ಜಾವಾ ಯೆಜ್ಡಿ(Jawa-Yezdi) ಮೋಟಾರ್‌ಸೈಕಲ್ಸ್ ತನ್ನ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಹೊಸ ಆಯಾಮವನ್ನು ಸೇರಿಸುವ ನಿಟ್ಟಿನಲ್ಲಿ ಜಾವಾ 42 ಎಫ್‌ಜೆ (Jawa 42 FJ 350) ಬೈಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಪರಿಚಯಿಸಿದೆ. ಈ ಬೈಕ್ ತನ್ನ ಇತರ ಮಾದರಿಗಳಿಗೆ ಹೋಲಿಸಿದರೆ ಹಲವಾರು ಗಮನಾರ್ಹ ಬದಲಾವಣೆಗಳೊಂದಿಗೆ ಅನಾವರಣಗೊಂಡಿದೆ. ಈ ಹೊಸ ಮಾದರಿಯ ಸ್ಪೋರ್ಟಿ ವಿನ್ಯಾಸ ಮತ್ತು ಹೆಚ್ಚಿದ ಶಕ್ತಿಯು ಯುವ ಪೀಳಿಗೆಯ ಬೈಕ್ ಪ್ರಿಯರನ್ನು ಹೆಚ್ಚಾಗಿ ಆಕರ್ಷಿಸುವ ನಿರೀಕ್ಷೆಯಿದೆ. ಈ ಬೈಕ್ ಎಕ್ಸ್‌ಶೋರೂಂನಲ್ಲಿ ರೂ. 1.99 ಲಕ್ಷದಿಂದ ರೂ. 2.20 ಲಕ್ಷದವರೆಗೆ ಇದೆ.
ಜಾವಾ 42 ಎಫ್‌ಜೆ 350: ವೈಶಿಷ್ಟ್ಯಗಳು
ಹೊಸ ಜಾವಾ 42 ಎಫ್‌ಜೆ (Jawa 42 FJ 350) ಬೈಕಿನ ವಿನ್ಯಾಸದ ಬಗ್ಗೆ ಮಾತನಾಡುವುದಾದರೆ, ಇದು ಆಧುನಿಕ ರೆಟ್ರೊ ಶೈಲಿಯಲ್ಲಿಯೇ ರೂಪುಗೊಂಡಿದೆ. ಪ್ರಮುಖ ಆಕರ್ಷಣೆಯೆಂದರೆ ಎಲ್ಇಡಿ ಹೆಡ್ಲ್ಯಾಂಪ್, ಸೆಮಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್, ಯುಎಸ್ಬಿ ಚಾರ್ಜಿಂಗ್ ಪೋರ್ಟ್, ಟ್ಯಾಂಕ್ ಕ್ಲಾಡಿಂಗ್ನಲ್ಲಿ ನಯವಾದ ಅಲ್ಯೂಮಿನಿಯಂ ಫಿನಿಶ್, ಬ್ರ್ಯಾಂಡ್ ಇತಿಹಾಸವನ್ನು ಎತ್ತಿಹಿಡಿಯುವಂತೆ ‘ಜಾವಾ42’ ಎಂಬ ಅಕ್ಷರವನ್ನು ಸೈಡ್ ಪ್ಯಾನಲ್ ಗಳಲ್ಲಿ ಸೇರಿಸಲಾಗಿದೆ ಮತ್ತು ಫೆಂಡರ್ಗಳು ಸಾಮಾನ್ಯ ಆವೃತ್ತಿಯಂತೆಯೇ ಇದ್ದರೂ, ಸೀಟ್ ಲೇಔಟ್ ಮತ್ತು ಹ್ಯಾಂಡಲ್ ಬಾರ್ ಪ್ಲೇಸ್ಮೆಂಟ್ ಅನ್ನು ನವೀಕರಿಸಲಾಗಿದೆ. ಈ ಬದಲಾವಣೆಗಳು ಸವಾರರಾಗಿ ಸುಧಾರಿತ ಸೌಕರ್ಯದೊಂದಿಗೆ ಹೆಚ್ಚು ವಿಶೇಷ ಸವಾರಿ ಮಾಡಲು ಸಹಾಯವಾಗುತ್ತದೆ.
ಇದನ್ನೂ ಓದಿ: ಜಾವಾ 42 ಹೊಸ ಅವತಾರದಲ್ಲಿ 1.73 ಲಕ್ಷ ರೂಪಾಯಿಗೆ ಬಿಡುಗಡೆ

ಇದಲ್ಲದೆ, ಚಕ್ರಗಳ ಆಯ್ಕೆಗೆ ಸಂಬಂಧಿಸಿದಂತೆ, ಗ್ರಾಹಕರು ಸ್ಪೋಕ್ಡ್ ಅಥವಾ ಅಲಾಯ್ ವೀಲ್‌ಗಳು ನಡುವೆ ಆಯ್ಕೆ ಮಾಡುವ ಸ್ವಾತಂತ್ರ್ಯವನ್ನು ಹೊಂದಿದ್ದಾರೆ, ಟಿಯರ್ ಡ್ರಾಪ್-ಆಕಾರದ ಇಂಧನ ಟ್ಯಾಂಕ್ ಜೊತೆಗೆ ಟ್ಯಾಂಕ್ ಕ್ಯಾಪ್ ಸ್ವಲ್ಪ ಆಫ್-ಸೆಂಟರ್ ಆಗಿರುತ್ತದೆ. ಸುರಕ್ಷತೆಯ ದೃಷ್ಟಿಯಿಂದ, ಎಲ್ಲಾ ಮಾದರಿಗಳಲ್ಲಿ ಸ್ಟ್ಯಾಂಡರ್ಡ್ ಆಗಿ ಡ್ಯುಯಲ್-ಚಾನೆಲ್ ಎಬಿಎಸ್ ವ್ಯವಸ್ಥೆಯನ್ನು ಅಳವಡಿಸಲಾಗಿದೆ ಮತ್ತು ಸಿಂಗಲ್-ಚಾನೆಲ್ ಎಬಿಎಸ್ ಮಾದರಿಗಳು ಲಭ್ಯವಿಲ್ಲ. ಇದಲ್ಲದೆ, 42 ಎಫ್‌ಜೆ ಸಣ್ಣ 42 ಮಾದರಿಗೆ ಹೋಲಿಸಿದರೆ 790 ಎಂಎಂ ಎತ್ತರವಾಗಿದೆ.
ಜಾವಾ 42 FJ ಬೈಕ್ಗಳು ಕಾಸ್ಮೊ ಮ್ಯಾಟ್ಟೆ ಬ್ಲೂ, ಅರೋರಾ ಮ್ಯಾಟ್ಟೆ ಗ್ರೀನ್, ಮಿಸ್ಟಿಕ್ ಗ್ರೀನ್, ಡೀಪ್ ಮ್ಯಾಟ್ಟೆ ಬ್ಲ್ಯಾಕ್ ಮತ್ತು ಡೀಪ್ ಮ್ಯಾಟ್ಟೆ ಬ್ಲ್ಯಾಕ್ ಸೇರಿದಂತೆ ವಿವಿಧ ಬಣ್ಣಗಳಲ್ಲಿ ಲಭ್ಯವಿದೆ. ಅರೋರಾ ಮ್ಯಾಟ್ ಗ್ರೀನ್ ಬಣ್ಣದಲ್ಲಿ ಬರುವ ಮೂಲ ಮಾದರಿಯು ಸ್ಪೋಕ್ ವೀಲ್‌ಗಳೊಂದಿಗೆ ಗಮನ ಸೆಳೆಯುತ್ತದೆ, ಆದರೆ ಉಳಿದ ಮಾದರಿಗಳು ಅಲಾಯ್ ವೀಲ್‌ಗಳನ್ನು ಹೊಂದಿವೆ. Jawa 42 FJ ಬೈಕಿನ ಸೀಟ್ 800 ಎಂಎಂ ಎತ್ತರವಿದ್ದು, 178 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಮತ್ತು 194 ಕೆಜಿ ತೂಕವನ್ನು ಹೊಂದಿದೆ.
ಇದನ್ನೂ ಓದಿ: ಯೆಜ್ಡಿ ಅಡ್ವೆಂಚರ್ ಬೈಕ್ 2.10 ಲಕ್ಷ ರೂ.ಗೆ ಬಿಡುಗಡೆ
ಜವಾ 42 ಎಫ್‌ಜೆ (Jawa 42 FJ 350): ಎಂಜಿನ್
ಜವಾ 42 FJ ಈಗ ಉತ್ತಮವಾದ 334 ಸಿಸಿ, ಲಿಕ್ವಿಡ್-ಕೂಲ್ಡ್, ಸಿಂಗಲ್-ಸಿಲಿಂಡರ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ ಬೈಕಿಗೆ 21.45 bhp ಮತ್ತು 29.62 Nm ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ನೀಡುತ್ತದೆ, ಇದು ಸ್ಲಿಪ್-ಅಂಡ್-ಅಸಿಸ್ಟ್ ಕ್ಲಚ್‌ನೊಂದಿಗೆ 6-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಬರುತ್ತದೆ. 42 FJ ತನ್ನ ವಿಭಾಗದಲ್ಲಿ 6-ಸ್ಪೀಡ್ ಗೇರ್‌ಬಾಕ್ಸ್ ಅನ್ನು ಹೊಂದಿರುವ ಮೊದಲ ಬೈಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.