ಟಾಟಾ ಮೋಟಾರ್ಸ್ ಕಂಪನಿಯ ತನ್ನ ಬಹುನಿರೀಕ್ಷಿತ ನೆಕ್ಸಾನ್ ಸಿಎನ್ಜಿ ಆವೃತ್ತಿಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲು ಸಿದ್ಧವಾಗಿದೆ
ಭಾರತದ ಕಾರು ಮಾರುಕಟ್ಟೆಯಲ್ಲಿ ಟಾಟಾ ನೆಕ್ಸಾನ್ ಸಿಎನ್ಜಿ(Tata Nexon CNG) ಕಾರು ಬಹಳಷ್ಟು ನಿರೀಕ್ಷೆಯನ್ನು ಹುಟ್ಟುಹಾಕಿದೆ. ಮುಂಬರುವ ದೀಪಾವಳಿ ಹಬ್ಬದ ಸಮಯದಲ್ಲಿ ಈ ಕಾರು ಬಿಡುಗಡೆಯಾಗುವ ಸಾಧ್ಯತೆ ಇದೆ. ಇನ್ನೊಂದು ಆಶ್ಚರ್ಯಕರ ವಿಷಯವೆಂದರೆ, ಟಾಟಾ ನೆಕ್ಸಾನ್ ಸಿಎನ್ಜಿ ಕೂಡ ತನ್ನ ಸಹೋದರ ಮಾದರಿಗಳಾದ ಟಿಯಾಗೊ ಸಿಎನ್ಜಿ ಮತ್ತು ಟಿಗೋರ್ CNG ಆಟೋಮೇಟೆಡ್ ಮ್ಯಾನುವಲ್ ಟ್ರಾನ್ಸ್ಮಿಷನ್ (ಎಎಂಟಿ) ತಂತ್ರಜ್ಞಾನವನ್ನು ಹೊಂದಿರಲಿದೆ. ಟಾಟಾ ಮೊಟಾರ್ಸ್(Tata Motors) ಈ ವರ್ಷದ ಆರಂಭದಲ್ಲಿ ಟಿಯಾಗೊ ಮತ್ತು ಟಿಗೋರ್ ಕಾರುಗಳಲ್ಲಿ ಈ ತಂತ್ರಜ್ಞಾನವನ್ನು ಪರಿಚಯಿಸಿತ್ತು. ಈಗ ನೆಕ್ಸಾನ್ ಕಾರಿಗೂ ಈ ತಂತ್ರಜ್ಞಾನ ದೊರೆಯಲಿದೆ. ಇದರಿಂದಾಗಿ ಈಗಾಗಲೇ ಜನಪ್ರಿಯವಾಗಿರುವ ನೆಕ್ಸಾನ್ ಕಾರು ಇನ್ನಷ್ಟು ಜನಪ್ರಿಯವಾಗಲಿದೆ.
ಟಿಯಾಗೋ ಸಿಎನ್ಜಿ-ಎಎಂಟಿ ಮತ್ತು ಟಿಗರ್ ಸಿಎನ್ಜಿ-ಎಎಂಟಿಗಳಂತೆಯೇ, ಟಾಟಾ ನೆಕ್ಸಾನ್ ಸಿಎನ್ಜಿ-ಎಎಂಟಿಯೂ ಟ್ವಿನ್-ಸಿಎನ್ಜಿ ಸಿಲಿಂಡರ್ಗಳು ಮತ್ತು ಎಎಂಟಿ ತಂತ್ರಜ್ಞಾನವನ್ನು ಬಳಸಲಿದೆ. ಈ ತಂತ್ರಜ್ಞಾನವು ಗ್ರಾಹಕರಿಗೆ ಕೈಗೆಟುಕುವ ಇಂಧನ ಮತ್ತು ಅನುಕೂಲಕರ ಕ್ಲಚ್ಲೆಸ್ ಚಾಲನೆಯ ಪ್ರಯೋಜನಗಳನ್ನು ಪಡೆಯಲು ಅವಕಾಶ ಮಾಡಿಕೊಡುತ್ತದೆ.
ಟಾಟಾ ನೆಕ್ಸಾನ್ ಸಿಎನ್ಜಿ: ವೈಶಿಷ್ಟ್ಯಗಳು
ಟಾಟಾ ಮೋಟಾರ್ಸ್ನ ನೆಕ್ಸಾನ್ ಕಾರು, ತನ್ನ ಅತ್ಯಾಧುನಿಕ iCNG ತಂತ್ರಜ್ಞಾನದೊಂದಿಗೆ ಪ್ರತಿ ಕಿಲೋಗ್ರಾಂ ಸಿಎನ್ಜಿಗೆ 25 ಕಿಲೋಮೀಟರ್ಗಿಂತಲೂ ಹೆಚ್ಚು ದೂರವನ್ನು ಕ್ರಮಿಸುವ ಸಾಮರ್ಥ್ಯ ಹೊಂದಿದೆ. ಈ ಕಾರಿನಲ್ಲಿ ಅಳವಡಿಸಲಾಗಿರುವ ಟ್ವಿನ್ ಸಿಲಿಂಡರ್ ಟ್ಯಾಂಕ್ ವೈಶಿಷ್ಟ್ಯವು ಇದರ ಮತ್ತೊಂದು ಆಕರ್ಷಕ ಅಂಶವಾಗಿದೆ. ಹೊಸ ವಿನ್ಯಾಸದ ಕಾರಣದಿಂದ ಬೂಟ್ ಸ್ಪೇಸ್ ಸ್ವಲ್ಪ ಕಡಿಮೆಯಾಗಿದ್ದರೂ, ಇತರ ಕಂಪನಿಗಳ ಸಿಎನ್ಜಿ ಕಾರುಗಳಿಗೆ ಹೋಲಿಸಿದರೆ ನೆಕ್ಸಾನ್ ಹೆಚ್ಚಿನ ಪ್ರಮಾಣದ ಲಗೇಜ್ ಇಡುವಷ್ಟು ಬೂಟ್ ಸ್ಪೇಸ್ ಅನ್ನು ಹೊಂದಿದೆ.
ಇದನ್ನೂ ಓದಿ: ಟಾಟಾ ಕರ್ವ್ ಇವಿ ರೂ. 17.49 ಲಕ್ಷಕ್ಕೆ ಲಾಂಚ್ ಆಗಿದೆ

ಟಾಟಾ ನೆಕ್ಸಾನ್ ಸಿಎನ್ಜಿ(Tata Nexon CNG) ಕಾರು, ಪೆಟ್ರೋಲ್ ಅಥವಾ ಡೀಸೆಲ್ ಇಂಧನ ಬಳಸುವ ನೆಕ್ಸಾನ್ ಎಸ್ಯುವಿಯಂತೆಯೇ ಕಾಣುತ್ತದೆ. ಆದರೆ ಐಸಿಎನ್ಜಿ ಬ್ಯಾಡ್ಜ್ ಸೇರಿದಂತೆ ಕೆಲವು ಬದಲಾವಣೆಗಳನ್ನು ಪಡೆಯುತ್ತದೆ. ವೈಶಿಷ್ಟ್ಯಗಳಿಗೆ ಸಂಬಂಧಿಸಿದಂತೆ, ಟಾಟಾ ನೆಕ್ಸಾನ್ ಸಿಎನ್ಜಿಯ ಮಾದರಿಗಳಲ್ಲಿ ವೈರ್ಲೆಸ್ ಆಂಡ್ರಾಯ್ಡ್ ಆಟೋ/ಆಪಲ್ ಕಾರ್ಪ್ಲೇ ಜೊತೆಗೆ 10.25-ಇಂಚಿನ ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಅನ್ನು ನೀಡುವ ನಿರೀಕ್ಷೆಯಿದೆ. ವೈರ್ಲೆಸ್ ಫೋನ್ ಚಾರ್ಜರ್, ಕೀಲೆಸ್ ಎಂಟ್ರಿ, ಕ್ರೂಸ್ ಕಂಟ್ರೋಲ್, ಆರು ಏರ್ಬ್ಯಾಗ್ಗಳು, 360-ಡಿಗ್ರಿ ಕ್ಯಾಮೆರಾ, ಎಬಿಎಸ್ ಮತ್ತು ಇಬಿಡಿ ಬ್ರೇಕ್, ಮಕ್ಕಳ ಸುರಕ್ಷತೆಗಾಗಿ ಐಸೊಫಿಕ್ಸ್ ಮೌಂಟ್ಗಳು ಮತ್ತು ಟೈರ್ ಪ್ರೆಶರ್ ಮಾನಿಟರ್ ವೈಶಿಷ್ಟ್ಯಗಳು ಸೇರಿವೆ.
ಟಾಟಾ ನೆಕ್ಸಾನ್ iCNG ಕಾರಿಗೆ ರೂ. 8 ಲಕ್ಷದಿಂದ ರೂ. 11 ಲಕ್ಷದವರೆಗೆ (ಎಕ್ಸ್-ಶೋರೂಮ್) ಬೆಲೆ ನಿಗದಿಯಾಗುವ ನಿರೀಕ್ಷೆಯಿದೆ. ಈ ಬೆಲೆಯೊಂದಿಗೆ, ನೆಕ್ಸಾನ್ CNG ಕಾರು ಹುಂಡೈ ಎಕ್ಸ್ಟರ್, ಟೊಯೋಟಾ ಅರ್ಬನ್ ಕ್ರೂಸರ್ ಹೈರೈಡರ್ ಮತ್ತು ಮಾರುತಿ ಸುಜುಕಿ ಬ್ರೆಜ್ಜಾ CNG ಕಾರುಗಳಿಗೆ ಪೈಪೋಟಿ ನೀಡಲಿದೆ.
ಇದನ್ನೂ ಓದಿ: 5-ಸ್ಟಾರ್ ರೇಟಿಂಗ್ ಮತ್ತು ಅಗ್ಗದ ಬೆಲೆಯೊಂದಿಗೆ ಟಾಟಾ ಪಂಚ್ ಮಾರಾಟದಲ್ಲಿ ನಂ. 1 ಕಾರು
Tata Nexon CNG: ಪವರ್ಟ್ರೇನ್
ಟಾಟಾ ನೆಕ್ಸಾನ್ ಸಿಎನ್ಜಿ(Tata Nexon CNG) ವಾಹನವು ಗ್ರಾಹಕರಿಗೆ ಎರಡು ವಿಧದ ಗೇರ್ಬಾಕ್ಸ್ ಆಯ್ಕೆಗಳನ್ನು ನೀಡುತ್ತದೆ, ಇದು 5-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಮತ್ತು ಸುಲಭವಾದ ಚಾಲನೆಗಾಗಿ ಆಟೋಮ್ಯಾಟಿಕ್ ಮ್ಯಾನ್ಯುವಲ್ ಟ್ರಾನ್ಸ್ಮಿಷನ್ (AMT) ಗೇರ್ ಬಾಕ್ಸ್ ಮಾದರಿಯಲ್ಲೂ ಸಹ ಬಿಡುಗಡೆಯಾಗಲಿದೆ. ಈ ಕಾಂಪ್ಯಾಕ್ಟ್ ಎಸ್ಯುವಿ 1.2-ಲೀಟರ್ನ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ನಿಂದ ಓಡುತ್ತದೆ, ಹಾಗೂ ಇದನ್ನು ಸಿಎನ್ಜಿ ಇಂಧನದೊಂದಿಗೆ ಕೂಡ ಬಳಸುವಂತೆ ವಿನ್ಯಾಸಗೊಳಿಸಲಾಗಿದೆ. ಪೆಟ್ರೋಲ್ ಮೋಡ್ನಲ್ಲಿ, ಈ ಎಂಜಿನ್ 118 ಬಿಹೆಚ್ಪಿ ಶಕ್ತಿ ಮತ್ತು 170 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಆದರೆ, ಸಿಎನ್ಜಿ ಮೋಡ್ಗೆ ಬದಲಾಯಿಸಿದಾಗ, ಶಕ್ತಿ ಮತ್ತು ಟಾರ್ಕ್ನ ಪ್ರಮಾಣ ಸ್ವಲ್ಪ ಕಡಿಮೆಯಾಗುತ್ತದೆ.