ಬಜಾಜ್ ಚೇತಕ್ 3201 ಸ್ಪೆಷಲ್ ಎಡಿಷನ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಅತ್ಯುನ್ನತ ವೈಶಿಷ್ಟ್ಯಗಳನ್ನು ಹೊಂದಿರುವ ‘ಪ್ರೀಮಿಯಂ’ ಮಾದರಿಯ ಆಧಾರದ ಮೇಲೆ ನಿರ್ಮಿಸಲಾಗಿದೆ ಮತ್ತು ಇದು ಕೆಲವು ಹೆಚ್ಚುವರಿ ವೈಶಿಷ್ಟ್ಯಗಳೊಂದಿಗೆ ಬರುತ್ತದೆ.
ಇದೇ ಆಗಸ್ಟ್ 5 ರಿಂದ ಹತ್ತಿರದ ಶೋರೂಮ್ ಗಳಲ್ಲಿ ಮತ್ತು ಅಮೆಜಾನ್ ಇಂಡಿಯಾದಲ್ಲಿ ಬಜಾಜ್ ಚೇತಕ್ 3201 ಸ್ಪೆಷಲ್ ಎಡಿಷನ್ (Bajaj Chetak 3201 Special Edition) ಸ್ಕೂಟರ್ ಅನ್ನು ನೀವು ಖರೀದಿಸಬಹುದು. ಈ ವಿಶಿಷ್ಟ ಆವೃತ್ತಿಯು ಟಾಪ್-ಟೈರ್ ಪ್ರೀಮಿಯಂ ಮಾಡೆಲ್ನಿಂದ ಪಡೆಯಲಾಗಿದೆ ಮತ್ತು ಇದನ್ನು ಬಜಾಜ್ ಆಟೋದ ಅಪ್ಡೇಟೆಡ್ ನೇಮಿಂಗ್ ಸ್ಟಾಟಜಿ೯ ಅಡಿಯಲ್ಲಿ 1.30 ಲಕ್ಷ (ಎಕ್ಸ್-ಶೋರೂಮ್) ವಿಶೇಷ ಬೆಲೆಯಲ್ಲಿ ಬಿಡುಗಡೆಯಾಗಿದೆ. ಆರಂಭಿಕ ಆಫರ್ ಮುಗಿದ ನಂತರ, ಬೆಲೆ ₹1.40 ಲಕ್ಷ (ಎಕ್ಸ್-ಶೋರೂಂ) ಗೆ ಏರಿಕೆಯಾಗುತ್ತದೆ.
ಬಜಾಜ್ ಚೇತಕ್ 3201 ಸ್ಪೆಷಲ್ ಎಡಿಷನ್: ವೈಶಿಷ್ಟ್ಯಗಳು
ಬಜಾಜ್ ಚೇತಕ್ 3201 ಸ್ಪೆಷಲ್ ಎಡಿಷನ್(Bajaj Chetak 3201 Special Edition) ತನ್ನ ವಿಶಿಷ್ಟ ಬ್ರೂಕ್ಲಿನ್ ಬ್ಲ್ಯಾಕ್ ಬಣ್ಣ, ‘ಚೇತಕ್’ ಡಿಕಾಲ್ಗಳು, ಸ್ಕಫ್ ಪ್ಲೇಟ್ಗಳು ಮತ್ತು ಟು-ಟೋನ್ ಕ್ವಿಲ್ಟೆಡ್ ಸೀಟ್ಗಳಂತಹ ವಿಶೇಷತೆಗಳೊಂದಿಗೆ ಪ್ರೀಮಿಯಂ ಮಾಡೆಲ್ ಗಿಂತ ಭಿನ್ನವಾಗಿ ಕಾಣುತ್ತದೆ. ಆದರೆ ಬೇಸಿಕ್ ಡಿಸೈನ್ ಮಾತ್ರ ಪ್ರೀಮಿಯಂ ಆವೃತ್ತಿಯಂತೆಯೇ ಇರುತ್ತದೆ.

ಪ್ರೀಮಿಯಂ ಮತ್ತು ಸ್ಪೆಷಲ್ ಎಡಿಷನ್ ಎರಡೂ ಮಾದರಿಗಳಲ್ಲಿ, ನೀವು ನಿಮ್ಮ ವೇಗ ಮತ್ತು ಇತರ ಪ್ರಮುಖ ಮಾಹಿತಿಯನ್ನು ತೋರಿಸುವ ಬಣ್ಣದ TFT ಡಿಸ್ಪ್ಲೇಯೊಂದಿಗೆ ಆಧುನಿಕ ಡ್ಯಾಶ್ಬೋರ್ಡ್ ಅನ್ನು ಕಾಣಬಹುದು. ಟರ್ನ್-ಬೈ-ಟರ್ನ್ ನೇವಿಗೇಷನ್ ಸಹಾಯದಿಂದ ನೀವು ಸುಲಭವಾಗಿ ಡೈರೆಕ್ಷನ್ ಗಳನ್ನು ಫಾಲೋ ಮಾಡಬಹುದು ಹಾಗೂ ಮ್ಯೂಸಿಕ್ ಕಂಟ್ರೋಲ್, ಕರೆಗಳನ್ನು ಸ್ವೀಕರಿಸುವುದನ್ನು ಸುಲಭವಾಗಿ ಯಾವುದೇ ಕಿರಿಕಿರಿ ಇಲ್ಲದೆ ಮಾಡಬಹುದು. ಜೊತೆಗೆ, ನಿಮ್ಮ ಶೈಲಿಗೆ ತಕ್ಕಂತೆ ನೀವು ನಿಮ್ಮ ಸೆಟ್ಟಿಂಗ್ಗಳನ್ನು ಕಸ್ಟಮೈಸೇಶನ್ ಮಾಡಬಹುದು .ಎರಡೂ ಮಾದರಿಗಳು ಸ್ಟ್ಯಾಂಡರ್ಡ್ ಟೆಕ್ಪ್ಯಾಕ್ ಸಾಫ್ಟ್ವೇರ್ ಪ್ಯಾಕೇಜ್ ಅನ್ನು ಒಳಗೊಂಡಿದ್ದು, ಹಿಲ್-ಹೋಲ್ಡ್ ಕಂಟ್ರೋಲ್ ಮತ್ತು ಸ್ಪೋರ್ಟ್ ಮೋಡ್ನಂತಹ ಅದ್ಭುತ ವೈಶಿಷ್ಟ್ಯಗಳನ್ನು ಹೊಂದಿದೆ.
ಬಜಾಜ್ ಚೇತಕ್ 3201 ಸ್ಪೆಷಲ್ ಎಡಿಷನ್: ಬ್ಯಾಟರಿ ಮತ್ತು ಪರ್ಫಾರ್ಮೆನ್ಸ್
ಚೇತಕ್ 3201 ಸ್ಪೆಷಲ್ ಎಡಿಷನ್(Bajaj Chetak 3201 Special Edition) ಪ್ರಮಾಣಿತ ಪ್ರೀಮಿಯಂ ಮಾದರಿಯಂತೆಯೇ 3.2 kWh ಬ್ಯಾಟರಿ ಪ್ಯಾಕ್ನೊಂದಿಗೆ ಬರುತ್ತದೆ. ಕುತೂಹಲಕಾರಿ ವಿಷಯವೆಂದರೇ ARAI ಪ್ರಮಾಣೀಕರಣದ ಪ್ರಕಾರ ಸ್ಟಾಂಡಡ್೯ ಚೇತಕ್ ಪ್ರೀಮಿಯಂ 127 ಕಿಮೀ ವರೆಗೆ ಹೋಗಬಲ್ಲದು, ಆದರೆ ಬಜಾಜ್ ಚೇತಕ್ 3201 ಸ್ಪೆಷಲ್ ಎಡಿಷನ್ 136 ಕಿಮೀ ದೂರವನ್ನು ತಲುಪಬಹುದು ಎಂದು ಬಜಾಜ್ ಕಂಪನಿಯವರು ತಿಳಿಸಿದ್ದಾರೆ. ಈ ಎಲೆಕ್ಟ್ರಿಕ್ ಸ್ಕೂಟರ್ನ ಗರಿಷ್ಠ ವೇಗವು 73 ಕಿಮೀ/ಗಂಟೆಗೆ ಆಗಿರುತ್ತದೆ.
ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ನ ಇತ್ತೀಚಿನ ಮಾದರಿಯ ಬೆಲೆ ₹1.30 ಲಕ್ಷ ಆಗಿದ್ದು. ಇದು ಮಾರುಕಟ್ಟೆಯಲ್ಲಿ ಆಗಲೇ ಇರುವ ಅಥರ್ ರಿಜ್ಟಾ, ಓಲಾ ಎಸ್1 ಪ್ರೋ ಮತ್ತು ಟಿವಿಎಸ್ iQube ನಂತಹ ಇತರ ಜನಪ್ರಿಯ ಸ್ಕೂಟರ್ಗಳಿಗೆ ಸ್ಪರ್ಧೆಯನ್ನು ನೀಡಲು ಸಿದ್ಧವಾಗಿದೆ. ಆದ್ದರಿಂದ, ನೀವು ಎಲೆಕ್ಟ್ರಿಕ್ ಸ್ಕೂಟರ್ ಕೊಳ್ಳಲು ಬಯಸಿದರೆ , ಈ ಹೊಸ ಚೇತಕ್ ಉತ್ತಮ ಆಯ್ಕೆಯಾಗಬಹುದು.
ಇದನ್ನೂ ಓದಿ: ಬಜಾಜ್ ಚೇತಕ್ 2901 ಹೊಸ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಇದರ ಬೆಲೆ ರೂ 95,998