ಹೊಸ ಯೆಸ್ಡಿ ಅಡ್ವೆಂಚರ್(Yezdi Adventure) ಬೈಕ್ ಈಗ ಮಾರುಕಟ್ಟೆಗೆ ಬಂದಿದೆ. ಈ ಬೈಕಿನ ಬೆಲೆ ಬಣ್ಣವನ್ನು ಆಧರಿಸಿ 2.10 ಲಕ್ಷ ರೂಪಾಯಿಗಳಿಂದ ಪ್ರಾರಂಭವಾಗಿ 2.20 ಲಕ್ಷ ರೂಪಾಯಿಗಳವರೆಗೆ (ಎಕ್ಸ್ ಶೋರೂಂ) ಆಗುತ್ತದೆ. ಬೈಕ್ನ ಮೂಲ ರಚನೆಯಲ್ಲಿ ಹೆಚ್ಚಿನ ಬದಲಾವಣೆಗಳಿಲ್ಲದಿದ್ದರೂ, ಹಲವು ವಿಭಾಗಗಳಲ್ಲಿ ಸುಧಾರಣೆಗಳನ್ನು ಮಾಡಲಾಗಿದೆ.
ಹೊಸ ಯೆಜ್ಡಿ ಅಡ್ವೆಂಚರ್ಮೋಟಾರ್ಸೈಕಲ್ನ ಬೆಲೆಯನ್ನು ₹6,000 ರಷ್ಟು ಕಡಿಮೆ ಮಾಡಲಾಗಿದೆ. ನೀವು ಆನ್ಲೈನ್ ಅಲ್ಲಿ ಬುಕ್ ಮಾಡಿದರೆ, ನಿಮಗೆ ₹5,000 ವರೆಗಿನ ರೀಫಂಡ್ ಕೂಡ ಸಿಗುತ್ತದೆ. ಈ ಬೈಕ್ ಹೊಸ ಬಣ್ಣ ಆಯ್ಕೆಗಳು ಲಭ್ಯವಿದೆ ಅವುಗಳೆಂದರೆ, ಮ್ಯಾಗ್ನೈಟ್ ಮಾರುನ್(Magnite Maroon), ಟಾರ್ನಾಡೋ ಬ್ಲ್ಯಾಕ್(Tornado Black), ವುಲ್ಫ್ ಗ್ರೇ (Wolf Grey) ಮತ್ತು ಗ್ಲೇಸಿಯರ್ ವೈಟ್(Glacier White). ಮೊದಲ ಎರಡು ಬಣ್ಣಗಳು ಹೆಚ್ಚು ದುಬಾರಿಯಾದರೆ, ಕೊನೆಯ ಎರಡು ಹೆಚ್ಚು ಬಜೆಟ್-ಸ್ನೇಹಿಯಾಗಿವೆ.
ಯೆಜ್ಡಿ ಅಡ್ವೆಂಚರ್ ವಿಶೇಷತೆಗಳು
ಮೋಟಾರ್ಸೈಕಲ್ನಲ್ಲಿನ ತಿಳಿದಿರುವ ಸಮಸ್ಯೆಗಳನ್ನು ನಿವಾರಿಸಲು ಹಲವು ಬದಲಾವಣೆಗಳನ್ನು ಮಾಡಲಾಗಿದೆ. ಉದಾಹರಣೆಗೆ, ಇಂಜಿನ್ಗೆ ಸೆಂಟರ್ ನಲ್ಲಿಇರಿಸಲಾದ ಎಕ್ಸಾಸ್ಟ್ ಹೆಡರ್ ಮತ್ತು ಸುಧಾರಿತ ತಂಪಾಗಿಸುವ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಇದು ತಾಪ ನಿಯಂತ್ರಣವನ್ನು ಸುಧಾರಿಸುತ್ತದೆ ಎಂದು ಕಂಪನಿ ಹೇಳಿದೆ. ಪರಿಷ್ಕೃತ ಎಂಜಿನ್ ಈಗ 29.60 ಎಚ್ಪಿ ಮತ್ತು 29.56 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.
ಹೊಸ ಯೆಸ್ಡಿ ಅಡ್ವೆಂಚರ್ನ(Yezdi Adventure) ಟ್ಯಾಂಕ್ ರೈಲ್ಗಳು ಹಿಂದಿನ ಮಾದರಿಯೊಂದಿಗೆ ಹೋಲಿಸಿದಾಗ ಗಮನಾರ್ಹವಾಗಿ ಭಿನ್ನವಾಗಿವೆ. ಅವು ಚಿಕ್ಕದಾಗಿದ್ದು, ಹೆಚ್ಚು ಸೊಗಸಾದ ವಿನ್ಯಾಸವನ್ನು ಹೊಂದಿವೆ. ಗಮನಸೆಳೆಯುವ ವಿವರವೆಂದರೆ ‘ESTD 69’ ಎಂಬ ಸ್ಟಿಕ್ಕರ್ನೊಂದಿಗೆ ಪ್ಲಾಸ್ಟಿಕ್ ಇನ್ಸರ್ಟ್, ಇದು ಕಂಪನಿಯ ಸ್ಥಾಪನೆಯ ವರ್ಷವನ್ನು ತೋರಿಸುತ್ತದೆ. ಈ ರೈಲ್ಗಳು ಈಗ ಹಗುರವಾಗಿವೆ ಮತ್ತು ಬೈಕ್ನ ನವೀಕರಿಸಿದ ನೋಟಕ್ಕೆ ಹೊಂದಿಕೊಳ್ಳುವಂತೆ ಸುಧಾರಿಸಲಾಗಿದೆ.

ಹೊಸ ಅಡ್ವೆಂಚರ್ನ ತೂಕ ಹಿಂದಿನ ಮಾದರಿಯಂತೆಯೇ ಇರುತ್ತದೆ. ಹೊಸ ಬಣ್ಣ ಆಯ್ಕೆಗಳು ಮತ್ತು ಗ್ರಾಫಿಕ್ಗಳು, ವೃತ್ತಾಕಾರದ ಹೆಡ್ಲೈಟ್ ಬೈಕಿನ ಆಕರ್ಷಣೆಯನ್ನು ಹೆಚ್ಚಿಸುತ್ತವೆ. ಗಮನಸೆಳೆಯುವ ಬದಲಾವಣೆ ಎಂದರೆ ಹೊಸ ಟಿಎಫ್ಟಿ ಇನ್ಸ್ಟ್ರುಮೆಂಟ್ ಕ್ಲಸ್ಟರ್. ಹಾಗೂ ಈ ಬೈಕ್ 220 ಮಿಮೀ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದ್ದು ಇದು ಅತ್ಯುತ್ತಮ ಆಫ್-ರೋಡ್ ಸಾಮರ್ಥ್ಯವನ್ನು ಒದಗಿಸುತ್ತದೆ.
2024 Yezdi Adventure: ಎಂಜಿನ್ ಮತ್ತು ಫೀಚರ್ಸ್
ಈ ಬೈಕ್ ನಿಮಗೆ ಆರಾಮದಾಯಕವಾದ ಸವಾರಿಯ ಜೊತೆಗೆ ಅತ್ಯುತ್ತಮ ಕಾರ್ಯಕ್ಷಮತೆಯನ್ನು ನೀಡುತ್ತದೆ. 334 ಸಿಸಿ ಸಿಂಗಲ್-ಸಿಲಿಂಡರ್, ಲಿಕ್ವಿಡ್-ಕೂಲ್ಡ್ ಎಂಜಿನ್ 29.60 ಪಿಎಸ್ ಶಕ್ತಿ ಮತ್ತು 29.56 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು ಬೈಕ್ಗೆ ಉತ್ತಮ ವೇಗ ಮತ್ತು ಚುರುಕುತನವನ್ನು ನೀಡುತ್ತದೆ. ಇದರಲ್ಲಿ 6-ಸ್ಪೀಡ್ ಗಿಯರ್ಬಾಕ್ಸ್, 15.5 ಲೀಟರ್ ಇಂಧನ ಟ್ಯಾಂಕ್ ಸಾಮರ್ಥ್ಯ ಹಾಗೂ ಇದರ ಸೀಟ್ 815 ಮಿ.ಮೀ ಎತ್ತರವನ್ನು ಹೊಂದಿದೆ. ಈ ಬೈಕ್ 187 ಕಿ.ಗ್ರಾಂ ತೂಕವಿದ್ದು, ಈ ಬೈಕ್ ಅನ್ನು ಹ್ಯಾಂಡಲ್ ಮಾಡಲು ಸುಲಭವಾಗಿದೆ ಮತ್ತು ನಗರ ಮತ್ತು ಹೈವೇ ಎರಡರಲ್ಲೂ ಸವಾರಿ ಮಾಡಲು ಸೂಕ್ತವಾಗಿದೆ.
ಈ ಯೆಸ್ಡಿ ಅಡ್ವೆಂಚರ್(Yezdi Adventure) ಬೈಕ್ ಮುಂಭಾಗದಲ್ಲಿ21 ಇಂಚಿನ ಮತ್ತು ಹಿಂಭಾಗದಲ್ಲಿ 17 ಇಂಚಿನ ಸ್ಪೋಕ್ ವೀಲ್ಗಳನ್ನು ಹೊಂದಿದೆ. ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಸಸ್ಪೆನ್ಷನ್ ಮತ್ತು ಹಿಂಭಾಗದಲ್ಲಿ 7-ಸ್ಟೆಪ್ ಅಡ್ಜಸ್ಟಬಲ್ ಫ್ರೀ ಲೋಡ್ ಮೋನೋ-ಶಾಕ್ ಸಸ್ಪೆನ್ಷನ್ ಅನ್ನು ಹೊಂದಿದೆ. ಮುಂಭಾಗ ಮತ್ತು ಹಿಂಭಾಗದ ಡಿಸ್ಕ್ ಬ್ರೇಕ್ಗಳು ಮತ್ತು ಫ್ಲೋಟಿಂಗ್ ಕ್ಯಾಲಿಪರ್ಗಳನ್ನು ಹೊಂದಿದ್ದು, ಹೆಚ್ಚುವರಿ ಸುರಕ್ಷತೆಗಾಗಿ ABS ನೊಂದಿಗೆ ವಿಶ್ವಾಸಾರ್ಹ ಬ್ರೇಕಿಂಗ್ ಕಾರ್ಯಕ್ಷಮತೆಯನ್ನು ಖಚಿತಪಡಿಸುತ್ತದೆ. ಮುಂಭಾಗದ ಬ್ರೇಕ್ ಡಿಸ್ಕ್ ಸೈಜ್ 320 ಮಿಮೀ ಮತ್ತು ಹಿಂಭಾಗದ ಬ್ರೇಕ್ ಡಿಸ್ಕ್ 240 ಮಿಮೀ ಆಗಿದೆ.
ಇದನ್ನೂ ಓದಿ: ಹೀರೋ ಎಕ್ಸ್ಟ್ರೀಮ್ 160R 4V ಹೊಸ ಅವತಾರದಲ್ಲಿ 1.38 ಲಕ್ಷ ರೂಪಾಯಿಗೆ ಬಿಡುಗಡೆ