2024 ಇಂಡಿಯನ್ ರೋಡ್ಮಾಸ್ಟರ್ ಎಲೈಟ್ ಬೆಲೆ 71.82 ಲಕ್ಷ ರೂಪಾಯಿ
ಇಂಡಿಯನ್ ಮೋಟಾರ್ಸೈಕಲ್ಸ್ ಇತ್ತೀಚೆಗೆ ಭಾರತದಲ್ಲಿ 2024 ರ ರೋಡ್ಮಾಸ್ಟರ್ ಎಲೈಟ್ ಅನ್ನು 71.82 ಲಕ್ಷ ರೂಪಾಯಿ (ಎಕ್ಸ್-ಶೋರೂಂ) ಬೆಲೆಯಲ್ಲಿ ಬಿಡುಗಡೆ ಮಾಡಿದೆ. ಈ ವಿಶೇಷ ಬೈಕ್ ಸ್ಟ್ಯಾಂಡರ್ಡ್ ವಷ೯ನ್ಗೆ ಹೋಲಿಸಿದರೆ ಬಹಳಷ್ಟು ವಿಶಿಷ್ಟ ಫೀಚರ್ ಗಳನ್ನು ಹೊಂದಿದೆ. ಇಡೀ ಜಗತ್ತಿನಲ್ಲಿ ಕೇವಲ 350 ಯೂನಿಟ್ ಗಳು ಮಾತ್ರ ಇಂಡಿಯನ್ ರೋಡ್ಮಾಸ್ಟರ್ ಎಲೈಟ್(Indian Roadmaster Elite) ಲಭ್ಯವಿರುತ್ತದೆ.
ಈ ಬೈಕ್ ಇಂಡಿಯನ್ ಮೋಟಾರ್ಸೈಕಲ್ ರೆಡ್ ಕ್ಯಾಂಡಿ, ಡಾರ್ಕ್ ಇಂಡಿಯನ್ ಮೋಟಾರ್ಸೈಕಲ್ ರೆಡ್ ಕ್ಯಾಂಡಿ ಮತ್ತು ಬ್ಲ್ಯಾಕ್ ಕ್ಯಾಂಡಿ ಈ ಮೂರು ಬಣ್ಣಗಳಲ್ಲಿ ಬರುತ್ತದೆ. ಈ ವಿಶೇಷ ಬಣ್ಣದ ವಿನ್ಯಾಸವು ಪ್ರಸಿದ್ಧ ರೆಡ್ ಕಲರ್ ಸ್ಚೀಮ್ ಹೊಂದಿದ್ದ ಮೊದಲ ಮೋಟಾರ್ಸೈಕಲ್ 1904 ರ ಕ್ಲಾಸಿಕ್ ಇಂಡಿಯನ್ ಕ್ಯಾಮೆಲ್ಬ್ಯಾಕ್ ಮೋಟಾರ್ಸೈಕಲ್ ನಿಂದ ಪ್ರೇರಿತವಾಗಿದೆ. ಹೆಚ್ಚುವರಿಯಾಗಿ, ನೀವು ಎರಡು ವರ್ಷಗಳ ಫ್ಯಾಕ್ಟರಿ ವಾರಂಟಿಯ್ನು ಪಡೆಯಬಹುದಾಗಿದ್ದು, ಅದರಲ್ಲಿ ನೀವು ಪ್ರಯಾಣಿಸುವ ಮೈಲಿಗಳಿಗೆ ಯಾವುದೇ ಮಿತಿಯಿರುವುದಿಲ್ಲ.
ಇಂಡಿಯನ್ ರೋಡ್ಮಾಸ್ಟರ್ ಎಲೈಟ್ ಫೀಚರ್ಸ್ ಮತ್ತು ಲಕ್ಷುರಿ
ಪ್ರತಿಯೊಂದು ಪ್ಯಾಕೇಜ್ನಲ್ಲಿ, ನೀವು ಸ್ಲಿಕ್ ಬ್ಲ್ಯಾಕ್ಡ್-ಔಟ್ ವಿಂಡ್ಶೀಲ್ಡ್, ಮ್ಯಾಚಿಂಗ್ ಬಣ್ಣಗಳೊಂದಿಗೆ ಆರಾಮದಾಯಕ ಹೀಟೆಡ್ ಮತ್ತು ಕೂಲ್ಡ್ ಸೀಟ್, ಅತ್ಯಾಧುನಿಕ ಎಲ್ಇಡಿ ಹೆಡ್ಲೈಟ್ಗಳು, ಸ್ಟೈಲಿಶ್ ಹ್ಯಾಂಡ್-ಪೇಂಟೆಡ್ ಗೋಲ್ಡ್ ಸ್ಟ್ರಿಪ್ಸ್ ಮತ್ತು 10 ಸ್ಪೋಕ್ ಡೈಮಂಡ್-ಕಟ್ ವೀಲ್ಗಳನ್ನು ಕಾಣಬಹುದು.ಹಾಗೂ ಈ ಮೋಟಾರ್ಸೈಕಲ್ ಎಂಜಿನ್, ಗ್ಯಾಸ್ ಟ್ಯಾಂಕ್ ಮತ್ತು ಫೂಟ್ರೆಸ್ಟ್ನಲ್ಲಿ ಎಲೈಟ್ ಲೋಗೋಗಳು ಮತ್ತು ವಿನ್ಯಾಸಗಳನ್ನು ನೀವು ಕಾಣಬಹುದು.

ಈ ಬೈಕ್ ನಲ್ಲಿ 7.0 ಇಂಚಿನ ಟಿಎಫ್ಟಿ ಡಿಸ್ಪ್ಲೇ ರೈಡ್ ಕಮಾಂಡ್ ವ್ಯವಸ್ಥೆಯೊಂದಿಗೆ ಅಪ್ಗ್ರೇಡ್ ಆಗಿದೆ. ಈ ವ್ಯವಸ್ಥೆಯೊಂದಿಗೆ, ನೀವು ಟರ್ನ್-ಬೈ-ಟರ್ನ್ ನ್ಯಾವಿಗೇಷನ್ ಅನ್ನು ಆನಂದಿಸಬಹುದು ಮತ್ತು ಬ್ಲೂಟೂತ್ ಮೂಲಕ ಸಂಪರ್ಕಿಸಬಹುದು. ಇದು ಆಪಲ್ ಕಾರ್ಪ್ಲೇ, ಕಾರ್ನರಿಂಗ್ ವೈಶಿಷ್ಟ್ಯಗಳು ಮತ್ತು ಪಾಸೆಂಜರ್ ಆರಮೆ೯ಸ್ಟ್ ಗಳನ್ನು ಹೊಂದಿದ್ದು ನಿಮ್ಮರೈಡಿಂಗ್ ಅನುಭವವನ್ನು ಇನ್ನಷ್ಟು ಹೆಚ್ಚಿಸುತ್ತದೆ.
ಇಂಡಿಯನ್ ರೋಡ್ಮಾಸ್ಟರ್ ಎಲೈಟ್(Indian Roadmaster Elite) ಪವರ್ಬ್ಯಾಂಡ್ ಆಡಿಯೋ ವಿಥ್ ಬೂಸ್ಟ್ ಎಂಬ ವಿಶೇಷ ಫೀಚರ್ ಅನ್ನು ಹೋದಿದ್ದು, ಇದು 12 ಸ್ಪೀಕರ್ಗಳೊಂದಿಗೆ 50% ಜೋರಾಗಿ ಸೌಂಡ್ ಮಾಡುತ್ತದೆ. ರೋಡ್ಮಾಸ್ಟರ್ ಎಲೈಟ್ ನಿಮ್ಮ ಲಗೇಜ್ಗಳಿಗೆ ಸ್ಯಾಡಲ್ಬ್ಯಾಗ್ಗಳು ಮತ್ತು ವಾಟರ್ ಪ್ರೋಫ್ ಕೇಸ್ನೊಂದಿಗೆ ಸಾಕಷ್ಟು ಜಾಗವನ್ನು ಒದಗಿಸುತ್ತದೆ. ನೀವು ದೀಘ೯ವಾಗಿ ಪ್ರಯಾಣಿಸುವಾಗ ಹೆಚ್ಚುವರಿ ಲಗೇಜ್ ತೆಗೆದುಕೊಳ್ಳಬೇಕಾದಾಗ ಇದು ಬಹಳ ಸಹಾಯಕವಾಗಿರುತ್ತದೆ.
Indian Roadmaster Elite ಎಂಜಿನ್
ಇಂಡಿಯನ್ ರೋಡ್ಮಾಸ್ಟರ್ ಎಲೈಟ್(Indian Roadmaster Elite) 1,890cc, ಏರ್-ಕೂಲ್ಡ್, ವಿ-ಟ್ವಿನ್ ಇಂಜಿನನ್ನು ಹೊಂದಿದ್ದು, ಇದು 170Nm ಗರಿಷ್ಠ ಟಾರ್ಕ್ ಅನ್ನು ನೀಡುತ್ತದೆ ಮತ್ತು 6-ಸ್ಪೀಡ್ ಗೇರ್ಬಾಕ್ಸ್ನೊಂದಿಗೆ ಜೋಡಿಸಲಾಗಿದೆ. ಈ ಬೈಕ್ ಮುಂಭಾಗದಲ್ಲಿ ಮುಂಭಾಗದಲ್ಲಿ 46 ಎಂಎಂ ಟೆಲಿಸ್ಕೋಪಿಕ್ ಫೋರ್ಕ್ ಮತ್ತು 119 ಎಂಎಂ ಟ್ರಾವೆಲ್ ಸಸ್ಪೆನ್ಷನ್ ಹೊಂದಿದೆ ಮತ್ತು ಹಿಂಭಾಗದಲ್ಲಿ 114 ಎಂಎಂ ಮೋನೋಶಾಕ್ ಅನ್ನು ಒಳಗೊಂಡಿದೆ. ಬ್ರೇಕಿಂಗ್ ವಿಷಯಕ್ಕೆ ಬಂದರೆ 4-ಪಿಸ್ಟನ್ ಕ್ಯಾಲಿಪರ್ಗಳೊಂದಿಗೆ ಡ್ಯುಯಲ್ 300mm ಫ್ಲೋಟಿಂಗ್ ರೋಟರ್ಗಳು ಮತ್ತು ಹಿಂಭಾಗದಲ್ಲಿ 2-ಪಿಸ್ಟನ್ ಕ್ಯಾಲಿಪರ್ನೊಂದಿಗೆ ಸಿಂಗಲ್ 300mm ಫ್ಲೋಟಿಂಗ್ ರೋಟರ್ ಗಳನ್ನು ಒಳಗೊಂಡಿದೆ. ಈ ಮೋಟಾರ್ಸೈಕಲ್ 20.8-ಲೀಟರ್ ಇಂಧನ ಟ್ಯಾಂಕ್ನೊಂದಿಗೆ ಸುಮಾರು 412 ಕೆಜಿ ತೂಕವಿರುತ್ತದೆ.
ಇದನ್ನೂ ಓದಿ: ಬಿಎಂಡಬ್ಲ್ಯು ಸಿಇ 04 ಎಲೆಕ್ಟ್ರಿಕ್ ಸ್ಕೂಟರ್ 14.90 ಲಕ್ಷ ರೂಪಾಯಿಗೆ ಬಿಡುಗಡೆಯಾಗಿದೆ