ಹೊಂಡಾ ಎಲಿವೇಟ್ಗೆ ₹65,000 ವರೆಗೆ ರಿಯಾಯಿತಿ ಮತ್ತು 3 ವರ್ಷಗಳ ಉಚಿತ ಸವಿ೯ಸ್ ಪ್ಯಾಕೇಜ್
ಭಾರತದ ಪ್ರಮುಖ ಕಾರು ತಯಾರಕರಾದ ಹೊಂಡಾ ಕಾರ್ಸ್ ಇಂಡಿಯಾ ಲಿಮಿಟೆಡ್ (HCIL) “ಹೊಂಡಾ ಫ್ರೀಡಂ ಫೆಸ್ಟ್” ಅನ್ನು ಪ್ರಕಟಿಸಿದೆ. ಈ ಅದ್ಭುತ ಕಾರ್ಯಕ್ರಮದಲ್ಲಿ ನೀವು ಹೊಂಡಾದ ಪ್ರೀಮಿಯಂ ಕಾರುಗಳನ್ನು ಖರೀದಿಸಿದಾಗ ಉತ್ತಮ ಪ್ರಯೋಜನಗಳನ್ನು ಪಡೆಯಬಹುದು.
ಈ ತಿಂಗಳು ಹೊಂಡಾ ಎಲಿವೇಟ್(Honda Elevate) ಮಾಡೆಲ್ನಲ್ಲಿ ನಿಮಗಾಗಿ ಉತ್ತಮ ಡೀಲ್ ಇದೆ. ನೀವು ₹65,000 ವರೆಗೆ ರಿಯಾಯಿತಿ ಮತ್ತು 3 ವರ್ಷಗಳ ಉಚಿತ ಸವಿ೯ಸ್ ಪ್ಯಾಕೇಜ್ ಅನ್ನು ಆನಂದಿಸಬಹುದು. ನೀವು ಆಯ್ಕೆ ಮಾಡುವ ಮಾಡೆಲ್ ಅಥವಾ ವೇರಿಯಂಟ್ಗೆ ಅನುಗುಣವಾಗಿ ನಿಮಗೆ ಸಿಗುವ ನಿರ್ದಿಷ್ಟ ಆಫರ್ ಬದಲಾಗುತ್ತದೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕಾಗುತ್ತದೆ.
ಹೊಂಡಾ ಎಲಿವೇಟ್ನ ಬೆಲೆ ₹11.91 ಲಕ್ಷದಿಂದ ಆರಂಭವಾಗಿ ಟಾಪ್ ZX ಮಾದರಿಗೆ ₹16.51 ಲಕ್ಷವರೆಗೆ ಇರುತ್ತದೆ. ಇದು ಭಾರತದಲ್ಲಿ ಹುಂಡೈ ಕ್ರೆಟಾ, ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ, ಸ್ಕೋಡಾ ಕುಶಾಕ್ ಮತ್ತು ಟೊಯೋಟಾ ಅರ್ಬನ್ ಕ್ರೂಸರ್ ಹೈರಿಡರ್ನಂತಹ ಪ್ರಸಿದ್ಧ ಮಾದರಿಗಳಿಗೆ ಸ್ಪರ್ಧೆಯನ್ನು ನೀಡವಂತಹದಾಗಿದೆ. ನೀವು SUV ಖರೀದಿಸಲು ಯೋಚಿಸುತ್ತಿದ್ದರೆ, ನಿಮ್ಮ ಅಗತ್ಯಗಳು ಮತ್ತು ಆದ್ಯತೆಗಳಿಗೆ ಹೊಂಡಾ ಎಲಿವೇಟ್ ಹೊಂದಿಕೊಳ್ಳುತ್ತದೆಯೇ ಎಂದು ಪರಿಶೀಲಿಸಬಹುದು.
ಹೊಂಡಾ ಎಲಿವೇಟ್ ಎಕ್ಸ್ಟೀರಿಯರ್ ಮತ್ತು ಇಂಟೀರಿಯರ್
ಈ SUV ತನ್ನ ಬಲಿಷ್ಠ ನೋಟದಿಂದ ಗಮನ ಸೆಳೆಯುತ್ತದೆ. ಅದರ ವಿಶಿಷ್ಟ ಫ್ರೊಂಟ್ ಆಲ್ಫಾ-ಬೋಲ್ಡ್ ಸಿಗ್ನೇಚರ್ ಗ್ರಿಲ್ ಜಪಾನೀಸ್ ವಾಹನ ತಯಾರಕರ ಹೊಂಡಾ ಲೋಗೋವನ್ನು ಹೆಮ್ಮೆಯಿಂದ ಪ್ರದರ್ಶಿಸುತ್ತದೆ. ಹಿಂಭಾಗದಲ್ಲಿ, ಸ್ಟೇಬಲ್ ಮತ್ತು ಸ್ಪೇಷಿಯಸ್ ಅನುಭವವನ್ನು ನೀಡುವ ಡ್ಯುಯಲ್ ಟ್ರೇಲ್ಗಳೊಂದಿಗೆ ವಿಶಿಷ್ಟವಾದ ಟೇಲ್ಗೇಟ್ ಡಿಸೈನ್ ಅನ್ನು ನೀವು ಕಾಣಬಹುದು. ಇಂಟಿಗ್ರೇಟೆಡ್ LED DRL ಗಳು ಮತ್ತು ಟರ್ನ್ ಸಿಗ್ನಲ್ಗಳೊಂದಿಗೆ ಸ್ಲೀಕ್ LED ಪ್ರೊಜೆಕ್ಟರ್ ಹೆಡ್ಲೈಟ್ಗಳು ಅದರ ಮಾಡ೯ನ್ ಲುಕ್ ಅನ್ನು ಇನ್ನಷ್ಟ ಹೆಚ್ಚಿಸುತ್ತವೆ. ಇದಲ್ಲದೆ, SUV ನಲ್ಲಿ LED ಪ್ರೊಜೆಕ್ಟರ್ ಫಾಗ್ ಲೈಟ್ಗಳು ಮತ್ತು LED ಟರ್ನ್ ಸಿಗ್ನಲ್ಗಳೊಂದಿಗೆ ಆಟೋ-ಫೋಲ್ಡ್ ಮಿರರ್ ಗಳು ಹೆಚ್ಚುವರಿ ಅನುಕೂಲತೆಗಾಗಿ ಲಭ್ಯವಿದೆ. ಇದರ ಜೊತೆಗೆ ಡ್ಯುಯಲ್-ಟೋನ್ ಡೈಮಂಡ್-ಕಟ್ ವಿನ್ಯಾಸದೊಂದಿಗೆ ಬರುವ 17-ಇಂಚಿನ ಅಲಾಯ್ ವೀಲ್ ಗಳು ಈ ಎಸ್ಸುವಿಯ ಆಕರ್ಷಣೆಯನ್ನು ಇನ್ನು ಹೆಚ್ಚಿಸುತ್ತದೆ.

ಹೊಂಡಾ ಎಲಿವೇಟ್ನಲ್ಲಿ(Honda Elevate) ಹೈ-ಟೆಕ್ 7-ಇಂಚಿನ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ದೊಡ್ಡ 10.25-ಇಂಚಿನ ಟಚ್ಸ್ಕ್ರೀನ್ ಎಂಟರ್ಟೈನ್ಮೆಂಟ್ ಸಿಸ್ಟಮ್ ಇದೆ. ಈ ಮಾದರಿಯಲ್ಲಿ ಆಪಲ್ ಕಾರ್ಪ್ಲೇ ಮತ್ತು ಆಂಡ್ರಾಯ್ಡ್ ಆಟೋಗೆ ವೈರ್ಲೆಸ್ ಸಂಪರ್ಕವನ್ನು ನೀವು ಕಾಣಬಹುದು. ಜೊತೆಗೆ ವೈರ್ಲೆಸ್ ಫೋನ್ ಚಾರ್ಜರ್ ಮತ್ತು ಹೆಚ್ಚುವರಿಯಾಗಿ, ನಿಮ್ಮ ಆಡಿಯೋ ಆನಂದವನ್ನು ಹೆಚ್ಚಿಸಲು ಪ್ರೀಮಿಯಂ 8-ಸ್ಪೀಕರ್ ಸೌಂಡ್ ಸಿಸ್ಟಮ್ ಅನ್ನು ಸಹ ಇದು ಹೊಂದಿರುತ್ತದೆ.
SUV ಯ ಕೆಲವು ಮಾದರಿಗಳು ಹೊಂಡಾ ಸೆನ್ಸಿಂಗ್ನೊಂದಿಗೆ ಬರುತ್ತವೆ, ಇದು ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ (ADAS) ಅನ್ನು ಒಳಗೊಂಡಿದೆ. ಈ ವ್ಯವಸ್ಥೆಯು ಕೊಲಿಷನ್ ಮೈಟಿಗೇಷನ್ ಬ್ರೇಕ್ ಸಿಸ್ಟಮ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಲೇನ್ ಕೀಪ್ ಅಸಿಸ್ಟ್ ಸಿಸ್ಟಮ್, ಲೀಡ್ ಕಾರ್ ಡಿಪಾಚ೯ರ್ ನೋಟಿಫಿಕೇಷನ್, ಆಟೋ ಹೈ ಬೀಮ್ ಮತ್ತು ಇತರ ವೈಶಿಷ್ಟ್ಯಗಳನ್ನು ಒದಗಿಸುತ್ತದೆ. ಇದಲ್ಲದೆ, SUV ರಸ್ತೆಯಲ್ಲಿ ನಿಮ್ಮ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು 6 ಏರ್ ಬ್ಯಾಗ್ಗಳು, ಹಿಲ್ ಸ್ಟಾರ್ಟ್ ಅಸಿಸ್ಟ್, ಬ್ರೇಕ್ ಅಸಿಸ್ಟ್, ಬ್ರೇಕ್ ಓವರ್ರೈಡ್ ಸಿಸ್ಟಮ್ ಮತ್ತು ಇತರ ಹಲವು ಸುರಕ್ಷತಾ ವೈಶಿಷ್ಟ್ಯಗಳನ್ನು ಒದಗಿಸುತ್ತದೆ.
Honda Elevate ಎಂಜಿನ್
ಹೊಂಡಾ ಎಲಿವೇಟ್(Honda Elevate) 1.5-ಲೀಟರ್ ಪೆಟ್ರೋಲ್ ಎಂಜಿನ್ನೊಂದಿಗೆ ಬರುತ್ತದೆ, ಇದು 119 ಹೆಚ್ ಪಿ ಮತ್ತು 145 Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್ಮಿಷನ್ ಅಥವಾ CVT (ಆಟೋಮ್ಯಾಟಿಕ್) ಟ್ರಾನ್ಸ್ಮಿಷನ್ ಜೊತೆಗೆ ಜೋಡಿಸಬಹುದು. ಮೈಲೇಜ್ ವಿಷಯಕ್ಕೆ ಬಂದರೆ ಈ SUV ಇದರ ಮಾದರಿಯನ್ನು ಅವಲಂಬಿಸಿ 15.31 ರಿಂದ 16.92 kmpl ವರೆಗೆ ಮೈಲೇಜ್ ಅನ್ನು ನೀಡುತ್ತದೆ
ಇದನ್ನೂ ಓದಿ: ಮಾರುತಿ ಸುಜುಕಿ ಫ್ರಾಂಕ್ಸ್ ವೆಲೋಸಿಟಿ ಎಡಿಷನ್ ಬೆಲೆ ರೂ 7.29 ಲಕ್ಷದಿಂದ ಪ್ರಾರಂಭ