TVS Apache RR 310: ಹೊಸ ಟಿವಿಎಸ್ ಅಪಾಚೆ ಆರ್‌ಆರ್‌ 310 ಬಿಡುಗಡೆ

2024 TVS Apache RR 310 ಗೆ ಕ್ರೂಸ್ ಕಂಟ್ರೋಲ್ ಅನ್ನು ಸ್ಟ್ಯಾಂಡರ್ಡ್ ಆಗಿ ಸೇರಿಸಲಾಗಿದೆ

ತಮಿಳುನಾಡಿನ ಹೆಮ್ಮೆಯ ದೇಶೀಯ ದ್ವಿಚಕ್ರ ವಾಹನ ತಯಾರಕ, ಟಿವಿಎಸ್ ಮೋಟಾರ್ಸ್ (TVS Motor), ತನ್ನ ನವೀನ ವಿನ್ಯಾಸ ಮತ್ತು ಆಕರ್ಷಕ ವೈಶಿಷ್ಟ್ಯಗಳಿಂದ ದೇಶೀಯ ಮಾರುಕಟ್ಟೆಯಲ್ಲಿ ಗ್ರಾಹಕರನ್ನು ಸೆಳೆಯುತ್ತಿದೆ. ಇಂದು (ಸೆಪ್ಟೆಂಬರ್ 16), ಕಂಪನಿಯು ತನ್ನ ಜನಪ್ರಿಯ ಅಪಾಚೆ ಆರ್‌ಆರ್‌ 310 (TVS Apache RR 310) ಮೋಟಾರ್‌ಸೈಕಲ್‌ ಅನ್ನು ಬಿಡುಗಡೆ ಮಾಡಿದೆ. ಈ ಮೋಟಾರ್‌ಸೈಕಲ್, ತನ್ನ ಆಕರ್ಷಕ ವಿನ್ಯಾಸ ಮತ್ತು ಅತ್ಯಾಧುನಿಕ ವೈಶಿಷ್ಟ್ಯಗಳಿಂದ ಎಲ್ಲರ ಗಮನ ಸೆಳೆಯುತ್ತಿದೆ.

ಪ್ರಸಿದ್ಧ ಟಿವಿಎಸ್ ಅಪಾಚೆ ಸರಣಿಯಿಂದ ಬಂದಿರುವ ನೂತನ ಆರ್‌ಆರ್‌ 310 ಬೈಕ್ ಭಾರತೀಯ ಮಾರುಕಟ್ಟೆಗೆ ಸ್ಪರ್ಧಾತ್ಮಕ ಬೆಲೆಯಲ್ಲಿ ಪ್ರವೇಶಿಸಿದೆ. ಸ್ಪೋರ್ಟಿ ವಿನ್ಯಾಸ ಮತ್ತು ಅತ್ಯಾಧುನಿಕ ತಂತ್ರಜ್ಞಾನದ ಸಮ್ಮಿಶ್ರಣವಾಗಿರುವ ಈ ಬೈಕ್ ರೂ.2.75 ಲಕ್ಷ (ಎಕ್ಸ್ ಶೋರೂಂ) ಎಂಬ ಆರಂಭಿಕ ಬೆಲೆಯೊಂದಿಗೆ ನಿಮ್ಮ ಗ್ಯಾರೇಜ್‌ಗೆ ಬರಲು ಸಿದ್ಧವಾಗಿದೆ. ಆಸಕ್ತರು ಕಂಪನಿಯ ಅಧಿಕೃತ ವೆಬ್‌ಸೈಟ್‌ ಅಥವಾ ಹತ್ತಿರದ ಡೀಲರ್‌ಶಿಪ್‌ಗೆ ಭೇಟಿ ನೀಡಿ ಬುಕ್ಕಿಂಗ್ ಮಾಡಬಹುದು.

ಟಿವಿಎಸ್ ಅಪಾಚೆ ಆರ್‌ಆರ್‌ 310 ಬೈಕ್‌ನ ವಿನ್ಯಾಸದಲ್ಲಿ ಯಥಾಸ್ಥಿತಿಯನ್ನು ಕಾಯ್ದುಕೊಳ್ಳಲಾಗಿದ್ದು, ಕೆಲವು ಸಣ್ಣಪುಟ್ಟ ಮಾರ್ಪಾಡುಗಳನ್ನು ಮಾತ್ರ ಮಾಡಲಾಗಿದೆ. ಹೊಸ ಬಾಂಬರ್ ಗ್ರೇ ಬಣ್ಣದ ಆಯ್ಕೆಗಳು, ಏರೋ ವಿಂಗ್ಲೆಟ್‌ಗಳು ಮತ್ತು ಪಾರದರ್ಶಕ ಕ್ಲಚ್ ಕವರ್ ಬೈಕ್‌ಗೆ ಒಂದು ವಿಶಿಷ್ಟವಾದ ಗುರುತನ್ನು ನೀಡುತ್ತವೆ. ಪೂರ್ಣ ಫೇಯರಿಂಗ್‌ನೊಂದಿಗೆ, ಬೈಕ್‌ನ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸಲಾಗಿದೆ.  

ಇದನ್ನೂ ಓದಿ: ಟಿವಿಎಸ್ ರೋನಿನ್ ಪರಾಕ್ರಮ್ ಬೈಕ್ ನಿಂದ ಕಾರ್ಗಿಲ್ ಯುದ್ಧ ವೀರ ಯೋಧರಿಗೆ ವಿಶಿಷ್ಟ ಗೌರವ ನಮನ

TVS Apache RR 310
TVS Apache RR 310

ಟಿವಿಎಸ್ ಅಪಾಚೆ ಆರ್‌ಆರ್‌ 310: ಫೀಚರ್ಸ್ ಗಳು

ಈ ಆಧುನಿಕ ಬೈಕು ಟಿಎಫ್‌ಟಿ ಡಿಸ್ಪ್ಲೇ, ಬ್ಲೂಟೂತ್ ಕನೆಕ್ಟಿವಿಟಿ ಮತ್ತು ನ್ಯಾವಿಗೇಷನ್‌ನಂತಹ ಸುಧಾರಿತ ತಂತ್ರಜ್ಞಾನಗಳನ್ನು ಹೊಂದಿದೆ. ಸ್ಲಿಪ್ಪರ್ ಮತ್ತು ಅಸಿಸ್ಟ್ ಕ್ಲಚ್, ಹೀಟೇಡ್ ಮತ್ತು ಕೋಲ್ಡ್ ಸೀಟ್‌ನಂತಹ ವೈಶಿಷ್ಟ್ಯಗಳು ನಿಮ್ಮ ಪ್ರಯಾಣವನ್ನು ಇನ್ನಷ್ಟು ಆರಾಮದಾಯಕವಾಗಿಸುತ್ತವೆ. ನಾಲ್ಕು ವಿಭಿನ್ನ ರೈಡಿಂಗ್ ಮೋಡ್‌ಗಳು, ಬೈ ಡೈರೆಕ್ಷನಲ್ ಕ್ವಿಕ್‌ಶಿಫ್ಟರ್, ಕಾರ್ನರಿಂಗ್ ಟ್ರಾಕ್ಷನ್ ಕಂಟ್ರೋಲ್, ಕ್ರೂಸ್ ಕಂಟ್ರೋಲ್ ಮತ್ತು ಆರ್ಟಿ-ಡಿಎಸ್ಇ (ರೇಸ್ ಟ್ಯೂನ್ಡ್ ಲೀನಿಯರ್ ಸ್ಟೆಬಿಲಿಟಿ ಕಂಟ್ರೋಲ್) ಇತರ ಅತ್ಯಾಧುನಿಕ ವೈಶಿಷ್ಟ್ಯಗಳು ಹೊಂದಿದೆ.

ಟಿವಿಎಸ್ ಅಪಾಚೆ ಆರ್‌ಆರ್‌ 310 (TVS Apache RR 310) ಮೋಟಾರ್‌ಸೈಕಲ್, ಸವಾರರ ಸುರಕ್ಷತೆಯನ್ನು ಮುಖ್ಯವಾಗಿರಿಸಿಕೊಂಡು ವಿನ್ಯಾಸಗೊಳಿಸಲಾಗಿದೆ. ಮುಂಭಾಗದ ಯುಎಸ್‌ಡಿ ಫೋರ್ಕ್ ಮತ್ತು ಹಿಂಭಾಗದ ಪ್ರಿಲೋಡ್ ಅಡ್ಜಸ್ಟಬಲ್ ಸಸ್ಪೆನ್ಷನ್ ಸೆಟಪ್‌, ಮುಂಭಾಗ ಹಾಗೂ ಹಿಂಭಾಗದ ಡಿಸ್ಕ್ ಬ್ರೇಕ್‌, ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಮತ್ತು ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ನಂತಹ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಳವಡಿಸುವ ಮೂಲಕ ಸವಾರರಿಗೆ ಸುರಕ್ಷಿತ ಮತ್ತು ಆರಾಮದಾಯಕವಾದ ಸವಾರಿ ಅನುಭವವನ್ನು ನೀಡುತ್ತದೆ.

ಇದನ್ನೂ ಓದಿ: ಸ್ಪೋರ್ಟಿ ಲುಕ್ ನೊಂದಿಗೆ ಯಮಹಾ R15M ಕಾರ್ಬನ್ ಫೈಬರ್ ಎಡಿಷನ್ ಬಿಡುಗಡೆ

ಟಿವಿಎಸ್ ಅಪಾಚೆ ಆರ್‌ಆರ್‌ 310: ಎಂಜಿನ್

2024ರ ಅಪಾಚೆ ಆರ್‌ಆರ್ 310 ನ ಪವರ್‌ಟ್ರೇನ್ ವಿಷಯಕ್ಕೆ ಬಂದಾಗ, ಅದರಲ್ಲಿ 312.2cc ಸಿಂಗಲ್-ಸಿಲಿಂಡರ್, ರಿವರ್ಸ್ ಇನ್‌ಕ್ಲೈಂಡ್ ಲಿಕ್ವಿಡ್ ಕೂಲ್ಡ್ ಎಂಜಿನ್ ಇರಲಿದ್ದು, ಇದು ಈಗ 37.48 bhp ಶಕ್ತಿ ಮತ್ತು 29 Nm ಟಾರ್ಕ್ ಉತ್ಪಾದಿಸುತ್ತದೆ. ಹಿಂದಿನ ಮಾದರಿಯೊಂದಿಗೆ ಹೋಲಿಸಿದರೆ, ಇದು ಹೆಚ್ಚಳವಾಗಿದೆ. ಈ ಎಂಜಿನ್ ಸಹ 6-ಸ್ಪೀಡ್ ಕನ್ಸ್ಟೆಂಟ್ ಮೆಶ್ ಗಿಯರ್‌ಬಾಕ್ಸ್ ಮತ್ತು ಸ್ಟಾಂಡರ್ಡ್ ಸ್ಲಿಪರ್ ಕ್ಲಚ್ ಜೊತೆಗೆ ಲಭ್ಯವಿರುತ್ತದೆ. ಈ ಬೈಕ್ ಈಗ ಸ್ಪೋರ್ಟ್ ಮತ್ತು ಟ್ರ್ಯಾಕ್ ಮೋಡ್‌ಗಳಲ್ಲಿ ಇದರ ಟಾಪ್ ಸ್ಪೀಡ್ 164 kmph ಆಗಿರುತ್ತದೆ ಹಾಗೂ 0-60 kmph ವೇಗವನ್ನು 2.82 ಸೆಕೆಂಡುಗಳಲ್ಲಿ ಹಾಗೂ 0-100 kmph ವೇಗವನ್ನು 6.74 ಸೆಕೆಂಡುಗಳಲ್ಲಿ ತಲುಪುವಷ್ಟು ಸಾಮರ್ಥ್ಯ ಹೊಂದಿದೆ.

Leave a Comment