BMW R 1300 GS: ಬಿಎಂಡಬ್ಲ್ಯು ಆರ್ 1300 ಜಿಎಸ್ ಬೈಕ್ಗಳನ್ನು ಸ್ಟಾರ್ಟರ್ ರಿಲೇ ದೋಷದಿಂದಾಗಿ ಹಿಂಪಡೆಯಲಾಗಿದೆ

ಸುಮಾರು 25, 000 ಬಿಎಂಡಬ್ಲ್ಯು ಆರ್ 1300 ಜಿಎಸ್(BMW R 1300 GS) ಬೈಕ್ಗಳನ್ನು ಹಿಂಪಡೆಯಲಾಗಿದೆ

2024 ಮಾರ್ಚ್ 18 ರ ಮೊದಲು ತಯಾರಿಸಲ್ಪಟ್ಟ ಸುಮಾರು 25,000 ಬಿ ಎಂ ಡಬ್ಲ್ಯೂR 1300 GS (BMW R 1300 GS) ಬೈಕ್‌ಗಳನ್ನು ದೋಷಯುಕ್ತ ಸ್ಟಾರ್ಟರ್ ರಿಲೇಯಿಂದಾಗಿ ಹಿಂಪಡೆಯಲಾಗುತ್ತಿದೆ. ಈ ದೋಷದಿಂದಾಗಿ ಬೈಕ್ ನಿಲ್ಲುವ ಸಮಸ್ಯೆ ಉಂಟಾಗುತ್ತಿದೆ. ಈ ಸಮಸ್ಯೆಯನ್ನು ಈ ಹಿಂದೆ ಫೆಬ್ರವರಿಯಲ್ಲಿ ಸವಿ೯ಸ್‌ ಕ್ಯಾಂಪೇನ್‌  ಮೂಲಕ ಸರಿಪಡಿಸಲು ಪ್ರಯತ್ನಿಸಿದರೂ, ಸಮಸ್ಯೆ ಮುಂದುವರೆದಿದೆ. ಇದನ್ನು ಪರಿಹರಿಸಲು, ಬಿ ಎಂ ಡಬ್ಲ್ಯೂ ಸೆಮಿಕಂಡಕ್ಟರ್ ರಿಲೇಯನ್ನು ಎಲೆಕ್ಟ್ರೋಮೆಕಾನಿಕಲ್ ಸ್ಟಾರ್ಟರ್ ರಿಲೇಯೊಂದಿಗೆ  ಬದಲಿಸಲು ಯೋಜಿಸುತ್ತಿದೆ.

ಸುಮಾರು 25,000 ಬೈಕ್ಗಳನ್ನು ದೋಷಯುಕ್ತ ರಿಲೇ ಸೆಟ್‌ಅಪ್‌ನಿಂದ ಸಮಸ್ಯೆ ಆಗಿರಬಹುದು. ಹಾರ್ಡ್‌ವೇರ್ ಬದಲಿಸುವುದರ ಜೊತೆಗೆ, R 1300 GS ಗೆ ಕೆಲವು ಸಾಫ್ಟ್‌ವೇರ್ ಅಡ್ಜಸ್ಟಮೆಂಟ್ ಗಳ ಅಗತ್ಯವಿದೆ. ಬೇಸಿಕ್‌ ಸ್ಟಾರ್ಟರ್ ರಿಲೇ ಈಗಲೇ ಸ್ಟಾಕ್‌ನಲ್ಲಿದೆ, ಆದರೆ ಹೊಸ ಪಾಟ್‌೯ ಅನ್ನು ಸಂಯೋಜಿಸಲು ಸಾಫ್ಟ್‌ವೇರ್ ಅಪ್‌ಡೇಟ್ ಅಗತ್ಯವಿರುವುದರಿಂದ ಇದನ್ನು ಆಗಸ್ಟ್ ಮಧ್ಯದಲ್ಲಿ ಜಾಗತಿಕವಾಗಿ ಬಿಡುಗಡೆ ಮಾಡಲಾಗುವುದು.

BMW R 1300 GS

ಈವರೆಗೆ, ವಿಶ್ವದಾದ್ಯಂತ ಸುಮಾರು 8 ಬೈಕ್‌ಗಳಲ್ಲಿ ಸ್ಟಾರ್ಟರ್ ರಿಲೇಗಳು ಕರಗಿದ ಅಥವಾ ಸುಟ್ಟುಹೋಗಿರುವ ಸಮಸ್ಯೆಗಳು ಕಂಡುಬಂದಿವೆ. ಈ ಸಮಸ್ಯೆಯನ್ನು ನಿವಾರಿಸಲು, ಬಿ ಎಂ ಡಬ್ಲ್ಯೂ ನಿಮಗೆ ಯಾವುದೇ ವೆಚ್ಚವಿಲ್ಲದೆ ದೋಷಯುಕ್ತ ಸೆಮಿಕಂಡಕ್ಟರ್‌ಗಳನ್ನು ಎಲೆಕ್ಟ್ರೋಮೆಕಾನಿಕಲ್ ಸ್ಟಾರ್ಟರ್ ರಿಲೇಯಿಂದ ಬದಲಾಯಿಸುತ್ತಿದೆ.

BMW R 1300 GS ಎಂಜಿನ್ ಮತ್ತು ವೈಶಿಷ್ಟ್ಯಗಳು

ಬಿ ಎಂ ಡಬ್ಲ್ಯೂಇತ್ತೀಚೆಗೆ ಅದರ ಅಡ್ವೆಂಚರ್ ಬೈಕ್‌ಗಳಲ್ಲಿ ಅಗ್ರಸ್ಥಾನದಲ್ಲಿರುವ R 1300 GS ಅನ್ನು ಬಿಡುಗಡೆ ಮಾಡಿದೆ. ಇದನ್ನುಅದರ ಪವರ್, ವರ್ಸಾಟಾಲಿಟಿ  ಮತ್ತು ಅತ್ಯಾಧುನಿಕ ವೈಶಿಷ್ಟ್ಯಗಳಿಂದ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಇದು 143 bhp ಪವರ್ ಮತ್ತು 145 Nm ಟಾರ್ಕ್ ನೀಡುವ ಬಲಿಷ್ಠ 1,300cc ಎಂಜಿನ್ ಹೊಂದಿದೆ. ಸುರಕ್ಷತೆ ಮತ್ತು ಅನುಕೂಲತೆಯನ್ನು ಹೆಚ್ಚಿಸಲು, ಇದು ನಾಲ್ಕು ರೈಡಿಂಗ್ ಮೋಡ್‌ಗಳು ಇವೆ ಅವುಗಳೆಂದರೆ, ರೈನ್, ರೋಡ್, ಎಕೋ, ಎಂಡುರೋ (Rain, Road, Eco, Enduro) ಮತ್ತು ಸುಗಮ ಸವಾರಿಗಾಗಿ ABS ಮತ್ತು ಟ್ರ್ಯಾಕ್ಷನ್ ಕಂಟ್ರೋಲ್ ಅನ್ನು ಒಳಗೊಂಡಿದೆ.

ಬಿ ಎಂ ಡಬ್ಲ್ಯೂR 1300 GS 6.5 ಇಂಚಿನ ಕಲರ್ TFT ಡಿಸ್ಪ್ಲೇ, ಬ್ಲೂಟೂತ್ ಸಂಪರ್ಕ, ಕೀಲೆಸ್ ಇಗ್ನಿಷನ್, ರೈಡ್-ಆಫ್ ಅಸಿಸ್ಟೆಂಟ್ ಮತ್ತು ಕ್ರಾಸ್-ಸ್ಪೋಕ್ ಟ್ಯೂಬ್‌ಲೆಸ್ ಚಕ್ರಗಳೊಂದಿಗೆ ಬರುತ್ತದೆ. ಬೈಕನ್ನು ನಿಮ್ಮ ಇಚ್ಛೆಯಂತೆ ಕಸ್ಟಮೈಸ್ ಮಾಡಲು ಬಿ ಎಂ ಡಬ್ಲ್ಯೂವಿವಿಧ ಅಕ್ಸೆಸರೀಸ್ಗಳು ಮತ್ತು ಸಲಹೆಗಳನ್ನು ಒದಗಿಸುತ್ತದೆ. ನೀವು ಅದನ್ನು ನಿಮ್ಮ ಅಗತ್ಯಗಳು ಮತ್ತು ಶೈಲಿಗೆ ಹೊಂದಿಕೊಳ್ಳುವಂತೆ ಮಾಡಿಸಿಕೊಳ್ಳಬಹುದು. ಈ ಬೈಕ್‌ನ ಆರಂಭಿಕ ಬೆಲೆ 20.95 ಲಕ್ಷ ರೂಪಾಯಿ (ಎಕ್ಸ್-ಶೋರೂಂ).

ದನ್ನೂ ಓದಿ: ಸುಜುಕಿ ಇಂಡಿಯಾ 3.8 ಲಕ್ಷಕ್ಕೂ ಹೆಚ್ಚು 125 ಸಿಸಿ ಸ್ಕೂಟರ್‌ಗಳನ್ನು ಹಿಂಪಡೆಯುತ್ತಿದೆ

Leave a Comment