ಭಾರತೀಯ ಮಾರುಕಟ್ಟೆಯಲ್ಲಿ ಕಿಯಾ(Kia) ಕಾರುಗಳ ಆಗಮನದೊಂದಿಗೆ ಸೃಷ್ಟಿಯಾದ ಸಂಚಲನಕ್ಕೆ ಪ್ರಮುಖ ಕಾರಣ ಸೆಲ್ಟೋಸ್ (Kia Seltos) ಎಸ್ಯುವಿ. ಈ ಆಕರ್ಷಕ ವಾಹನವು ತನ್ನ ಆಗಮನದಿಂದಲೇ ಗ್ರಾಹಕರ ಹೃದಯ ಗೆದ್ದಿತ್ತು. ಇದೀಗ ಕಿಯಾ ಸೆಲ್ಟೋಸ್ ಮಿಡ್ ಸೈಜ್ ಎಸ್ಯುವಿಯ ಎಕ್ಸ್-ಲೈನ್ ಆವೃತ್ತಿಯಲ್ಲಿ ಪರಿಚಯಿಸಲಾದ ಹೊಸ ಕಪ್ಪು ಬಣ್ಣದ ಆಯ್ಕೆಯು ಈ ಸುಂದರ ವಾಹನಕ್ಕೆ ಇನ್ನಷ್ಟು ಆಕರ್ಷಕ ನೋಟವನ್ನು ನೀಡುತ್ತದೆ. ಕಿಯಾ ಕಂಪನಿಯು ಗ್ರಾಹಕರ ಅಗತ್ಯಗಳನ್ನು ಅರ್ಥಮಾಡಿಕೊಂಡು ನಿರಂತರವಾಗಿ ತನ್ನ ವಾಹನಗಳನ್ನು ನವೀಕರಿಸುತ್ತಾ ಗ್ರಾಹಕರ ನಿರೀಕ್ಷೆಗಳನ್ನು ಮೀರುತ್ತಿದೆ.
ಕಿಯಾ ಸೆಲ್ಟೋಸ್, ವಿವಿಧ ಮಾದರಿಗಳಲ್ಲಿ ಲಭ್ಯವಿದೆ. ಟೆಕ್ ಲೈನ್, ಜಿಟಿ ಲೈನ್ ಮತ್ತು ಮ್ಯಾಟ್ ಫಿನಿಶಿಂಗ್ನೊಂದಿಗೆ ವಿಶಿಷ್ಟತೆ ಹೊಂದಿರುವ ಎಕ್ಸ್-ಲೈನ್ ಎಂಬ ಮೂರು ಮುಖ್ಯ ವರ್ಗಗಳನ್ನು ಹೊಂದಿದೆ. ಇದರಲ್ಲಿ ಎಕ್ಸ್-ಲೈನ್ ಮಾದರಿಯು ಈ ಹಿಂದೆ ಗ್ರೇ ಬಣ್ಣದಲ್ಲಿ ಮಾತ್ರ ಲಭ್ಯವಿದ್ದರೆ, ಈಗ ಕಿಯಾ ಅರೋರಾ ಬ್ಲ್ಯಾಕ್ ಪರ್ಲ್ ಎಂಬ ಹೊಸ ಬಣ್ಣದ ಆಯ್ಕೆಯೊಂದಿಗೆ ಬಳಕೆದಾರರನ್ನು ಆಕರ್ಷಿಸುತ್ತಿದೆ.
Kia Seltos X-Line
ಸೆಲ್ಟೋಸ್ ಎಕ್ಸ್-ಲೈನ್ನ ಸೊಬಗನ್ನು ಹೆಚ್ಚಿಸುವ ನಿಟ್ಟಿನಲ್ಲಿ, ಕಂಪನಿಯು ಹೊಸ ಬಣ್ಣವನ್ನು ಪರಿಚಯಿಸಿದೆ. ಈ ಬದಲಾವಣೆಗಳು ವಾಹನದ ಹೊರಭಾಗವನ್ನು ಮಾತ್ರವಲ್ಲದೆ, ಒಳಭಾಗವನ್ನೂ ಸುಂದರಗೊಳಿಸುತ್ತವೆ. ಅರೋರಾ ಬ್ಲ್ಯಾಕ್ ಪರ್ಲ್ ಬಣ್ಣದ ಸೆಲ್ಟೋಸ್ ಎಕ್ಸ್-ಲೈನ್ನ ಒಳಭಾಗವು ಕಪ್ಪು ಮತ್ತು ಸ್ಪ್ಲೆಂಡಿಡ್ ಸೇಜ್ ಗ್ರೀನ್ ಬಣ್ಣಗಳ ಅದ್ಭುತ ಸಂಯೋಜನೆಯನ್ನು ಹೊಂದಿದೆ.
ಇದನ್ನೂ ಓದಿ: ಭಾರತಕ್ಕೆ ಬರುತ್ತಿದೆ “ಕಿಯಾ ಇವಿ9” 7 ಸೀಟರ್ ಎಲೆಕ್ಟ್ರಿಕ್ ಎಸ್ಯುವಿ

ವಾಹನದ ಹೊರಗಿನ ಭಾಗವನ್ನು ಹೆಚ್ಚು ಆಕರ್ಷಕವಾಗಿಸಲು, ಮುಂಭಾಗದಿಂದ ಹಿಂಭಾಗದವರೆಗೆ ಹಲವಾರು ಭಾಗಗಳನ್ನು ಗ್ಲಾಸ್ ಬ್ಲ್ಯಾಕ್ ಬಣ್ಣದಲ್ಲಿ ಮೆರುಗುಗೊಳಿಸಲಾಗಿದೆ. ಇದರಲ್ಲಿ ಮುಂಭಾಗ ಮತ್ತು ಹಿಂಭಾಗದ ಸ್ಕಿಡ್ ಪ್ಲೇಟ್ಗಳು, ಹೊರಗಿನ ರೇರ್ ವ್ಯೂ ಮಿರರ್ ಗಳು, ಶಾರ್ಕ್-ಫಿನ್ ಆಂಟೆನಾ, ಟೈಲ್ಗೇಟ್ ಗಾರ್ನಿಷ್ ಮತ್ತು ಕೃತಕ ಎಕ್ಸಾಸ್ಟ್ ಪೈಪ್ಗಳು ಸೇರಿವೆ. ಸ್ಕೀಡ್ ಪ್ಲೇಟ್ಗಳು, ಸೈಡ್ ಡೋರ್ ಗಾರ್ನಿಶ್ ಮತ್ತು ವೀಲ್ ಸೆಂಟರ್ ಕ್ಯಾಪ್ಗಳಲ್ಲಿ ಆರೆಂಜ್ ಬಣ್ಣದ ಅಲಂಕಾರವನ್ನು ನೀಡಲಾಗಿದೆ.
ಕಿಯಾ ಸೆಲ್ಟೋಸ್ ಎಕ್ಸ್-ಲೈನ್ (Kia Seltos X-Line)ಮಾದರಿಯು 18 ಇಂಚಿನ ಅಲಾಯ್ ವ್ಹೀಲ್ಗಳು ಮತ್ತು ಎಕ್ಸ್-ಲೈನ್ ಬ್ಯಾಡ್ಜ್ನಂತಹ ಆಕರ್ಷಕ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಈ ವಿಶೇಷ ವೈಶಿಷ್ಟ್ಯಗಳು ಮುಖ್ಯವಾಗಿ ಯುವ ವಯಸ್ಸಿನ ಗ್ರಾಹಕರನ್ನು ಆಕರ್ಷಿಸುವ ಗುರಿಯನ್ನು ಹೊಂದಿವೆ ಎಂದು ಕಂಪನಿ ಹೇಳಿದೆ. “ಎಕ್ಸ್-ಲೈನ್ ಟ್ರಿಮ್ ನಮ್ಮ ಹೊಸ ಪೀಳಿಗೆಯ ಗ್ರಾಹಕರನ್ನು ಆಕರ್ಷಿಸುತ್ತದೆ, ಏಕೆಂದರೆ ಅವರು ತಮ್ಮ ವಾಹನಗಳಲ್ಲಿ ವಿಶಿಷ್ಟತೆ ಮತ್ತು ವಿಶೇಷತೆಯನ್ನು ಹುಡುಕುತ್ತಾರೆ” ಎಂದು ಕಿಯಾ ಇಂಡಿಯಾದ ಮುಖ್ಯ ಮಾರಾಟ ಅಧಿಕಾರಿ ಜುನ್ಸು ಚೋ ಹೇಳಿದ್ದಾರೆ
ಕಿಯಾ ಸೆಲ್ಟೋಸ್ ಪವರ್ಟ್ರೇನ್
ಕಿಯಾ ಸೆಲ್ಟೋಸ್(Kia Seltos ) ಫೇಸ್ಲಿಫ್ಟ್ ಎಸ್ಯುವಿ 1.5-ಲೀಟರ್ ನೈಸರ್ಗಿಕ ಪೆಟ್ರೋಲ್ ಎಂಜಿನ್ನೊಂದಿಗೆ ಮಾರುಕಟ್ಟೆಗೆ ಪರಿಚಯವಾಗಿದೆ. ಈ ಎಂಜಿನ್ 113 bhp ಶಕ್ತಿ ಮತ್ತು 144 Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನಿಗೆ 6-ಸ್ಪೀಡ್ iMT ಅಥವಾ CVT ಗೇರ್ಬಾಕ್ಸ್ ಆಯ್ಕೆಗಳು ಲಭ್ಯವಿವೆ.
ಜೊತೆಗೆ, 1.5-ಲೀಟರ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಆಯ್ಕೆಯನ್ನೂ ಸಹ ಈ ಫೇಸ್ಲಿಫ್ಟ್ ಮಾದರಿಯಲ್ಲಿ ನೀಡಲಾಗಿದೆ. ಈ ಎಂಜಿನಿ 114 bhp ಶಕ್ತಿ ಮತ್ತು 250 Nm ಟಾರ್ಕ್ ಅನ್ನು ಉತ್ಪಾದಿಸುವ ಎಂಜಿನ್ ಆಗಿದ್ದು, 6-ಸ್ಪೀಡ್ ಮ್ಯಾನುವಲ್ ಅಥವಾ ಆಟೋಮ್ಯಾಟಿಕ್ ಗೇರ್ಬಾಕ್ಸ್ನೊಂದಿಗೆ ಜೋಡಿಸಲ್ಪಟ್ಟಿದೆ.
ಹಾಗೂ ಹೊಸದಾಗಿ ಪರಿಚಯಿಸಲಾದ 1.5-ಲೀಟರ್, ಟರ್ಬೋಚಾರ್ಜ್ಡ್, ಪೆಟ್ರೋಲ್ ಎಂಜಿನ್, ಇದು 158 bhp ಶಕ್ತಿ ಮತ್ತು 253 Nm ಟಾರ್ಕ್ ಅನ್ನು ಉತ್ಪಾದಿಸುವ ಮೂಲಕ ಹೆಚ್ಚಿನ ಕಾರ್ಯಕ್ಷಮತೆಯನ್ನು ನೀಡುತ್ತದೆ.
ಇದನ್ನೂ ಓದಿ: ಹೊಸ ಕಿಯಾ ಕಾರ್ನಿವಲ್ ಅಕ್ಟೋಬರ್ 3 ರಂದು ಭಾರತದಲ್ಲಿ ಬಿಡುಗಡೆಯಾಗಲಿದೆ