ಭಾರತೀಯ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಆಫ್-ರೋಡ್ ವಾಹನಗಳೆಂದರೆ ಮಹೀಂದ್ರಾ ಥಾರ್(Mahindra Thar). ತನ್ನ ಅನನ್ಯ ವಿನ್ಯಾಸ ಮತ್ತು ಅತ್ಯುತ್ತಮ ಆಫ್-ರೋಡ್ ಸಾಮರ್ಥ್ಯಗಳಿಂದ ಗ್ರಾಹಕರನ್ನು ಸೆಳೆದಿರುವ ಥಾರ್, ವರ್ಷಗಳಿಂದ ಭಾರತೀಯರ ಮನಸ್ಸಿನಲ್ಲಿ ವಿಶೇಷ ಸ್ಥಾನ ಪಡೆದಿದೆ. ಪ್ರಸ್ತುತ ಮಾದರಿc ಭರ್ಜರಿ ಯಶಸ್ಸಿನ ನಂತರ, ಮಹೀಂದ್ರಾ ಕಂಪನಿಯು ಥಾರ್ ಕುಟುಂಬವನ್ನು ವಿಸ್ತರಿಸುವ ನಿಟ್ಟಿನಲ್ಲಿ 5-ಡೋರ್ ಆವೃತ್ತಿಯನ್ನು ಪರಿಚಯಿಸಲು ಸಿದ್ಧವಾಗಿದೆ. ‘ಥಾರ್ ROXX’ ಎಂದು ಹೆಸರಿಸಲಾಗಿರುವ ಈ ಹೊಸ ಮಾದರಿಯು ಭಾರತೀಯ ರಸ್ತೆಗಳಲ್ಲಿ ಹಲವು ಬಾರಿ ಪರೀಕ್ಷಿಸಲ್ಪಟ್ಟಿದ್ದು, ಆಗಸ್ಟ್ 15ರಂದು ಮಾರುಕಟ್ಟೆಗೆ ಪ್ರವೇಶಿಸುವ ನಿರೀಕ್ಷೆಯಿದೆ.
ಮಹೀಂದ್ರಾ ಕಂಪನಿಯ ಈ ಹೊಸ ಮಾದರಿಯ ಐದು ಬಾಗಿಲಿನ ‘ಥಾರ್ ROXX’ ಆವೃತ್ತಿಯ ಅತ್ಯಂತ ಆಕರ್ಷಕ ಚಿತ್ರಗಳನ್ನು ಬಿಡುಗಡೆ ಮಾಡುವ ಮೂಲಕ ಎಲ್ಲರ ಕುತೂಹಲವನ್ನು ಹೆಚ್ಚಿಸಿದೆ. ಈ ಚಿತ್ರಗಳು ಥಾರ್ ರೋಕ್ಸ್ನ ಅದ್ಭುತ ವಿನ್ಯಾಸವನ್ನು ಸ್ಪಷ್ಟವಾಗಿ ತೋರಿಸುತ್ತವೆ ಮತ್ತು ಅದರಲ್ಲಿ ವೈಟ್ ಮತ್ತು ಬ್ಲ್ಯಾಕ್ ಎಂಬ ಎರಡು ಹೊಸ ಬಣ್ಣದ ಆಯ್ಕೆಗಳು ಇರುವುದನ್ನು ಬಹಿರಂಗಪಡಿಸಿವೆ.

ಮಹೀಂದ್ರಾ ಥಾರ್ ರಾಕ್ಸ್(Mahindra Thar Roxx) ಎಸ್ಯುವಿ ವಿಶಾಲವಾದ ಆಂತರಿಕ ಸ್ಥಳ, ಆಧುನಿಕ ವಿನ್ಯಾಸ ಮತ್ತು ಅತ್ಯಾಧುನಿಕ ವೈಶಿಷ್ಟ್ಯಗಳ ಸಂಯೋಜನೆಯೊಂದಿಗೆ ಒಂದು ಹೊಸ ಆಯ್ಕೆಯನ್ನು ನೀಡುತ್ತದೆ. ವಿಸ್ತೃತ ವೀಲ್ಬೇಸ್, ಪಿಲ್ಲರ್ಗಳ ಮೇಲೆ ಅಳವಡಿಸಲಾದ ಹಿಂಬಾಗಿಲಿನ ಹ್ಯಾಂಡಲ್ಗಳು, ಹೊಸ ಸ್ಲಾಟ್ ಗ್ರಿಲ್ ಮತ್ತು 360-ಡಿಗ್ರಿ ಕ್ಯಾಮೆರಾ ಇವು ಕೆಲವು ಪ್ರಮುಖ ಹೈಲೈಟ್ಗಳು. ಐದು ಬಾಗಿಲಿನ ವಿನ್ಯಾಸವು ಥಾರ್ ರಾಕ್ಸ್ ಅನ್ನು ಕುಟುಂಬ ಸಾಹಸಗಳಿಗೆ ಪರಿಪೂರ್ಣ ಸಂಗಾತಿಯನ್ನಾಗಿ ಮಾಡುತ್ತದೆ.
ಥಾರ್ 5-ಡೋರ್ ಮಾದರಿಯಲ್ಲಿ ಹೆಚ್ಚುವರಿ ಪ್ರಯಾಣಿಕರು ಮತ್ತು ಸಾಮಾನುಗಳಿಗೆ ಸಾಕಷ್ಟು ಜಾಗವನ್ನು ಒದಗಿಸಲು ವೀಲ್ಬೇಸ್ ಅನ್ನು 300 ಎಂಎಂ ವಿಸ್ತರಿಸಲಾಗಿದೆ. ಇದರೊಂದಿಗೆ, ಸುಧಾರಿತ ಸಸ್ಪೆನ್ಷನ್ ವ್ಯವಸ್ಥೆ ಮತ್ತು ಚಾಸಿಸ್ನ ಜೊತೆಗೆ, ಸ್ಕಾರ್ಪಿಯೋ-ಎನ್ನಲ್ಲಿ ಬಳಸಲಾದ ಶಕ್ತಿಶಾಲಿ ಎಂಜಿನ್ ಆಯ್ಕೆಗಳನ್ನು ಈ ಮಾದರಿಯಲ್ಲಿ ಕಾಣಬಹುದು. ಆಧುನಿಕ ತಂತ್ರಜ್ಞಾನದ ಸಂಯೋಜನೆಯಾಗಿ, ಥಾರ್ ರೋಕ್ಸ್ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ದೊಡ್ಡ ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ವ್ಯವಸ್ಥೆಯನ್ನು ಹೊಂದಿದ್ದು, ಇದು ಬ್ರ್ಯಾಂಡ್ನ ಫ್ಲ್ಯಾಗ್ಶಿಪ್ ಮಾದರಿಯಾದ XUV700 ನಲ್ಲಿ ಲಭ್ಯವಿರುವಂತಹ ಅದ್ಭುತ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಮಹೀಂದ್ರಾ ಥಾರ್ ರೋಕ್ಸ್ನ(Mahindra Thar Roxx) ಹೈ-ಎಂಡ್ ಮಾದರಿಗಳು ಪನೋರಮಿಕ್ ಸನ್ರೂಫ್, ವೆಂಟಿಲೇಟೆಡ್ ಫ್ರಂಟ್ ಸೀಟ್ಗಳು, , ಲೆವೆಲ್ 2 ಎಡಿಎಎಸ್(ADAS), ಮೃದುವಾದ ಸ್ಪರ್ಶದ ಫಿನಿಶ್ ಹೊಂದಿರುವ ಡ್ಯಾಶ್ಬೋರ್ಡ್ ಮತ್ತು ಹರ್ಮನ್ ಕಾರ್ಡನ್ ಮ್ಯೂಸಿಕ್ ಸಿಸ್ಟಂನಂತಹ ಪ್ರೀಮಿಯಂ ವೈಶಿಷ್ಟ್ಯಗಳನ್ನು ಹೊಂದಿವೆ. ಈ ಮಾದರಿಯಲ್ಲಿ ಮುಂಭಾಗದ ಸೀಟ್ಗಳೊಂದಿಗೆ ಬಿಳಿ ಬಣ್ಣದ ಸೀಟ್ ಅಪ್ಹೋಲ್ಸ್ಟರಿಯನ್ನು ನೀಡಲಾಗಿದ್ದು, ಇದು ಪ್ರಸ್ತುತ ಮಾದರಿಯಲ್ಲಿನ ಕಪ್ಪು ಬಣ್ಣದ ಸೀಟ್ ಅಪ್ಹೋಲ್ಸ್ಟರಿಗಿಂತ ಭಿನ್ನವಾಗಿದೆ. ಇದಲ್ಲದೆ, ಚಾಲಕನ ಸೀಟನ್ನು ವಿದ್ಯುತ್ನಿಂದ ನಿಯಂತ್ರಿಸಬಹುದು ಮತ್ತು 360-ಡಿಗ್ರಿ ಸರೌಂಡ್ ಕ್ಯಾಮೆರಾ, ವೈರ್ಲೆಸ್ ಚಾರ್ಜರ್ ಮತ್ತು ಆಟೋ-ಡಿಮ್ಮಿಂಗ್ ಇಆರ್ವಿಎಂನಂತಹ ಇತರ ಆಧುನಿಕ ವೈಶಿಷ್ಟ್ಯಗಳನ್ನು ಸಹ ಒಳಗೊಂಡಿದೆ.
Mahindra Thar Roxx ಪವರ್ಟ್ರೇನ್
ಮೂಲಗಳ ಪ್ರಕಾರ, Mahindra Thar Roxx ಪೆಟ್ರೋಲ್ ಮಾದರಿಯು ಸ್ಕಾರ್ಪಿಯೋ N ಮತ್ತು XUV700 ವಾಹನಗಳಲ್ಲಿ ಬಳಸಲಾಗುವ 2.0-ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ನಿಂದ ಶಕ್ತಿ ಪಡೆಯಲಿದೆ. ಈ ಎಂಜಿನ್ ಎರಡು ವಿಭಿನ್ನ ಶಕ್ತಿ ಉತ್ಪಾದನಾ ಆಯ್ಕೆಗಳನ್ನು ನೀಡಲಿದೆ. ಪ್ರಾರಂಭಿಕ ಮಾದರಿಗಳು 160 bhp ಮತ್ತು 330 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ ಎಂದು ನಿರೀಕ್ಷಿಸಲಾಗಿದೆ. ಆದರೆ ಹೈ-ಎಂಡ್ ಮಾದರಿಗಳು 175 bhp ಮತ್ತು 380 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿವೆ, ಪ್ರಸ್ತುತ ಇರುವ ಸ್ಕಾರ್ಪಿಯೋ N ಎಂಜಿನ್ 203 bhp ಅನ್ನು ಉತ್ಪಾದಿಸುತ್ತವೆ.
ಇದನ್ನೂ ಓದಿ: ಮಾಹಿಂದ್ರಾ ಥಾರ್ ರಾಕ್ಸ್ನ ಹೊಸ ಟೀಸರ್ ಅನ್ನು ಮತ್ತೊಮ್ಮೆ ಬಿಡುಗಡೆ ಮಾಡಲಾಗಿದೆ