ಎಂಜಿ ವಿಂಡ್ಸರ್ ಎಲೆಕ್ಟ್ರಿಕ್ ಕಾರು 15.6 ಇಂಚಿನ ಟಚ್ಸ್ಕ್ರೀನ್, ಡಿಜಿಟಲ್ ಕ್ಲಸ್ಟರ್ ಮತ್ತು ಹಲವಾರು ಪ್ರೀಮಿಯಂ ಫೀಚರ್ಸ್ ಗಳೊಂದಿಗೆ ಬರಲಿದೆ
ಭಾರತದ ವಿದ್ಯುತ್ ವಾಹನ ಮಾರುಕಟ್ಟೆಯಲ್ಲಿ ಟಾಟಾ ಮೋಟಾರ್ಸ್ಗೆ ಪ್ರಬಲ ಪೈಪೋಟಿಯನ್ನು ನೀಡುತ್ತಿರುವ ಎಂಜಿ ಮೋಟಾರ್ಸ್(MG Motors), ಶೀಘ್ರದಲ್ಲಿಯೇ ತನ್ನ ಗ್ರಾಹಕರಿಗೆ ಹೊಸ ಆಯ್ಮೆಯನ್ನು ನೀಡಲು ಸಜ್ಜಾಗಿದೆ. ವಿಂಡ್ಸರ್ ಇವಿ (MG Windsor EV) ಎಂಬ ಹೊಸ ಎಲೆಕ್ಟ್ರಿಕ್ ಕ್ರಾಸ್ಓವರ್ ಅನ್ನು ಬಿಡುಗಡೆ ಮಾಡಲು ಕಂಪನಿ ಯೋಜಿಸಿದ್ದು, ಇದು ಆಧುನಿಕ ತಂತ್ರಜ್ಞಾನ ಮತ್ತು ಹಲವಾರು ವೈಶಿಷ್ಟ್ಯಗಳ ಸಮಾಗಮವಾಗಿದೆ. ಮಧ್ಯಮ ಗಾತ್ರದ ಎಸ್ಯುವಿ ಖರೀದಿಸಲು ಯೋಜಿಸುತ್ತಿರುವ ಗ್ರಾಹಕರಿಗೆ ವಿಂಡ್ಸರ್, ಎಲೆಕ್ಟ್ರಿಕ್ ವಾಹನ ಅತ್ಯುತ್ತಮ ಆಯ್ಕೆಯಾಗಿ ಹೊರಹೊಮ್ಮುವ ಸಾಧ್ಯತೆಯಿದೆ.
ಎಂಜಿ ವಿಂಡ್ಸರ್: ಇಂಟೀರಿಯರ್, ಎಕ್ಸ್ಟೀರಿಯರ್ ಮತ್ತು ವೈಶಿಷ್ಟ್ಯಗಳು
ಇತ್ತೀಚಿಗೆ ಎಂಜಿ ಮೋಟಾರ್ಸ್ ಬಿಡುಗಡೆ ಮಾಡಿರುವ ವೀಡಿಯೊದಲ್ಲಿ ನೋಡಿದಂತೆ, ವಿಂಡ್ಸರ್ ಇವಿ ಕೂಡ ಜಾಗತಿಕ ಮಾದರಿಯಂತೆಯೇ 15.6 ಇಂಚಿನ ದೊಡ್ಡ ಟಚ್ಸ್ಕ್ರೀನ್ನೊಂದಿಗೆ ಬರುತ್ತದೆ. ಈ ಆಧುನಿಕ ಟಚ್ಸ್ಕ್ರೀನ್ನಲ್ಲಿ ಆಪಲ್ ಕಾರ್ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಸಂಪರ್ಕದಂತಹ ಅತ್ಯಾಧುನಿಕ ವೈಶಿಷ್ಟ್ಯಗಳು ಸೇರಿದಂತೆ 8.8 ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಕೂಡ ಇದೆ. ಇದಲ್ಲದೆ, ಎರಡು-ಸ್ಪೋಕ್ ಮಲ್ಟಿಫಂಕ್ಷನ್ ಸ್ಟೀರಿಂಗ್ ವೀಲ್ನೊಂದಿಗೆ ಮನರಂಜನಾ ವ್ಯವಸ್ಥೆಯ ನಿಯಂತ್ರಣಗಳು ಮತ್ತು ಅಡ್ಡಲಾಗಿ ಇರಿಸಲಾಗಿರುವ ಏರ್ ವೆಂಟ್ಗಳು ಈ ಕಾರಿಗೆ ಹೆಚ್ಚಿನ ಆಕರ್ಷಣೆಯನ್ನು ನೀಡುತ್ತವೆ.

ಎಂಜಿ ವಿಂಡ್ಸರ್ ಇವಿ (MG Windsor EV) ಕಾರು 4,295 ಎಂಎಂ ಉದ್ದದೊಂದಿಗೆ, ವಿಶಾಲವಾದ ಪನೊರಾಮಿಕ್ ಸನ್ ರೂಫ್ ಹಾಗೂ ಮೂರು ಪ್ರಯಾಣಿಕರಿಗೆ ಆರಾಮದಾಯಕವಾದ ಹಿಂದಿನ ಸೀಟುಗಳನ್ನು ಹೊಂದಿದೆ. ಇದರ ಜೊತೆಗೆ ಹೊಂದಾಣಿಕೆ ಮಾಡಬಹುದಾದ ಸೀಟುಗಳು ಹೆಡ್ ರೆಸ್ಟ್ಗಳು ಮತ್ತು ಸೀಟ್ ಬೆಲ್ಟ್ಗಳೊಂದಿಗೆ ಬರುತ್ತವೆ. ಮತ್ತು 135 ಡಿಗ್ರಿ ವರೆಗೆ ಮಡಿಸಬಹುದಾದ ಹಿಂಬದಿಯ ಸೀಟುಗಳು. ಇದರ ಜೊತೆಗೆ, ಹಿಂದಿನ ಸೀಟುಗಳಿಗೆ ಆರ್ಮ್ ರೆಸ್ಟ್ ಮತ್ತು ಕ್ವಿಲ್ಟ್ ಮಾದರಿಯ ಸ್ಟಿಚಿಂಗ್ ಹೊಂದಿರುವ ಚರ್ಮದ ಸೀಟುಗಳನ್ನು ನಿರೀಕ್ಷಿಸಬಹುದು.
18 ಇಂಚಿನ ಅಲಾಯ್ ವ್ಹೀಲ್ಸ್ ಗಳು ಮತ್ತು ಎಲ್ಇಡಿ ಲೈಟ್ಸ್ ಬರಲಿವೆ. ಸುರಕ್ಷತೆಯ ದೃಷ್ಟಿಯಿಂದ, 6 ಏರ್ ಬ್ಯಾಗ್ ಗಳು, 360 ಡಿಗ್ರಿ ಕ್ಯಾಮೆರಾ, ಬ್ಲೈಂಡ್ ಸ್ಪಾಟ್ ಮಾನಿಟರ್, ಆಲ್ ವ್ಹೀಲ್ ಡಿಸ್ಕ್ ಬ್ರೇಕ್, ABS ಜೊತೆಗೆ EBD, ಮುಂಭಾಗ ಮತ್ತು ಹಿಂಭಾಗದಲ್ಲಿ ಪಾರ್ಕಿಂಗ್ ಸೆನ್ಸರ್ಗಳು ಮತ್ತು ಲೆವಲ್ 2 ಅಡ್ವಾನ್ಸ್ ಡ್ರೈವರ್ ಅಸಿಸ್ಟ್ ಸಿಸ್ಟಂ (ADAS) ವ್ಯವಸ್ಥೆಗಳ ಒಳಗೊಂಡಂತೆ ಹಲವು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಹೊಂದಿದೆ.
ಇದನ್ನೂ ಓದಿ: ದೀಪಾವಳಿಗೆ ಟಾಟಾ, ಹ್ಯುಂಡೈ, ಕಿಯಾ ಮತ್ತು ಎಂಜಿ ಬಿಡುಗಡೆ ಮಾಡಲಿರುವ ಟಾಪ್ 5 ಪ್ರೀಮಿಯಂ ಕಾರುಗಳು

MG Windsor EV: ಬ್ಯಾಟರಿ ಪ್ಯಾಕ್ಗಳು
ವಿಂಡ್ಸರ್ ಇವಿ ವಾಹನವು ಗ್ರಾಹಕರಿಗೆ ಎರಡು ವಿಭಿನ್ನ ಬ್ಯಾಟರಿ ಆಯ್ಕೆಗಳನ್ನು ನೀಡುತ್ತದೆ: 37.9kWh ಮತ್ತು 50.6kWh. ಈ ಎರಡೂ ಮಾದರಿಗಳು 134bhp ಸಾಮರ್ಥ್ಯದ ಎಲೆಕ್ಟ್ರಿಕ್ ಮೋಟಾರ್ನಿಂದ ಶಕ್ತಿ ಪಡೆಯುತ್ತವೆ. 37.9kWh ಬ್ಯಾಟರಿಯೊಂದಿಗೆ, ಈ ವಾಹನವು ಒಂದು ಚಾರ್ಜ್ನಲ್ಲಿ ಸರಾಸರಿ 360 ಕಿಲೋಮೀಟರ್ವರೆಗೆ ಪ್ರಯಾಣಿಸಬಲ್ಲದು. ಮತ್ತು, 50.6kWh ಬ್ಯಾಟರಿ ಪ್ಯಾಕ್ ಆಯ್ಕೆಯೊಂದಿಗೆ ಪ್ರತಿ ಚಾರ್ಜ್ ಗೆ 460 ಕಿಲೋಮೀಟರ್ ಗಳಷ್ಟು ಮೈಲೇಜ್ ನೀಡಲಿದೆ.
ಎಂಜಿ ವಿಂಡ್ಸರ್ ಇವಿ: ಬೆಲೆ
ವಿಂಡ್ಸರ್ ಇವಿ ಎಂಬ ಈ ಎಲೆಕ್ಟ್ರಿಕ್ ಕ್ರಾಸ್ಒವರ್ ವಾಹನವು ಗ್ಲೋಬಲ್ ಮಾರುಕಟ್ಟೆಯಲ್ಲಿ ಯಶಸ್ಸು ಕಂಡ ವುಲಿಂಗ್ ಕ್ಲೌಡ್ ಇವಿಯನ್ನು ಆಧರಿಸಿದೆ. ಭಾರತೀಯ ಮಾರುಕಟ್ಟೆಯ ಅಗತ್ಯಗಳಿಗೆ ಅನುಗುಣವಾಗಿ ವಿನ್ಯಾಸಗೊಳಿಸಲಾದ ಈ ವಾಹನವು ಸೆಪ್ಟೆಂಬರ್ 11 ರಂದು ಗ್ರಾಹಕರ ಬಳಿಗೆ ತಲುಪಲಿದೆ. ವಿಂಡ್ಸರ್ ಇವಿಯನ್ನು 20 ಲಕ್ಷ ರೂಪಾಯಿಗಳ (ಎಕ್ಸ್ ಶೋರೂಂ) ಆರಂಭಿಕ ಬೆಲೆಯಲ್ಲಿ ಪರಿಚಯಿಸಲಾಗುತ್ತಿದೆ ಎಂದು ನಿರೀಕ್ಷಿಸಲಾಗಿದೆ.