ಸ್ ಎಂಬ ಮೂರು ಆವೃತ್ತಿಗಳಲ್ಲಿ ಸಿಎನ್‌ಜಿ ಆಯ್ಕೆಯನ್ನು ಆರಿಸಿಕೊಳ್ಳಬಹುದು, ಭಾರತೀಯ ಗ್ರಾಹಕರಲ್ಲಿ ಈ ಕಾರು ಬಹಳ ಜನಪ್ರಿಯವಾಗಿದ್ದು, ಬಡುಗಡೆಯಾದಾಗಿನಿಂದ ಈವರೆಗೆ 2 ಲಕ್ಷಕ್ಕೂ ಹೆಚ್ಚು ಯುನಿಟ್‌ಗಳನ್ನು ಮಾರಾಟ ಮಾಡಿದೆ

ಇದನ್ನೂ ಓದಿ: ಹ್ಯುಂಡೈ ಎಕ್ಸ್ಟೆರ್ CNG ಡ್ಯುಯಲ್ ಸಿಲಿಂಡರ್ ಭಾರತದಲ್ಲಿ ಬಿಡುಗಡೆ! ಬೆಲೆ 8.50 ಲಕ್ಷ ರೂ

Hyundai Aura Dual-CNG
Hyundai Aura Dual-CNG

ಹೊಸ ಹ್ಯುಂಡೈ ಔರಾ ಡುಯ್‌ಲ್-ಸಿಎನ್‌ಜಿ (Hyundai Aura Dual-CNG)ಕಾರು, ಅದರ ಸೊಗಸಾದ ವಿನ್ಯಾಸ ಮತ್ತು ಆಧುನಿಕ ವೈಶಿಷ್ಟ್ಯಗಳಿಂದಾಗಿ ಗಮನ ಸೆಳೆಯುತ್ತದೆ. ಝಡ್-ಆಕಾರದ ಎಲ್ಇಡಿ ಟೈಲ್‌ಲ್ಯಾಂಪ್‌ಗಳಿಂದ ಕೂಡಿದ ಅತ್ಯಾಧುನಿಕ ಹಿಂಭಾಗದ ವಿನ್ಯಾಸವನ್ನು ಹೊಂದಿದೆ. ಒಳಾಂಗಣದಲ್ಲಿ, ಫ್ರಂಟ್ ಪವರ್ ವಿಂಡೋಸ್ ಗಳು, ಹೈಡ್ ಅಡ್ಜಸ್ಟ್ಮೆಂಟ್ ಡ್ರೈವರ್ ಸೀಟ್, 8-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್, .5-ಇಂಚಿನ ಸ್ಪೀಡೋಮೀಟರ್, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್‌, ಸನ್‌ರೂಫ್ ಮತ್ತು ಮಲ್ಟಿ ಇನ್ಫಾರ್ಮೇಷನ್ ಡಿಸ್ಪ್ಲೇಯಂತಹ ಅನುಕೂಲಕರ ವೈಶಿಷ್ಟ್ಯಗಳು ಚಾಲಕ ಮತ್ತು ಪ್ರಯಾಣಿಕರಿಗೆ ಆರಾಮದಾಯಕ ಪ್ರಯಾಣವನ್ನು ಒದಗಿಸುತ್ತವೆ.

ಸುರಕ್ಷತೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿರುವ ಈ ಕಾರು, 6-ಏರ್‌ಬ್ಯಾಗ್‌ಗಳು, ಎಲ್ಲಾ ಸೀಟ್‌ಗಳಿಗೆ 3-ಪಾಯಿಂಟ್ ಸೀಟ್‌ಬೆಲ್ಟ್‌ಗಳು ಮತ್ತು ಸೀಟ್‌ಬೆಲ್ಟ್ ರಿಮೈಂಡರ್‌, ಎಬಿಎಸ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್(ಇಎಸ್‌ಸಿ), ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (ಟಿಪಿಎಂಎಸ್), ಎಮರ್ಜೆನ್ಸಿ ಸ್ಟಾಪ್ ಸಿಗ್ನಲ್, ಇಮ್ಮೊಬಿಲೈಸರ್, ರಿಯರ್ ಪಾರ್ಕಿಂಗ್ ಸೆನ್ಸರ್ ಮತ್ತು ಸ್ಪೀಡ್ ಅಲರ್ಟ್ ವ್ಯವಸ್ಥೆಯಂತಹ ಅತ್ಯಾಧುನಿಕ ಸುರಕ್ಷತಾ ವೈಶಿಷ್ಟ್ಯಗಳೊಂದಿಗೆ, ಈ ವಾಹನವು ನಿಮಗೆ ರಸ್ತೆಯಲ್ಲಿ ಅತ್ಯುತ್ತಮ ರಕ್ಷಣೆಯನ್ನು ಒದಗಿಸುತ್ತದೆ.

ಇದನ್ನೂ ಓದಿ: ಹ್ಯುಂಡೈ ಗ್ರ್ಯಾಂಡ್ i10 ನಿಯೋಸ್ ಹೈ-ಸಿಎನ್ಜಿ ಡ್ಯುಯೊ ಬಿಡುಗಡೆ

ಹ್ಯುಂಡೈ ಔರಾ (Hyundai Aura Dual-CNG): ಎಂಜಿನ್

ಹ್ಯುಂಡೈ ಔರಾ ಡುಯಲ್-ಸಿಎನ್‌ಜಿ (ಹೈ-ಸಿಎನ್‌ಜಿ) ಮಾದರಿಯು 1.2 ಲೀಟರ್ ಪೆಟ್ರೋಲ್ ಮತ್ತು ಸಿಎನ್‌ಜಿ ಎಂಜಿನ್ ಆಯ್ಕೆಯೊಂದಿಗೆ ಬರುತ್ತದೆ. ಈ ಎಂಜಿನ್ ಸಿಎನ್‌ಜಿ ನಲ್ಲಿ 69 Hp ಶಕ್ತಿ ಮತ್ತು 95.2 Nm ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಮತ್ತು ಪೆಟ್ರೋಲ್‌ನೊಂದಿಗೆ 83hp ಮತ್ತು 114Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. 5-ಸ್ಪೀಡ್ ಮ್ಯಾನ್ಯುವಲ್ ಗೇರ್‌ಬಾಕ್ಸ್‌ನೊಂದಿಗೆ ಬರುತ್ತದೆ, ಆದರೆ ಪೆಟ್ರೋಲ್ ಮಾದರಿಗಳು 5-ಸ್ಪೀಡ್ AMT ಆಯ್ಕೆಯನ್ನು ಸಹ ಹೊಂದಿವೆ. ಈ ವಾಹನವು ಪ್ರತಿ ಕಿಲೋಗ್ರಾಂ ಸಿಎನ್‌ಜಿಗೆ 28.4 ಕಿಲೋಮೀಟರ್ ಮೈಲೇಜ್ ನೀಡುವುದಾಗಿ ಕಂಪನಿಯ ಹೇಳಿಕೊಂಡಿದೆ.

Leave a Comment