BattRE: ಬಜೆಟ್‌ಗೆ ಸರಿಹೊಂದುವ ಸ್ಟೋರಿ ಎಪಿಕ್ ಎಲೆಕ್ಟ್ರಿಕ್ ಸ್ಕೂಟರ್‌ ಬಿಡುಗಡೆ

BattRE Storie Epic ಎಲೆಕ್ಟ್ರಿಕ್ ಸ್ಕೂಟರ್ 103 ಕಿಮೀ ರೇಂಜ್ ಮತ್ತು ರೂ.84,999 ಬೆಲೆಯೊಂದಿಗೆ ಗಮನ ಸೆಳೆಯುತ್ತಿದೆ

ಭಾರತದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರುಕಟ್ಟೆಯು ಇತ್ತೀಚಿನ ದಿನಗಳಲ್ಲಿ ಅಭೂತಪೂರ್ವ ಬೆಳವಣಿಗೆಯನ್ನು ಕಂಡಿದೆ. ಇದಕ್ಕೆ ಪ್ರಮುಖ ಕಾರಣವೆಂದರೆ ಪೆಟ್ರೋಲ್ ಬೆಲೆಗಳ ನಿರಂತರ ಏರಿಕೆ ಹಾಗೂ ಪೆಟ್ರೋಲ್ ವಾಹನಗಳ ನಿರ್ವಹಣಾ ವೆಚ್ಚದಲ್ಲಿನ ಹೆಚ್ಚಳ. ಒಮ್ಮೆ ಚಾರ್ಜ್ ಮಾಡಿದರೆ ದಿನವಿಡೀ ಸಂಚರಿಸಬಹುದಾದ ಎಲೆಕ್ಟ್ರಿಕ್ ಸ್ಕೂಟರ್‌ಗಳು ಗ್ರಾಹಕರನ್ನು ಬಹುವಾಗಿ ಆಕರ್ಷಿಸುತ್ತಿವೆ. ಈ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಹಲವು ಹೊಸ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಗಳು ಪ್ರವೇಶಿಸುತ್ತಿವೆ. ಇದೀಗ, ಒಂದು ಹೊಸ ಕಂಪನಿಯು ಅತ್ಯಂತ ಕೈಗೆಟುಕುವ ಬೆಲೆಯ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ.

ಪ್ರತಿಷ್ಠಿತ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಬ್ಯಾಟ್ರೆ (BattRE), ತನ್ನ ಗ್ರಾಹಕರಿಗೆ ಹೊಸ ಆಯ್ಕೆಯನ್ನು ನೀಡುತ್ತಿದೆ. ಕಂಪನಿಯು ಇತ್ತೀಚೆಗೆ ಸ್ಟೋರಿ ಎಪಿಕ್(Storie Epic) ಎಂಬ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಿದ್ದು, ಇದರ ಎಕ್ಸ್ ಶೋರೂಂ ಬೆಲೆ ರೂ.84,999 ಆಗಿದೆ. ಈ ಸ್ಕೂಟರ್ ಅನ್ನು ಆಧುನಿಕ ಗ್ರಾಹಕರ ಬದಲಾಗುತ್ತಿರುವ ಆದ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾಗಿದ್ದು, ಕೈಗೆಟುಕುವ ಬೆಲೆ, ಆಕರ್ಷಕ ವಿನ್ಯಾಸ ಮತ್ತು ಅತ್ಯುತ್ತಮ ಕಾರ್ಯಕ್ಷಮತೆಯನ್ನು ಒಂದೇ ವೇದಿಕೆಯಲ್ಲಿ ಒದಗಿಸುತ್ತದೆ ಎಂದು ಕಂಪನಿ ಹೇಳಿದೆ.

ಬ್ಯಾಟ್ರೆ ಸ್ಟೋರಿ ಎಪಿಕ್ ಬ್ಯಾಟರಿ ಪ್ಯಾಕ್

ಈ ಹೊಸ ಸ್ಕೂಟರ್‌ನಲ್ಲಿ ಅಳವಡಿಸಿರುವ 2.3 kWh ಸಾಮರ್ಥ್ಯದ ಲಿಥಿಯಂ-ಐಯಾನ್ ಬ್ಯಾಟರಿಯು ಅತ್ಯುನ್ನತ ಸುರಕ್ಷತೆಯನ್ನು ಒದಗಿಸುತ್ತದೆ. ಗ್ರಾಹಕರ ವಿಶ್ವಾಸವನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ, ಕಂಪನಿ ಈ ಬ್ಯಾಟರಿಗೆ 3 ವರ್ಷಗಳ ಅಥವಾ 30,000 ಕಿಲೋಮೀಟರ್‌ಗಳ ವಾರಂಟಿ ನೀಡುತ್ತಿದೆ. ಮತ್ತು 3.25 ಇಂಚಿನ ಎಲ್‌ಸಿಡಿ ಸ್ಕ್ರೀನ್‌ನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ನಲ್ಲಿ ದೂರ, ಬ್ಯಾಟರಿ ತಾಪಮಾನ ಮತ್ತು ಮತ್ತು ಚಾರ್ಜಿಂಗ್ ಸಮಯದಂತಹ ಪ್ರಮುಖ ಮಾಹಿತಿಗಳು ಸುಲಭವಾಗಿ ಗೋಚರಿಸುತ್ತವೆ.

BattRE Storie Epic

ಸ್ಟೋರಿ ಎಪಿಕ್ ಸ್ಕೂಟರ್‌ನಲ್ಲಿನ 60V 40Ah ಬ್ಯಾಟರಿ ಪ್ಯಾಕ್, IP67 ರೇಟಿಂಗ್‌ನೊಂದಿಗೆ ಯಾವುದೇ ಹವಾಮಾನದಲ್ಲಿ ಸುರಕ್ಷಿತವಾಗಿ ಕಾರ್ಯನಿರ್ವಹಿಸುವಂತೆ ವಿನ್ಯಾಸಗೊಳಿಸಲಾಗಿದೆ. ಒಮ್ಮೆ ಚಾರ್ಜ್ ಮಾಡಿದರೆ, 103 ಕಿಲೋಮೀಟರ್‌ಗಳಷ್ಟು ದೂರವನ್ನು ಕ್ರಮಿಸಬಹುದಾದ ಈ ಸ್ಕೂಟರ್, ನಿಮ್ಮ ದೈನಂದಿನ ಪ್ರಯಾಣದ ಅಗತ್ಯಗಳನ್ನು ಪೂರೈಸುತ್ತದೆ. ಗರಿಷ್ಠ ಗಂಟೆಗೆ 65 ಕಿಲೋಮೀಟರ್ ವೇಗದೊಂದಿಗೆ, ನೀವು ನಿಮ್ಮ ಪ್ರಯಾಣವನ್ನು ಇನ್ನಷ್ಟು ವೇಗವಾಗಿ ಮತ್ತು ಆರಾಮದಾಯಕವಾಗಿಸುತ್ತದೆ.

ಈ ವಾಹನದ ಬ್ಯಾಟರಿ ಪ್ಯಾಕ್ ಅನ್ನು ಸುಲಭವಾಗಿ ತೆಗೆಯಬಹುದು. ಹೀಗಾಗಿ, ಗ್ರಾಹಕರು ತಮ್ಮ ವಾಹನವನ್ನು ನಿಲ್ಲಿಸಿರುವ ಸ್ಥಳದಲ್ಲಿ ವಿದ್ಯುತ್ ಸಾಕೆಟ್ ಇಲ್ಲದಿದ್ದರೂ ಸಹ ಬ್ಯಾಟರಿಯನ್ನು ಚಾರ್ಜ್ ಮಾಡಬಹುದು. BattRE ಕಂಪನಿಯ ಪ್ರಕಾರ, ಬ್ಯಾಟರಿಯನ್ನು ಸಂಪೂರ್ಣವಾಗಿ ಚಾರ್ಜ್ ಮಾಡಲು ಐದು ಗಂಟೆಗಳ ಕಾಲಾವಕಾಶ ಬೇಕಾಗುತ್ತದೆ.

ಈ ಸ್ಕೂಟರ್ ಗ್ರಾಹಕರಿಗೆ 12 ಬಣ್ಣಗಳ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿದೆ. ಮಿಡ್ನೈಟ್ ಬ್ಲ್ಯಾಕ್, ಕ್ಯಾಂಡಿ ರೆಡ್, ಐಸ್ ಬ್ಲೂ, ಪರ್ಲ್ ವೈಟ್, ಎಕ್ರು ಯೆಲ್ಲೊ, ಸ್ಟಾರ್ಮಿ ಗ್ರೇ, ಸ್ಟಾರ್ಲೈಟ್ ಬ್ಲೂ, ಬ್ಲೇಜಿಂಗ್ ಬ್ರಾಂಜ್, ಹಂಟರ್ ಗ್ರೀನ್, ಕಾಸ್ಮಿಕ್ ಬ್ಲೂ, ಗನ್ಮೆಟಲ್ ಬ್ಲ್ಯಾಕ್ ಮತ್ತು ಗೋಲ್ಡ್ ರಶ್ ಬಣ್ಣಗಳ ಆಯ್ಕೆಗಳು ಇರುತ್ತದೆ. ಮತ್ತು ಉತ್ತಮ ಗುಣಮಟ್ಟದ ಲೋಹವನ್ನು ಬಳಸಿ ಸ್ಕೂಟರ್‌ನ ಬಾಡಿ ಭಾಗವನ್ನು ನಿರ್ಮಿಸಲಾಗಿದ್ದು, ಇದು ಸ್ಕೂಟರ್‌ನ ಬಾಳಿಕೆಯನ್ನು ಹೆಚ್ಚಿಸುತ್ತದೆ.

ಇದನ್ನೂ ಓದಿ: ಬಜಾಜ್ ಚೇತಕ್ 3201 ಸ್ಪೆಷಲ್ ಎಡಿಷನ್ ಬಿಡುಗಡೆ: ಈಗ ಅಮೆಜಾನ್‌ನಲ್ಲಿ ₹1.30 ಲಕ್ಷ ಬೆಲೆಗೆ ಲಭ್ಯ

Leave a Comment